ಲಾಹೋರ್ :ಪಾಕಿಸ್ತಾನ ಕಳೆದ ಎರಡೂ ವರ್ಷಗಳಿಂದ 29 ಟಿ20 ಪಂದ್ಯಗಳಲ್ಲಿ 20ರಲ್ಲಿ ಜಯ ಸಾಧಿಸಿದೆ. ಈ ಯಶಸ್ಸಿನಲ್ಲಿ ನಾಯಕ ಬಾಬರ್ ಅಜಮ್ ಮತ್ತು ರಿಜ್ವಾನ್ ಅವರ ಪಾತ್ರ ಮಹತ್ವವಾಗಿದೆ. ಈ ಜೋಡಿ 2021ರಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದೆ.
ಈ ವರ್ಷದಲ್ಲಿ ರನ್ಗಳ ಪ್ರವಾಹವನ್ನೇ ಹರಿಸಿರುವ ರಿಜ್ವಾನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 1000 ರನ್ಗಳಿಸಿದ ಮತ್ತು ಟಿ20 ಕ್ರಿಕೆಟ್ನಲ್ಲಿ 2000 ರನ್ಗಳಿಸಿದ ಮೊದಲ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರವಾಗಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಈ ಇಬ್ಬರು ಆಟಗಾರರ ಬಗ್ಗೆ ಟಿವಿ ಸಂದರ್ಶನವೊಂದರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ನಾವೆಲ್ಲಾ ಪಾಕಿಸ್ತಾನ ತಂಡದಲ್ಲಿ ರೋಹಿತ್-ವಿರಾಟ್ ಕೊಹ್ಲಿ ಅಥವಾ ರಾಹುಲ್ ಅಂತಾ ಆಟಗಾರರಿಲ್ಲ ಎಂದು ಹೇಳುತ್ತಿದ್ದೆವು.
ಆದರೆ, ಕೆಲವು ದಿನಗಳ ನಂತರ ಭಾರತೀಯರು, ರಿಜ್ವಾನ್ ಮತ್ತು ಬಾಬರ್ ಅವರಂತಹ ಆಟಗಾರರನ್ನು ನಾವು ಹೊಂದಿಲ್ಲ ಎಂದು ಹೇಳುತ್ತಾರೆ" ಎಂದು ಲತೀಫ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ನಾವು ರಿಜ್ವಾನ್-ಬಾಬರ್ ಅವರ ಸ್ಕೋರಿಂಗ್ ರೇಟ್ ಅನ್ನು ಟೀಕಿಸಿದ್ದೆವು. ಆದರೆ, ಈ ಜೋಡಿ ಅದ್ಭುತ ರೇಟ್ ಜೊತೆಗೆ ರನ್ಗಳಿಸಿ ಟೀಕೆಗೆ ಉತ್ತರಿಸಿದ್ದಾರೆ ಎಂದು ಲತೀಫ್ ಹೇಳಿದ್ದಾರೆ.
ಬಾಬರ್ ಮತ್ತು ರಿಜ್ವಾನ್ ಟಿ20 ಕ್ರಿಕೆಟ್ನಲ್ಲಿ ಆರಂಭಿಕರಾಗಿ 6 ಶತಕಗಳ ಜೊತೆಯಾಟ ನೀಡುವ ಮೂಲಕ ರೋಹಿತ್-ಧವನ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರಿಜ್ವಾನ್ 2021ರಲ್ಲಿ 2036 ಮತ್ತು ಬಾಬರ್ ಅಜಮ್ 1779 ರನ್ಗಳಿಸಿದ್ದಾರೆ. ಇದು ಕ್ಯಾಲೆಂಡರ್ ವರ್ಷದಲ್ಲಿ ಬ್ಯಾಟರ್ ಗಳಿಸಿದ ಅತ್ಯಧಿಕ ರನ್ಗಳಾಗಿವೆ.
ಇದನ್ನೂ ಓದಿ:ರಿಜ್ವಾನ್ ವಿಶ್ವದಾಖಲೆ: ಟಿ-20ಯಲ್ಲಿ ಒಂದೇ ವರ್ಷ 2000 ರನ್ ಸಿಡಿಸಿದ ಏಕೈಕ ಬ್ಯಾಟರ್