ಕರ್ನಾಟಕ

karnataka

ETV Bharat / sports

ಶ್ರೀಲಂಕಾ ವಿರುದ್ಧ ಸರಣಿಗೆ ವೇಳಾಪಟ್ಟಿ ಪ್ರಕಟ: ಜುಲೈ 13ರಂದು ಏಕದಿನ ಸರಣಿ ಆರಂಭ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಭಾರತ ಹಿರಿಯ ಆಟಗಾರರ ತಂಡ ಆಂಗ್ಲರ ಪ್ರವಾಸದಲ್ಲಿದೆ. ಆದರೆ ಜುಲೈನಲ್ಲಿ ಬಿಸಿಸಿಐ ಶ್ರೀಲಂಕಾ ತಂಡದ ವಿರುದ್ಧ ಸೀಮಿತ ಓವರ್​​ಗಳ ಸರಣಿಯನ್ನಾಡಲಿದೆ. ವಿಶೇಷವೆಂದರೆ ಈ ಸರಣಿಗೆ ಕೊಹ್ಲಿ, ರೋಹಿತ್, ಪಂತ್ ಸೇರಿದಂತೆ ಕೆಲವು ದಿಗ್ಗಜ ಆಟಗಾರರು ಲಭ್ಯರಿರುವುದಿಲ್ಲ. ಅವರು ಇಂಗ್ಲೆಂಡ್​ನಲ್ಲಿಯೇ ಉಳಿಯಲಿದ್ದಾರೆ.

ಶ್ರೀಲಂಕಾ vs ಭಾರತ
ಶ್ರೀಲಂಕಾ vs ಭಾರತ

By

Published : Jun 7, 2021, 9:29 PM IST

Updated : Jun 7, 2021, 10:34 PM IST

ಮುಂಬೈ: ಬಿಸಿಸಿಐ ಕೊಹ್ಲಿ - ರೋಹಿತ್ ಅಂತಹ ಸ್ಟಾರ್​ ಆಟಗಾರರು ಇಂಗ್ಲೆಂಡ್​ನಲ್ಲಿರುವ ವೇಳೆ ಶ್ರೀಲಂಕಾ ವಿರುದ್ಧ ನಡೆಯುವ ಸೀಮಿತ ಓವರ್​ಗಳ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಭಾರತ ಹಿರಿಯ ಆಟಗಾರರ ತಂಡ ಆಂಗ್ಲರ ಪ್ರವಾಸದಲ್ಲಿದೆ. ಆದರೆ, ಜುಲೈನಲ್ಲಿ ಬಿಸಿಸಿಐ ಶ್ರೀಲಂಕಾ ತಂಡದ ವಿರುದ್ಧ ಸೀಮಿತ ಓವರ್​​ಗಳ ಸರಣಿಯನ್ನಾಡಲಿದೆ. ವಿಶೇಷವೆಂದರೆ ಈ ಸರಣಿಗೆ ಕೊಹ್ಲಿ, ರೋಹಿತ್, ಪಂತ್ ಸೇರಿದಂತೆ ಕೆಲವು ದಿಗ್ಗಜ ಆಟಗಾರರು ಲಭ್ಯರಿರುವುದಿಲ್ಲ. ಅವರು ಇಂಗ್ಲೆಂಡ್​ನಲ್ಲಿಯೇ ಉಳಿಯಲಿದ್ದಾರೆ.

ಸಂಪೂರ್ಣ ವೈಟ್​ಬಾಲ್​ ಸ್ಪೆಷಲಿಸ್ಟ್​ಗಳ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ 3 ಏಕದಿನ ಮತ್ತು 3 ಟಿ-20 ಪಂದ್ಯಗಳನ್ನಾಡಲಿದೆ. ಈ ವಿಚಾರವನ್ನು ಪ್ರಸಾರ ಹಕ್ಕನ್ನು ಪಡೆದಿರುವ ಸೋನಿ ತನ್ನ ಟ್ವಿಟರ್​ನಲ್ಲಿ ತಿಳಿಸಿದೆ.

ಸೋನಿ ಸ್ಪೋರ್ಟ್ಸ್​ ಟ್ವೀಟ್​ ಪ್ರಕಾರ ಮೂರು ಏಕದಿನ ಪಂದ್ಯಗಳು ಜುಲೈ 13, 16, 18ರಂದು ನಡೆಯಲಿವೆ. ನಂತರ 21, 23 ಮತ್ತು 25 ರಂದು 3 ಟಿ-20 ಪಂದ್ಯಗಳು ನಡೆಯಲಿವೆ.

ಭಾರತ ವೈಟ್​ಬಾಲ್ ತಂಡಕ್ಕೆ ರವಿಶಾಸ್ತ್ರಿ ಗೈರಿನಲ್ಲಿ ಎನ್​ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್​ ಅವರನ್ನು ಮುಖ್ಯಕೋಚ್​ ಆಗಿ ಲಂಕಾ ಪ್ರವಾಸಕ್ಕೆ ಕಳುಹಿಸಲಿದೆ.

ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ ನಾಯಕರಾಗುವ ಸಾಧ್ಯತೆಯಿದೆ, ಸೂರ್ಯ ಕುಮಾರ್ ಯಾದವ್, ಪೃಥ್ವಿ ಶಾ, ಇಶಾನ್ ಕಿಶನ್, ದೇವದತ್ ಪಡಿಕ್ಕಲ್, ಪಾಂಡ್ಯ ಬ್ರದರ್ಸ್​ ಸೇರಿದಂತೆ ಕೆಲವು ಯುವ ಆಟಗಾರರು ಈ ಸರಣಿಗೆ ಭಾರತ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.

ಇದನ್ನು ಓದಿ: ತವರಿನಲ್ಲಿ ಇಂಗ್ಲೆಂಡ್ ಆಟ ಬೇಸರ ತರಿಸಿದೆ: ಡ್ರಾಗೆ ತೃಪ್ತಿಪಟ್ಟುಕೊಂಡಿದ್ದಕ್ಕೆ ವಾರ್ನ್ ಕಿಡಿ

Last Updated : Jun 7, 2021, 10:34 PM IST

ABOUT THE AUTHOR

...view details