ಕರ್ನಾಟಕ

karnataka

ETV Bharat / sports

IND VS SA 1ST ODI .. ಟಾಸ್ ಗೆದ್ದು ಭಾರತ ಬೌಲಿಂಗ್ ಆಯ್ಕೆ - India win toss elect to bowl against South Africa

ಲಖನೌದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

india-win-toss-elect-to-bowl-against-south-africa-in-1st-odi
IND VS SA 1ST ODI .. ಟಾಸ್ ಗೆದ್ದು ಭಾರತ ಬೌಲಿಂಗ್ ಆಯ್ಕೆ

By

Published : Oct 6, 2022, 3:58 PM IST

ಲಖನೌ :ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ. ಪಂದ್ಯವನ್ನು 40 ಓವರ್​ ಗಳಿಗೆ ಸೀಮಿತಗೊಳಿಸಲಾಗಿದೆ. ರುತುರಾಜ್​ ಗಾಯಕ್ವಾಡ್​ ಈ ಪಂದ್ಯದ ಮೂಲಕ ಏಕದಿನ ಪಂದ್ಯಾಟಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

2 ಗಂಟೆಗೆ ಆರಂಭವಾಗಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಮಳೆಯಿಂದಾಗಿ ವಿಳಂಬವಾಗಿತ್ತು. ಇದೀಗ ಭಾರತ ಟಾಸ್​ ಗೆದ್ದು ಬೌಲಿಂಗ್​ ಮಾಡಲಿದೆ. ಲಖನೌದ ಏಕಾನಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಭಾರತ ಪಂದ್ಯ ಗೆಲ್ಲುವ ತವಕದಲ್ಲಿದೆ. ಕಪ್ಪು ಮಣ್ಣಿನ ಪಿಚ್‌ ಇದಾಗಿದ್ದು, ಇದರಿಂದ ವೇಗದ ಬೌಲರ್‌ಗಳಿಗೆ ಮತ್ತು ಸ್ಪಿನ್ನರ್‌ಗಳಿಗೂ ಅನುಕೂಲವಾಗಲಿದೆ.

ಭಾರತ ತಂಡ: ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿ.ಕೀ), ಸಂಜು ಸಾಮ್ಸನ್​ (ವಿ.ಕೀ), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಾಹರ್.

ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಜಾನೆಮನ್ ಮಾಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನಾರ್ಖಿಯಾ, ವೇಯ್ನ್ ಪಾರ್ನೆಲ್, ಆಂಡಿಲೆ ಫೆಹ್ಲುಕ್ವಾಯೊ,ಡ್ವೇನ್​ ಪ್ರೆಟೋರಿಯಸ್​,ಕಗಿಸೋ ರಬಾಡ, ತಬ್ರೇಜ್ ಶಮ್ಸಿ.

ಇದನ್ನೂ ಓದಿ :IND VS SA 1ST ODI .. ಮಳೆಯಿಂದಾಗಿ ಪಂದ್ಯ ವಿಳಂಬ

ABOUT THE AUTHOR

...view details