ಕರ್ನಾಟಕ

karnataka

ETV Bharat / sports

ನಾಳೆ ಶ್ರೀಲಂಕಾ ಭಾರತ ಟಿ20 ಪಂದ್ಯ: ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯ ನಾಯಕತ್ವ ಪರೀಕ್ಷೆ - ಹಾರ್ದಿಕ್​ ಪಾಂಡ್ಯ ನಾಯಕತ್ವ ಪರೀಕ್ಷೆ

ನಾಳೆಯಿಂದ ಶ್ರೀಲಂಕಾ ವಿರುದ್ಧ ಟಿ20 ಸರಣಿ- ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ-ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ನಾಯಕ- ಲಂಕಾದ ದಸುನ್​ ಶನಕಾ ತಂಡಕ್ಕೆ ಸರಣಿ ಗೆಲ್ಲುವ ತವಕ

india vs srilanka 1st t20 match
ನಾಳೆ ಶ್ರೀಲಂಕಾ ಭಾರತ ಟಿ20 ಪಂದ್ಯ

By

Published : Jan 2, 2023, 8:05 PM IST

ಮುಂಬೈ:ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಲಂಕಾ ತಂಡವನ್ನು ಎದುರಾಗಲಿದೆ. ಹಿರಿಯರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಬೇಕಿದೆ. ದಸುನ್​ ಶನಕಾ ನೇತೃತ್ವದ ಸಿಂಹಳೀಯರ ತಂಡ ಭಾರತದ ನೆಲದಲ್ಲಿ ಸರಣಿ ವಶಕ್ಕೆ ಸಜ್ಜಾಗಿದೆ.

ಟಿ20 ಸ್ಪೆಷಲಿಸ್ಟ್​ ಬ್ಯಾಟರ್​ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲ್ಯಾಂಡ್​​ ವಿರುದ್ಧದ ಸರಣಿ ಗೆಲುವಿನ ಬಳಿಕ ಲಂಕಾ ದಹನಕ್ಕೆ ಆಟಗಾರರು ಸಜ್ಜಾಗಬೇಕಿದೆ. ವಿದೇಶಿ ನೆಲದಲ್ಲಿ ಮಿಂಚಿದ್ದ ಆಟಗಾರರು ಇನ್ನು ಮುಂದೆ ನಡೆಯುವ ತವರಿನ ನೆಲದಲ್ಲಿನ ಸರಣಿಗಳಲ್ಲಿ ಬ್ಯಾಟಿಂಗ್​, ಬೌಲಿಂಗ್​ ಸಾಮರ್ಥ್ಯ ತೋರಿಸಬೇಕಿದೆ.

ಮತ್ತೊಂದೆಡೆ, ಶ್ರೀಲಂಕಾದ ವನಿಂದು ಹಸರಂಗ ಡಿ ಸಿಲ್ವಾ, ಪಾತುಮ್ ನಿಸ್ಸಂಕ, ಕುಶಾಲ್ ಮೆಂಡಿಸ್ ಮತ್ತು ಮಹೇಶ್ ತೀಕ್ಷಣ ಸ್ಪಿನ್​ ಅಸ್ತ್ರ ಹೂಡಲು ಮುಂದಾಗಿದ್ದಾರೆ. ಈವರೆಗಿನ ಎಲ್ಲ ಸರಣಿಗಳಲ್ಲಿ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು, ಉತ್ತಮ ಲಯದಲ್ಲಿದ್ದಾರೆ.

ಭಾರತ vs ಶ್ರೀಲಂಕಾ ಮುಖಾಮುಖಿ:ಇನ್ನು, ಭಾರತ ಮತ್ತು ಶ್ರೀಲಂಕಾ ನಡುವೆ ಒಟ್ಟು 26 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 17 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 8 ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ತವರಿನಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿದೆ. ಆಡಿದ 15 ಪಂದ್ಯಗಳ ಪೈಕಿ 11ರಲ್ಲಿ ಗೆದ್ದು, 3 ರಲ್ಲಿ ಸೋತಿದೆ. ಒಂದು ಪಂದ್ಯ ಫಲಿತಾಂಶ ಬಂದಿಲ್ಲ. ಉಭಯ ತಂಡಗಳ ಮಧ್ಯೆ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.

ಶುಭಮನ್​ ಗಿಲ್​ ಪದಾರ್ಪಣೆ:ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಶುಭಮನ್ ಗಿಲ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಏಕದಿನದಲ್ಲಿ ಸಾಮರ್ಥ್ಯ ಪ್ರದರ್ಶಿಸಿರುವ ಗಿಲ್​ ಟಿ20 ಯಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ನೇತೃತ್ವದ ಗುಜರಾತ್​ ಟೈಟಾನ್ಸ್​​ ಪರ ಆಡಿರುವ ಗಿಲ್​ ಭಾರತದ ಪರವಾಗಿ 13 ಟೆಸ್ಟ್ ಪಂದ್ಯಗಳಲ್ಲಿ 736 ರನ್ ಹಾಗೂ 15 ಏಕದಿನ ಪಂದ್ಯಗಳಲ್ಲಿ 687 ರನ್ ಗಳಿಸಿದ್ದಾರೆ.

ವಾಂಖೆಡೆ ಪಿಚ್​ ರಿಪೋರ್ಟ್​:ವಾಂಖೆಡೆ ಪಿಚ್‌ನಲ್ಲಿ ಇದುವರೆಗೆ 7 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ ನಾಲ್ಕನ್ನು ಭಾರತ ಗೆದ್ದಿದೆ. 2 ಪಂದ್ಯ ಸೋತು ಒಂದು ಡ್ರಾ ಮಾಡಿಕೊಂಡಿದೆ. ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 2 ಪಂದ್ಯಗಳನ್ನು ಗೆದ್ದಿದ್ದರೆ, ನಂತರ ಬ್ಯಾಟಿಂಗ್ ಮಾಡಿ ರನ್ ಬೆನ್ನಟ್ಟಿದ ತಂಡ 5 ಬಾರಿ ಗೆಲುವು ಸಾಧಿಸಿದೆ. ಪಿಚ್​ ಸ್ಪಿನ್ ಮತ್ತು ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಬ್ಯಾಟ್ಸ್‌ಮನ್‌ಗಳು ಸಹ ಇಲ್ಲಿ ರನ್ ಗಳಿಸಿದ್ದಾರೆ. ಟಾಸ್​ ಕೂಡ ಮಹತ್ವ ಪಡೆಯಲಿದೆ.

ಪಂದ್ಯದ ಸಮಯ:ಮೊದಲ ಟಿ20 ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ 1 ವಿವಿಧ ಭಾಷೆಗಳು, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

ಓದಿ:ಹಾರ್ದಿಕ್ ಪಾಂಡ್ಯ ಟಿ20 ನಾಯಕತ್ವ ಪಟ್ಟಕ್ಕೆ ಮಾಜಿ ಕ್ರಿಕೆಟಿಗನ ಆಕ್ಷೇಪ

ABOUT THE AUTHOR

...view details