ಕರ್ನಾಟಕ

karnataka

ETV Bharat / sports

IND vs WI T20I: ಶುಭಾರಂಭದ ತವಕದಲ್ಲಿ ರೋಹಿತ್ ಬಳಗ..ಯಾರಿಗೆಲ್ಲ ಚಾನ್ಸ್​? - Etv bharat kannada

ವೆಸ್ಟ್ ಇಂಡೀಸ್ ವಿರುದ್ಧ ಇಂದಿನಿಂದ ಮೊದಲ ಟಿ20 ಪಂದ್ಯ ಆರಂಭಗೊಳ್ಳುತ್ತಿದ್ದು, ಅದಕ್ಕಾಗಿ ರೋಹಿತ್ ಬಳಗ ಸಂಪೂರ್ಣವಾಗಿ ಸನ್ನದ್ಧವಾಗಿದೆ.

India vs West Indies
India vs West Indies

By

Published : Jul 29, 2022, 3:26 PM IST

ತರೋಬಾ(ವೆಸ್ಟ್ ಇಂಡೀಸ್​): ಮುಂಬರುವ ಟಿ - 20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ಬಳಗ ಇಂದಿನಿಂದ ವೆಸ್ಟ್​ ವಿರುದ್ಧ ಐದು ಚುಟುಕು ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ರಾತ್ರಿ 8 ಗಂಟೆಗೆ ಮೊದಲ ಪಂದ್ಯ ಆರಂಭಗೊಳ್ಳಲಿದೆ. ಅದಕ್ಕೋಸ್ಕರ ರೋಹಿತ್ ಶರ್ಮಾ ಬಳಗ ಸಂಪೂರ್ಣವಾಗಿ ಸಜ್ಜಾಗಿದೆ. ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಅನೇಕ ಪ್ಲೇಯರ್ಸ್​ ಚುಟುಕು ಕ್ರಿಕೆಟ್​ನಲ್ಲಿ ಭಾಗಿಯಾಗಲಿದ್ದು,ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ, ಶುಭಾರಂಭ ಮಾಡುವ ತವಕದಲ್ಲಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​, ದಿನೇಶ್ ಕಾರ್ತಿಕ್​​, ದಿನೇಶ್ ಕಾರ್ತಿಕ್​ ಇದ್ದು ತಂಡದಿಂದ ಉತ್ತಮ ಪ್ರದರ್ಶನ ಮೂಡಿ ಬರುವ ಸಾಧ್ಯತೆ ದಟ್ಟವಾಗಿದೆ. ಆದರೆ, ಆಡುವ 11ರ ಬಳಗದಲ್ಲಿ ಅಶ್ವಿನ್​ ಚಾನ್ಸ್ ಪಡೆದುಕೊಳ್ಳುವ ಬಗ್ಗೆ ಕುತೂಹಲ ಮೂಡಿದೆ.

ಹೊಡಿ ಬಡಿ ಆಟಕ್ಕೆ ವೆಸ್ಟ್ ಇಂಡೀಸ್ ಕೂಡ ಫೇಮಸ್ ಆಗಿದ್ದು, ಹೀಗಾಗಿ ಟೀಂ ಇಂಡಿಯಾ ಬೌಲರ್​​ಗಳ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಹರ್ಷಲ್ ಪಟೇಲ್​, ಭುವನೇಶ್ವರ್ ಕುಮಾರ್​ ,ಅರ್ಷದೀಪ್ ಸಿಂಗ್​, ರವೀಂದ್ರ ಜಡೇಜಾ ಜೊತೆ ಇನ್ನೋರ್ವ ಬೌಲರ್​ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿರಿ:ವೆಸ್ಟ್​ ಇಂಡೀಸ್​ ವಿರುದ್ಧ ಕ್ಲೀನ್​ ಸ್ವೀಪ್ ಸಾಧನೆ.. ಏಕದಿನ ರ್‍ಯಾಂಕಿಂಗ್‌ ಭಾರತಕ್ಕೆ 3ನೇ ಸ್ಥಾನ

ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯಬೇಕಾಗಿದ್ದ ಕೆಎಲ್ ರಾಹುಲ್ ಕೋವಿಡ್​ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ, ಕ್ಯಾಪ್ಟನ್ ಜೊತೆ ಇನ್ನಿಂಗ್ಸ್​ ಆರಂಭಿಸುವುದು ಯಾರು ಎಂಬ ಕುತೂಹಲ ಸಹ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್​,ರವೀಂದ್ರ ಜಡೇಜಾ ಬ್ಯಾಟ್​ ಬೀಸಲಿದ್ದಾರೆ.

ಟೀಂ ಇಂಡಿಯಾ ಸಂಭವನೀಯ ಪ್ಲೇಯರ್ಸ್​:ರೋಹಿತ್ ಶರ್ಮಾ(ಕ್ಯಾಪ್ಟನ್), ರಿಷಭ್ ಪಂತ್, ದೀಪಕ್ ಹೂಡಾ/ ಶ್ರೇಯಸ್​ ಅಯ್ಯರ್, ಸೂರ್ಯಕುಮಾರ್ ಯಾದವ್​, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್​, ಅಕ್ಸರ್ ಪಟೇಲ್,ಹರ್ಷಲ್ ಪಟೇಲ್​,ಆರ್​.ಅಶ್ವಿನ್​/ಕುಲ್ದೀಪ್ ಯಾದವ್​, ಭುವನೇಶ್ವರ್ ಕುಮಾರ್​, ಅರ್ಷದೀಪ್ ಸಿಂಗ್​

ವೆಸ್ಟ್ ಇಂಡೀಸ್​ ಸಂಭವನೀಯ XI:ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಕ್ಯಾಪ್ಟನ್​), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಓಡಿಯನ್ ಸ್ಮಿತ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಓಬೆಡ್ ಮೆಕಾಯ್ ಮತ್ತು ಹೇಡನ್ ವಾಲ್ಷ್ ಜೆಎನ್ಆರ್/ಅಲ್ಜಾರಿ ಜೋಸೆಫ್

ABOUT THE AUTHOR

...view details