ಕರ್ನಾಟಕ

karnataka

ETV Bharat / sports

India vs WI T20: ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರೋಹಿತ್, ಭಾರತ ದಪರ ರವಿ ಬಿಷ್ಣೋಯ್​ ಪದಾರ್ಪಣೆ - ಭಾರತ ವೆಸ್ಟ್​ ಇಂಡೀಸ್​ ಟಿ20 ಸರಣಿ

ಆರಂಭಿಕ ಬ್ಯಾಟರ್​ ಕೆಎಲ್ ರಾಹುಲ್ ಗಾಯದ ಕಾರಣ ಸರಣಿಯಿಂದ ಹೊರಬಿದ್ದಿರುವುದರಿಂದ ಇಶಾನ್ ಕಿಶನ್​ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಯುವ ಬೌಲರ್​ ರವಿ ಬಿಷ್ಣೋಯ್​ ಪದಾರ್ಪಣೆ ಮಾಡಿದ್ದಾರೆ. ಆಲ್​ರೌಂಡರ್ ವೆಂಕಟೇಶ್ ಅಯ್ಯರ್​ಗೆ ಮತ್ತೊಂದು ಅವಕಾಶ ನೀಡಲಾಗಿದೆ.

India won the toss and elected to bowl first
ಭಾರತ vs ವೆಸ್ಟ್​ ಇಂಡೀಸ್ ಟಿ20

By

Published : Feb 16, 2022, 6:52 PM IST

Updated : Feb 16, 2022, 7:15 PM IST

ಕೋಲ್ಕತ್ತಾ: ವೆಸ್ಟ್​ ಇಂಡೀಸ್​ ವಿರದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಆರಂಭಿಕ ಬ್ಯಾಟರ್​ ಕೆಎಲ್ ರಾಹುಲ್ ಗಾಯದ ಕಾರಣ ಸರಣಿಯಿಂದ ಹೊರಬಿದ್ದಿರುವುದರಿಂದ ಇಶಾನ್ ಕಿಶನ್​ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಯುವ ಬೌಲರ್​ ರವಿ ಬಿಷ್ಣೋಯ್​ ಪದಾರ್ಪಣೆ ಮಾಡಿದ್ದಾರೆ. ಆಲ್​ರೌಂಡರ್ ವೆಂಕಟೇಶ್ ಅಯ್ಯರ್​ಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಭುವನೇಶ್ವರ್​ ಕುಮಾರ್​, ಹರ್ಷಲ್ ಪಟೇಲ್ , ದೀಪಕ್​ ಚಾಹರ್​ ಹಾಗೂ ವೆಂಕಟೇಶ್​ ಅಯ್ಯರ್​ ಇದ್ದರೆ, ಸ್ಪಿನ್ನರ್​ ವಿಭಾಗದಲ್ಲಿ ಯುಜ್ವೇಂದ್ರ ಚಹಲ್​ ಮತ್ತು ಬಿಷ್ಣೋಯ್​ ಕಣಕ್ಕಿಳಿದಿದ್ದಾರೆ.

ವೆಸ್ಟ್​ ಇಂಡೀಸ್​ ಪರ ಆಲ್​ರೌಂಡರ್​ ಕೈಲ್​ ಮೇಯರ್ಸ್​ ಆರಂಭಿಕರಾಗಿ ಆಡಲಿದ್ದಾರೆ. ​ ಶೆಲ್ಡಾನ್ ಕಾಟ್ರೆಲ್​, ರಾಸ್ಟನ್ ಚೇಸ್​ ಮತ್ತು ಶೆಫರ್ಡ್​ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.

ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೀ), ರೋವ್‌ಮನ್ ಪೊವೆಲ್, ಕೀರನ್ ಪೊಲಾರ್ಡ್ (ನಾಯಕ), ರಾಸ್ಟನ್ ಚೇಸ್, ರೊಮಾರಿಯೊ ಶೆಫರ್ಡ್, ಅಕೀಲ್ ಹೊಸೈನ್, ಓಡಿಯನ್ ಸ್ಮಿತ್, ಫ್ಯಾಬಿಯನ್ ಅಲೆನ್, ಶೆಲ್ಡನ್ ಕಾಟ್ರೆಲ್

ಭಾರತ (ಪ್ಲೇಯಿಂಗ್ XI): ಇಶಾನ್ ಕಿಶನ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೀ), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್

Last Updated : Feb 16, 2022, 7:15 PM IST

ABOUT THE AUTHOR

...view details