ಕೋಲ್ಕತ್ತಾ:ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಕೇವಲ 39.4 ಓವರ್‌ಗಳಲ್ಲಿ 215 ರನ್ ಗಳಿಸಿ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಸುನ್ ಶನಕ ನಾಯಕತ್ವದ ಲಂಕಾ ತಂಡ, ಭಾರತದ ಬೌಲರ್ಗಳ ಮುಂದೆ ತಮ್ಮ ಪ್ರದರ್ಶನ ತೋರ್ಪಡಿಸಲು ವಿಫಲರಾದರು. ಕೇವಲ 216 ರನ್‌ಗಳ ಟಾಗೆಟ್ ನೀಡಿ ತೃಪ್ತಿಪಡಬೇಕಾಯಿತು.
ಎದುರಾಳಿ ತಂಡವನ್ನು ಆರಂಭದಿಂದಲೂ ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಅವರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾದರು. ಭಾರತದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಆರನೇ ಓವರ್ನ ಕೊನೆಯ ಎಸೆತದಲ್ಲಿ ಎನ್ ಫೆರ್ನಾಂಡೋ ಅವರನ್ನು ಬೋಲ್ಡ್ ಮಾಡುವ ಮೂಲಕ ವಿಕೆಟ್ ಖಾತೆಯನ್ನು ತೆರೆದರು. ಕುಲ್‌ದೀಪ್ ಯಾದವ್ ಕೂಡ ತಮ್ಮ ಕೈಚಳಕ ತೋರಿಸುವ ಮೂಲಕ ಇವತ್ತಿನ ಪಂದ್ಯದಲ್ಲಿ ಹೀರೋ ಆದರು.
ಕಳೆದ ತಿಂಗಳು ಚಟ್ಟೋಗ್ರಾಮ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ಪರ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ್ದ ಕುಲ್‌ದೀಪ್ ಯಾದವ್, ಇದೀಗ ಮತ್ತೆ ಅದೇ ಖದರ್ ತೋರ್ಪಡಿಸಿದ್ದಾರೆ. ಬಲ ಭುಜದ ನೋವಿನಿಂದ ಹೊರಗುಳಿದಿರುವ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಸ್ಥಾನ ತುಂಬಿದ್ದರು. ನಿರೀಕ್ಷೆಯಂತೆ ತಮ್ಮ ಮೊನಚಾದ ಬೌಲಿಂಗ್ನಿಂದ ಕುಲದೀಪ್ (3/51) ತಮ್ಮ ಮೊದಲ ಐದು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡಕ್ಕೆ ಮುಳುವಾದರು. ಮೊಹಮ್ಮದ್ ಸಿರಾಜ್ 3, ಉಮ್ರಾನ್ ಮಲಿಕ್ 2 ಪಡದೆರೆ, ಅಕ್ಷರ್ ಪಟೇಲ್ 1 ವಿಕೆಟ್ ಕಿತ್ತರು.
ಲಂಕಾ ಪರ ನುವಾನಿದು ಫೆರ್ನಾಂಡೋ(50), ಅವಿಷ್ಕ ಫೆರ್ನಾಂಡೋ(20), ವಿಕೆಟ್ ಕೀಪರ್ ಕುಸಲ್ ಮೆಂಡಿಸ್ (34), ಧನಂಜಯ ಡಿ ಸಿಲ್ವ(0), ಚರಿತ್ ಅಸಲಂಕ(15), ನಾಯಕ ದಸುನ್ ಶನಕ (2), ವನಿಂದು ಹಸರಂಗ(21), ದುನಿತ್ ವೆಲ್ಲಲಗೆ(32), ಚಾಮಿಕ ಕರುಣಾರತ್ನೆ(17), ಲಹಿರು ಕುಮಾರ(0), ಕಸುನ್ ರಜಿತ ಔಟಾಗದೆ 17 ರನ್ ಗಳಿಸಿದರು. ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ನುವಾನಿದು ಫೆರ್ನಾಂಡೋ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
ಹೆಚ್ಚುವರಿ ರನ್ : (LB-1, W-5, NB-1) = 7, ಒಟ್ಟು: (10 ವಿಕೆಟ್‌ಗಳಿಗೆ, 39.4 ಓವರ್‌ಗಳಿಗೆ) = 215, ವಿಕೆಟ್ ಪತನ: 29-1, 102-2, 103-3, 118-4, 125-5, 126-6, 152-7, 177-8, 215-9, 215-10.