ಕೊಲಂಬೊ: ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಅತಿಥೇಯ ಶ್ರೀಲಂಕಾ ತಂಡಕ್ಕೆ 165ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ತಂಡ ಖಾತೆ ತೆರೆಯುವ ಮುನ್ನವೇ ಪದಾರ್ಪಣೆ ಬ್ಯಾಟ್ಸ್ಮನ್ ಪೃಥ್ವಿ ಶಾ(0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಎರಡನೇ ವಿಕೆಟ್ಗೆ ನಾಯಕ ಶಿಖರ್ ಧವನ್ ಮತ್ತು ಸಂಜು ಸಾಮ್ಸನ್ ಜೊತೆಗೂಡಿ 51 ರನ್ ಸೇರಿಸಿ ಚೇತರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ ಸಾಮ್ಸನ್ ಹಸರಂಗ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಅವರು 20 ಎಸತಗಳಲ್ಲಿ 27ರನ್ಗಳಿಸಿದ್ದರು.
ನಂತರ ಬಂದ ಸೂರ್ಯಕುಮಾರ್ ಯಾದವ್ ಎಚ್ಚರಿಕೆಯ ಆಟದ ಜೊತೆಗೆ ಕೆಟ್ಟ ಹೊಡೆತಗಳನ್ನು ದಂಡಿಸುತ್ತಾ ಧವನ್ ಜೊತೆಗೂಡಿ 62 ರನ್ ಸೇರಿಸಿದರು. ಕೇವಲ 14 ರನ್ಗಳ ಅಂತರದಲ್ಲಿ ಇಬ್ಬರು ವಿಕೆಟ್ ಒಪ್ಪಿಸಿದ್ದು ಭಾರತದ ಬೃಹತ್ ಮೊತ್ತದ ಕನಸಿಗೆ ಹಿನ್ನಡೆಯುಂಟಾಯಿತು.
ಶಿಖರ್ ಧವನ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 46, ಸೂರ್ಯಕುಮಾರ್ ಯಾದವ್ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 50 ರನ್ಗಳಿಸಿದರು.
ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 10 ರನ್ಗಳಿಸಿ ಮತ್ತೊಮ್ಮೆ ವಿಫಲರಾದರು. ಇಶಾನ್ ಕಿಶನ್ 14 ಎಸೆತಗಳಲ್ಲಿ ಅಜೇಯ 20 ರನ್ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಲ್ಲದೆ 164 ರನ್ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.
ಇದನ್ನು ಓದಿ:'ಬೆಳ್ಳಿ ಹುಡುಗಿ' ಮೀರಾಬಾಯಿಗೆ ಜೀವನಪೂರ್ತಿ FREE ಡಾಮಿನೊಸ್ ಪಿಜ್ಜಾ