ಗುವಾಹಟಿ (ಬರ್ಸಾಪರಾ):ಭಾರತ ಮತ್ತುಶ್ರೀಲಂಕಾ ನಡುವಣ ಏಕದಿನ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಪಂದ್ಯಕ್ಕೆ ಆತಿಥ್ಯ ವಹಿಸಿದೆ.
ಉಭಯ ತಂಡಗಳು ಕೆಲವು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿವೆ. ಲಂಕಾ ಪರ ದಿಲ್ಶಾನ್ ಮಧುಶಂಕ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶ್ರಾಂತಿಯಲ್ಲಿದ್ದ ರೋಹಿತ್ ಶರ್ಮಾ ಟೀಂ ಇಂಡಿಯಾಗೆ ವಾಪಸ್ ಆಗಿದ್ದಾರೆ. ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಕೂಡ ತಂಡದಲ್ಲಿದ್ದಾರೆ. ದಸುನ್ ಶನಕ ನಾಯಕತ್ವದ ಶ್ರೀಲಂಕಾ ಕೂಡ ಬಲಾಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಕೆಲವು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಕೆ ಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ತೆಗೆದು ಕೊಳ್ಳಲಾಗಿದೆ.
ಮೂರು ಪಂದ್ಯಗಳ ಟಿ20 ಸೆರಣಿ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಭಾರತಕ್ಕೆ ಏಕದಿನ ಪಂದ್ಯ ಗೆಲ್ಲುವ ಗುರಿ ಹೊಂದಿದೆ. ಏಕದಿನ ಮಾದರಿಯ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಮುನ್ನೆಲೆಯಲ್ಲಿ ಇಟ್ಟುಕೊಂಡು ಆಟಗಾರರ ಮೇಲೆ ಪ್ರಯೋಗ ಮಾಡಲು ಈ ಸರಣಿ ಸಹಕಾರವಾಗಲಿದೆ. ಭಾರತದಲ್ಲೇ ವಿಶ್ವಕಪ್ ನಡೆಯುತ್ತಿರುವುದರಿಂದ ತಂಡವನ್ನು ಬಲಿಷ್ಠ ಮಾಡುವ ಉದ್ದೇಶದಿಂದ ಸರಣಿ ಮಹತ್ವ ಪಡೆದಿದೆ.
ವಿಶ್ವಕಪ್‌ಗೆ ತಂಡ ಸಿದ್ಧ ಮಾಡುತ್ತಿರುವ ಬಿಸಿಸಿಐ:ಏಕದಿನ ವಿಶ್ವಕಪ್ ಇರುವುದರಿಂದ ಟಿ20 ಪಂದ್ಯಗಳಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಅವರನ್ನು ದೂರ ಇಡುತ್ತಿದೆ. ಈ ಮೂಲಕ ಹಿರಿಯ ಅನುಭವಿ ಆಟಗಾರರನ್ನು ವಿಶ್ವಕಪ್ ತಂಡಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡದ ಪಟ್ಟಿಯಲ್ಲಿ ಇದೆ. ಭಾರತದ ಸ್ಟಾರ್ ಬ್ಯಾಟರ್ಗಳಾದ ನಾಯಕ ರೋಹಿತ್, ಕೊಹ್ಲಿ ಮತ್ತು ರಾಹುಲ್ ಫಾರ್ಮ್ನಲ್ಲಿದ್ದಾರೆ. ವಿಶ್ವಕಪ್ ವೇಳೆ ಅಫಘಾತದಲ್ಲಿ ಗಾಯಗೊಂಡಿರುವ ಪಂತ್ ತಂಡ ಸೇರಲಿದ್ದಾರ ಕಾದು ನೋಡ ಬೇಕಿದೆ. ಫಿಟ್ನೆಸ್ ಸಾಬೀತಾಗದ ಕಾರಣ ಬೂಮ್ರಾ ಅವರನ್ನು ವಿಶ್ವಕಪ್ ಉದ್ದೇಶದಿಂದಲೇ ಹೊರಗಿಡಲಾಗಿದೆ.
ಪಿಚ್ ವರದಿ:ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಹೆಚ್ಚು ರನ್ಗಳಿಸುವಲ್ಲಿ ಪಿಚ್ ಸಹಕರಿಸಲಿದೆ. ಪಿಚ್ ಡ್ರೈ ಮತ್ತು ಕ್ರ್ಯಾಕ್ಗಳಿಂದ ಕೂಡಿದೆ. ರಾತ್ರಿ ಇಬ್ಬನಿ ಹೆಚ್ಚಿರುವ ಸಾಧ್ಯತೆ ಇದೆ. ಎರಡನೇ ಇನ್ನಿಂಗ್ಸ್ ಕ್ಷೇತ್ರ ರಕ್ಷಣೆ ಮಾಡುವ ತಂಡಕ್ಕೆ ರನ್ ಸೇವ್ ಮಾಡುವುದು ಕಠಿಣವಾಗಲಿದೆ. ಪಿಚ್ ಬ್ಯಾಟಿಂಗ್ ಮಾಡಲು ಉತ್ತಮವಾಗಿ ಕಾಣುತ್ತಿದ್ದು, ಚೇಸಿಂಗ್ ಸುಲಭವಾಗಲಿದೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಬಹುದು ಎಂದು ದೀಪ್ ದಾಸ್‌ಗುಪ್ತಾ ಪಿಚ್ ರಿಪೋರ್ಟ್ನಲ್ಲಿ ಹೇಳಿದ್ದಾರೆ.