ರಾಜ್ಕೋಟ್(ಗುಜರಾತ್): ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಇಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹವಾಮಾನ ಮತ್ತು ಪಿಚ್‌ನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ತಿಳಿಯೋಣ. ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಟಿ20 ಪಂದ್ಯಗಳ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದು ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನಲ್ಲಿ ನಡೆದ ಮೊದಲ ಟಿ20ಯಲ್ಲಿ ಭಾರತ ಗೆಲುವು ಸಾಧಿಸಿತ್ತು. ಇದಾದ ಬಳಿಕ ಪುಣೆಯಲ್ಲಿ ನಡೆದ ಎರಡನೇ ಪಂದ್ಯವನ್ನು ಶ್ರೀಲಂಕಾ ಗೆದ್ದು ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು. ರಾಜ್‌ಕೋಟ್‌ನಲ್ಲಿ ಗೆಲ್ಲುವ ತಂಡ ಸರಣಿ ಕೈವಶ ಮಾಡಿಕೊಳ್ಳಲಿದೆ.
ಇದುವರೆಗೂ ಸರಣಿ ಕೈಚೆಲ್ಲದ ನಾಯಕ: ಹಾರ್ದಿಕ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ. ಅವರು ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ಅನ್ನು ಸೋಲಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಹಾರ್ದಿಕ್ ಜಯ ಗಳಿಸಿದ್ರೆ ಸರಣಿ ಗೆಲುವಿನ ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ. ಭಾರತ ತಂಡ ಶ್ರೀಲಂಕಾ ವಿರುದ್ಧ ತಮ್ಮ ತವರು ನೆಲದಲ್ಲಿ ಒಂದೇ ಒಂದು ಟಿ20ಐ ಸರಣಿಯನ್ನು ಕಳೆದುಕೊಂಡಿಲ್ಲ. ಈ ಹಿಂದೆ ಆಡಿದ್ದ ಟೀಂ ಇಂಡಿಯಾದ ಐದು ಸರಣಿಗಳಲ್ಲಿ ನಾಲ್ಕರಲ್ಲಿ ಗೆದ್ದಿತ್ತು. ಕೊನೆಯ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.
ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ಪ್ರದರ್ಶನ :ರಾಜ್‌ಕೋಟ್‌ನ ಈ ಮೈದಾನದಲ್ಲಿ ಟೀಂ ಇಂಡಿಯಾದ ಪ್ರದರ್ಶನವನ್ನು ನೋಡಿದಾದ್ರೆ,, ಭಾರತ ಇಲ್ಲಿ ನಾಲ್ಕು ಟಿ20 ಪಂದ್ಯಗಳನ್ನು ಆಡಿದೆ. 2013 ರಲ್ಲಿ ಆಸ್ಟ್ರೇಲಿಯಾ, 2019 ರಲ್ಲಿ ಬಾಂಗ್ಲಾದೇಶ ಮತ್ತು 2022 ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರು. 2017ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಈ ಮೂಲಕ ಈ ನೆಲದಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಗೆಲ್ಲುವ ಅವಕಾಶ ಪಡೆದಿದೆ.
ರಾಜ್ಕೋಟ್ ಮೈದಾನದ ಪಿಚ್ ವರದಿ:ರಾಜ್ಕೋಟ್ಗೆಬಂದಿಳಿದಿರುವ ಉಭಯ ತಂಡಗಳು ಈಗಾಗಲೇ ಪ್ರ್ಯಾಕ್ಟಿಸ್ ಆರಂಭಿಸಿವೆ.ರಾಜ್‌ಕೋಟ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಿಚ್ ವರದಿ ಬಹಳ ಮುಖ್ಯವಾಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಇಲ್ಲಿ ಫ್ಲಾಟ್ ಪಿಚ್ ಬೌಲರ್ಗಳಿಗೆ ಸಮಸ್ಯೆ ಸೃಷ್ಟಿಸುತ್ತದೆ. ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ. ಬೌಲರ್‌ಗಳು ತಮ್ಮ ನಿಖರವಾದ ಲೈನ್ ಮತ್ತು ಲೆಂತ್ ಹೊರತುಪಡಿಸಿ ಈ ಪಿಚ್‌ನಿಂದ ಏನನ್ನೂ ನಿರೀಕ್ಷಿಸಬಾರದು. ಪಿಚ್ ಬ್ಯಾಟ್ಸ್‌ಮನ್‌ಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇಲ್ಲಿ ಸಮತಟ್ಟಾದ ಪಿಚ್‌ನೊಂದಿಗೆ ಸಣ್ಣ ಬೌಂಡರಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸಹಾಯಕವಾಗಲಿದೆ. ಗಡಿಯ ಉದ್ದವು ಸುಮಾರು 65-70 ಮೀಟರ್ ಆಗಿರುತ್ತದೆ. ಈ ಪಿಚ್ ಪ್ರಕಾರ ಇಲ್ಲಿ ಮತ್ತೊಂದು ಹೆಚ್ಚಿನ ಸ್ಕೋರ್ ಪಂದ್ಯ ಕಾಣಬಹುದಾಗಿದೆ.