ಮುಂಬೈ :ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಕ್ತಾಯಗೊಂಡಿದೆ. ಇದೀಗ ಭಾರತದ ಮತ್ತೊಂದು ಪಡೆ ಶ್ರೀಲಂಕಾ ವಿರುದ್ಧದ ಸರಣಿಗೋಸ್ಕರ ತಯಾರಿ ನಡೆಸುತ್ತಿದೆ. ಯುವ ಪಡೆಯನ್ನೊಳಗೊಂಡಿರುವ ಶಿಖರ್ ಧವನ್ ನೇತೃತ್ವದ ತಂಡ ಇದೀಗ 14 ದಿನಗಳ ಹೋಟೆಲ್ ಕ್ವಾರಂಟೈನ್ ಮುಗಿಸಿದೆ.
ಎಲ್ಲ ಪ್ಲೇಯರ್ಸ್ ಮುಂಬೈ ಹೋಟೆಲ್ನಲ್ಲಿ 14 ದಿನಗಳ ಕ್ವಾರಂಟೈನ್ ಮುಕ್ತಾಯಗೊಳಿಸಿದೆ. ಇದೀಗ ಅಭ್ಯಾಸ ಆರಂಭಿಸುವ ತವಕದಲ್ಲಿದ್ದಾರೆ. ಲಂಕಾ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಯಂಗ್ ಇಂಡಿಯಾ ಭಾಗಿಯಾಗಲಿದೆ. ಏಕದಿನ ಪಂದ್ಯಗಳು ಜುಲೈ 13,16 ಹಾಗೂ 18 ರಂದು ನಡೆಯಲಿದೆ. ಟಿ-20 ಪಂದ್ಯಗಳು ಜುಲೈ 21,23 ಹಾಗೂ 25 ರಂದು ನಡೆಯಲಿವೆ.
ಇದನ್ನೂ ಓದಿರಿ: ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕೋಸ್ಕರ ಕಾಯ್ತಿದ್ದೇವೆ ಎಂದ ಸಿಪಿ ಯೋಗೇಶ್ವರ್.. ಈ ಮಾತಿನಲ್ಲೇನಿದೆಯೋ ಒಳಾರ್ಥ!
ಲಂಕಾ ವಿರುದ್ಧದ ಸರಣಿಯಲ್ಲಿ ಯುವ ಪ್ಲೇಯರ್ಸ್ಗಳಾದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಕೃಷ್ಣಪ್ಪ ಗೌತಮ್, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ ಹಾಗೂ ನಿತೀಶ್ ರಾಣಾ ಭಾಗಿಯಾಗುತ್ತಿದ್ದಾರೆ. ಸದ್ಯ ಜಿಮ್ನಲ್ಲಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಯಂಗ್ ಪ್ಲೇಯರ್ಸ್ ಜಿಮ್ನಲ್ಲಿರುವ ವಿಡಿಯೋ ಶೇರ್ ಮಾಡಿದೆ.
ತಂಡದ ನಾಯಕನಾಗಿ ಶಿಖರ್ ಧವನ್ ಆಯ್ಕೆಯಾಗಿದ್ದು,ಉಪನಾಯಕನಾಗಿ ಭುವನೇಶ್ವರ್ ಕುಮಾರ್ ಇರಲಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ತಂಡವೊಂದು ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಈಗಾಗಲೇ ಲಂಡನ್ನಲ್ಲಿದೆ.
ಶ್ರೀಲಂಕಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ತಂಡ
ಶಿಖರ್ ಧವನ್(ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯಾ, ನಿತೀಶ್ ರಾಣಾ, ಇಶನ್ ಕಿಶನ್(ವಿ,ಕೀ), ಸಂಜು ಸ್ಯಾಮ್ಸನ್(ವಿ,ಕೀ), ಯಜುವೇಂದ್ರ ಚಹಲ್, ರಾಹುಲ್ ಚಹರ್, ಕೆ. ಗೌತಮ್, ಕೃನಾಲ್ ಪಾಂಡ್ಯಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್(ಉ.ನಾಯಕ), ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ.