ಧರ್ಮಶಾಲಾ: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ.
ಸರಣಿ ಜಯದ ನಿರೀಕ್ಷೆಯಲ್ಲಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ಇದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ. ಆದರೆ ಶ್ರೀಲಂಕಾ ತಂಡ ಎರಡು ಬದಲಾವಣೆ ಮಾಡಿಕೊಂಡಿದ್ದು, ಜನಿತಗ್ ಲಿಯಾನಗೆ ಮತ್ತು ಜೆಫ್ಫೆರಿ ವಂಡೆರ್ಸೆ ಬದಲಿಗೆ ಬಿನುರ ಫರ್ನಾಂಡೋ ಮತ್ತು ದನುಷ್ಕಾ ಗುಣತಿಲಕ ಆಡಲಿದ್ದಾರೆ.
ಈ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ ಕೇವಲ ಒಂದೇ ಟಿ20 ಪಂದ್ಯ ನಡೆದಿದೆ. 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು, ಆದರೂ ಆ ಪಂದ್ಯದಲ್ಲಿ ಭಾರತ ಸೋಲುಕಂಡಿತ್ತು. 2019ರಲ್ಲಿ ಮತ್ತೊಂದು ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧವೇ ನಡೆಯಬೇಕಿತ್ತಾದರೂ ಮಳೆಯ ಕಾರಣ ರದ್ಧಾಗಿತ್ತು.