ಕರ್ನಾಟಕ

karnataka

ETV Bharat / sports

ಕೆರೆಬಿಯನ್ನರಿಗೆ 'ಮಾಡು ಇಲ್ಲವೆ ಮಡಿ’ ಪಂದ್ಯ... ಸರಣಿ ಗೆಲ್ಲುವ ತವಕದಲ್ಲಿ ಭಾರತ! - ಭಾರತ ವಿರುದ್ಧ ವೆಸ್ಟ್​ ಇಂಡೀಸ್ ಟಿ20 ಪಂದ್ಯ 2002

ಇಂದಿನ ಪಂದ್ಯ ವೆಸ್ಟ್​ ಇಂಡೀಸ್ ತಂಡಕ್ಕೆ​ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. . ಇಂದಿನ ಪಂದ್ಯ ವೆಸ್ಟ್​ ಇಂಡೀಸ್​ ಗೆದ್ರೆ ಮಾತ್ರ ಸರಣಿ ಜೀವಂತವಾಗಿ ಉಳಿಯುತ್ತದೆ. ಇಲ್ಲವಾದಲ್ಲಿ ಈ ಸರಣಿಯೂ ಸಹ ಕೈ ಚೆಲ್ಲಿದಂತಾಗುತ್ತದೆ.

India vs West Indies 2nd T20 , India vs West Indies match, India vs West Indies 2nd T20 result, India vs West Indies 2nd T20 2022, ಭಾರತ ವಿರುದ್ಧ ವೆಸ್ಟ್​ ಇಂಡೀಸ್​ 2ನೇ ಟಿ20 ಪಂದ್ಯ, ಭಾರತ ವಿರುದ್ಧ ವೆಸ್ಟ್​ ಇಂಡೀಸ್ ಪಂದ್ಯ, ಭಾರತ ವಿರುದ್ಧ ವೆಸ್ಟ್​ ಇಂಡೀಸ್ ಪಂದ್ಯದ ಫಲಿತಾಂಶ, ಭಾರತ ವಿರುದ್ಧ ವೆಸ್ಟ್​ ಇಂಡೀಸ್ ಟಿ20 ಪಂದ್ಯ 2002,
ಕೃಪೆ : Twitter/ICC

By

Published : Feb 18, 2022, 5:19 AM IST

ಕೋಲ್ಕತ್ತಾ: ಮೊದಲ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವ ರೋಹಿತ್ ಬಳಗ ಇಂದು ನಡೆಯಲಿರುವ 2ನೇ ಟಿ-20 ಪಂದ್ಯವನ್ನು ಗೆದ್ದು, ಇನ್ನು ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು ವಶಪಡಿಸಿಕೊಳ್ಳುವತ್ತಾ ಗುರಿಯಿಟ್ಟಿದೆ.

ಭಾರತ ಪ್ರವಾಸದಲ್ಲಿ 4 ಸೀಮಿತ ಓವರ್​ಗಳ ಪಂದ್ಯವನ್ನಾಡಿರುವ ವೆಸ್ಟ್​ ಇಂಡೀಸ್​ ಭಾರತಕ್ಕೆ ಪೈಪೋಟಿ ನೀಡುವಲ್ಲಿ ವಿಫಲವಾಗಿದೆ. ಏಕದಿನ ಸರಣಿಯನ್ನು 0-3 ರಲ್ಲಿ ಕಳೆದುಕೊಂಡಿದ್ದ ವಿಂಡೀಸ್, ಟಿ-20 ಸರಣಿಯಲ್ಲಾದರೂ ಪೈಪೋಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅದು ಸಹ ಹುಸಿಯಾಗಿದೆ. ಏಕೆಂದರೆ ಭಾರತ ಪ್ರವಾಸಕ್ಕೂ ಮುನ್ನ ಕೆರಿಬಿಯನ್ ತಂಡ ಇಂಗ್ಲೆಂಡ್​ ಎದುರು 3-2ರ ಅಂತರದಲ್ಲಿ ಟಿ-20 ಸರಣಿ ಜಯಿಸಿತ್ತು. ಆದರೆ ಅತಿಥೇಯ ತಂಡದೆದುರು ಪ್ರಬಲ ಸ್ಪರ್ಧೆಯನ್ನುಂಟು ಮಾಡುವುದಕ್ಕೆ ಪೊಲಾರ್ಡ್​ ಪಡೆ ವಿಫಲವಾಗಿದೆ.

