ಹರಾರೆ:ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಬಲ ಬೌಲಿಂಗ್ ದಾಳಿಗೆ ಎದುರಾಳಿ ತಂಡ ತತ್ತರಿಸಿತು. ಹೀಗಾಗಿ 40.3 ಓವರ್ಗಳಲ್ಲಿ ಜಿಂಬಾಬ್ವೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 189 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆಗೆ ಆರಂಭದಲ್ಲೇ ದೀಪಕ್ ಚಹರ್ ಆಘಾತ ನೀಡಿದರು. ಆರಂಭಿಕರಾದ ಇನೋಸೆಂಟ್ ಕೈಯಾ(4), ತಡಿವಾನಾಶೆ (8) ವಿಕೆಟ್ ಉರುಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರ ಬಳಿಕ ಮಾಧವೀರ್ (5) ವಿಕೆಟ್ ಕೂಡಾ ಪಡೆದುಕೊಂಡರು.
ಮಧ್ಯಮ ಕ್ರಮಾಂಕದಲ್ಲಿ ವೆಸ್ಲಿ(1) ಸಿರಾಜ್ಗೆ ಬಲಿಯಾದರೆ, ಸಿಕಂದರ್ ರಾಜಾ(12) ಪ್ರಸಿದ್ಧ ಕೃಷ್ಣ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್, ಕ್ಯಾಪ್ಟನ್ ರೆಗಿಸ್ ಚಕಬ್ವಾ(35) ಭಾರತವನ್ನು ಸ್ವಲ್ಪ ಹೊತ್ತು ಕಾಡಿದರು. ಆದರೆ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಅಕ್ಸರ್ ಪಟೇಲ್ ಯಶಸ್ವಿಯಾದರು. ಇನ್ನುಳಿದಂತೆ ಬರ್ಲೆ(11), ಜೊಂಗ್ವೆ(13) ರನ್ಗಳಿಸಿ ಔಟಾದರು.