ಓದಿ:ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ.. ಮೂವರನ್ನು ಬಂಧಿಸಿದ ಐಬಿ, ಎಟಿಎಸ್​

ಇಂದು ನಡೆಯುವ ಪಂದ್ಯವನ್ನು ಭಾರತ ತಂಡ ಗೆದ್ದರೆ ಸೀಮಿತ ಓವರ್​ಗಳ ನಾಯಕತ್ವ ವಹಿಸಿಕೊಂಡ ನಂತರ ರೋಹಿತ್ ಶರ್ಮಾ ಗೆಲುವು ಸಾಧಿಸಿದ ಸತತ 3ನೇ ಸರಣಿಯಾಗಲಿದೆ. ಮೊದಲು ನ್ಯೂಜಿಲ್ಯಾಂಡ್ ವಿರುದ್ಧ 3-0ಯಲ್ಲಿ ಟಿ20 ಸರಣಿ ಗೆದ್ದರೆ, ವಿಂಡೀಸ್ ವಿರುದ್ಧ 3-0ಯಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಈಗ ಇನ್ನು ಒಂದು ಪಂದ್ಯ ಬಾಕಿಯಿರುವಾಗಲೇ ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಗೆಲ್ಲುವ ತವಕದಲ್ಲಿ ಭಾರತ ತಂಡವಿದೆ.

ಇನ್ನೂ ಬ್ಯಾಟಿಂಗ್​​ನಲ್ಲಿ ಮೊದಲ ಪಂದ್ಯದಲ್ಲಿ ತಡವರಿಸಿದ್ದ ಇಶಾನ್​ ಕಿಶನ್​ಗೆ ಮತ್ತೊಂದು ಅವಕಾಶ ನೀಡಬಹುದು. ಸೂರ್ಯಕುಮಾರ್​ ಯಾದವ್​ ಮತ್ತು ವೆಂಕಟೇಶ್​ ಅಯ್ಯರ್​ ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿರುವುದರಿಂದ 2ನೇ ಪಂದ್ಯದಲ್ಲೂ ಮುಂದುವರಿಯಬಹುದು. ಬೌಲಿಂಗ್​ನಲ್ಲೂ ಗಾಯಗೊಂಡಿರುವ ದೀಪಕ್​ ಚಾಹರ್​ 2ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಶಾರ್ದೂಲ್ ಠಾಕೂರ್​ ಅಥವಾ ಮೊಹಮ್ಮದ್ ಸಿರಾಜ್​ ಕಣಕ್ಕಿಳಿಯಬಹುದಾಗಿದೆ.

ಹೋಲ್ಡರ್​ ಕಮ್​ಬ್ಯಾಕ್​:ನೆಟ್​ನಲ್ಲಿ ಅಭ್ಯಾಸ ಮಾಡುವಾಗ ಎದೆಗೆ ಚೆಂಡು ಬಡಿದಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಆಲ್​ರೌಂಡರ್​ ಜೇಸನ್ ಹೋಲ್ಡರ್​ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಪೂರನ್​, ಪೊಲಾರ್ಡ್​ ಉತ್ತಮ ಟಚ್​ನಲ್ಲಿದ್ದು, ಹೋಲ್ಡರ್​ ಸೇರ್ಪಡೆಯೊಂದಿಗೆ ವಿಂಡೀಸ್​ ತಂಡದ ಮಧ್ಯಮ ಕ್ರಮಾಂಕದ ಬಲ ಬಲಿಷ್ಠವಾಗಿರುವುದರಿಂದ ಸರಣಿಯನ್ನು ಉಳಿಸಿಕೊಳ್ಳುವ ಅವಕಾಶವಿದೆ.

ಓದಿ:ಸಾವಿರಾರು ನೇಕಾರರ ಅನ್ನದಾತ ರಾಮರಾಜ್‌ ಬಳಗ ಸೇರಿದ ರಾಮಾಚಾರಿ... ಸ್ವದೇಶಿ ಬ್ರ್ಯಾಂಡ್​ಗೆ ಯಶ್​ ರಾಯಛಾರಿ!

ತಂಡಗಳು: ಭಾರತ:ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್ ಮತ್ತು ಹರ್ಪ್ರೀತ್ ಬ್ರಾರ್.

ವೆಸ್ಟ್ ಇಂಡೀಸ್: ಕೀರಾನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡರೇನ್ ಬ್ರಾವೋ, ರಾಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕೆಲ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಬ್ರೆಂಡನ್ ಕಿಂಗ್, ರೋವ್ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್.

ABOUT THE AUTHOR

...view details