ಕರ್ನಾಟಕ

karnataka

ETV Bharat / sports

ನರ್ವಸ್​​ 90 ಸಮಸ್ಯೆ: ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸೆಂಚುರಿ ತಪ್ಪಿಸಿಕೊಂಡ ರಿಷಬ್ ಪಂತ್‌​ - ಪಂತ್ ನರ್ವಸ್​ 90

ಮೈದಾನದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುವ ಮೂಲಕ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್​ ಅನೇಕ ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಆಪತ್ಭಾಂಧವರಾಗಿದ್ದಾರೆ. ಆದರೆ, ಅವರು 90+ ರನ್​ಗಳಿಕೆ ಮಾಡ್ತಿದ್ದಂತೆ ಸಮಸ್ಯೆಗೊಳಗಾಗಿ ವಿಕೆಟ್​ ಒಪ್ಪಿಸುತ್ತಿದ್ದಾರೆ. ಇದಕ್ಕೆ ಹೊಸ ನಿದರ್ಶನ ಇವತ್ತಿನ ಪಂದ್ಯ.

Rishabh Pant
Rishabh Pant

By

Published : Mar 4, 2022, 5:29 PM IST

ಮೊಹಾಲಿ(ಪಂಜಾಬ್​): ಪ್ರವಾಸಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂದಿನಿಂದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾಗಿಯಾಗಿದ್ದು, ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸುತ್ತಿದೆ. ಮೊದಲ ದಿನದಾಟದ ಅಂತ್ಯಕ್ಕೆ ರೋಹಿತ್ ಪಡೆ 6 ವಿಕೆಟ್​ ​ನಷ್ಟಕ್ಕೆ 357 ರನ್​ಗಳಿಕೆ ಮಾಡಿ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಕೇವಲ 4 ರನ್​ಗಳ ಅಂತರದಿಂದ ರಿಷಬ್ ಪಂತ್ ಶತಕ ವಂಚಿತರಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಬಳಿಕ ಉತ್ತಮವಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವ ಪಂತ್​ ಭರ್ಜರಿ ರನ್​ಗಳಿಕೆ ಮಾಡ್ತಿದ್ದು, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ರಿಷಭ್ ಪಂತ್​​ಗೆ ನರ್ವಸ್​ 90 ಕಂಟಕ?:ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬೀಸಿ ತಂಡಕ್ಕೆ ಆಧಾರವಾಗ್ತಿರುವ ರಿಷಭ್​ ಪಂತ್​ಗೆ ನರ್ವಸ್​ 90 ಸಮಸ್ಯೆ ಮತ್ತೊಮ್ಮೆ ಎದುರಾಗಿದೆ. ಈ ಹಿಂದೆಯೂ ಕೂಡ ವೆಸ್ಟ್​ ಇಂಡೀಸ್ ವಿರುದ್ಧ 92​​​(2018), ವೆಸ್ಟ್​ ಇಂಡೀಸ್​​​ 92(2018) ಆಸ್ಟ್ರೇಲಿಯಾ 97ರನ್​ (2021), ಇಂಗ್ಲೆಂಡ್​ 91ರನ್​​(2021)ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿರುವ ಪಂತ್,​ ಇಂದಿನ ಪಂದ್ಯದಲ್ಲೂ ಲಂಕಾ ವಿರುದ್ಧ 96ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ.

2018ರಲ್ಲಿ ಸತತ ವೆಸ್ಟ್​ ಇಂಡೀಸ್ ವಿರುದ್ಧ ಸತತ ಎರಡು ಸಲ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದ್ದ ಪಂತ್​, ತದನಂತರ ಆಸ್ಟ್ರೇಲಿಯಾ, ಇಂಗ್ಲೆಂಡ್​ ವಿರುದ್ಧ ಕೂಡ ಈ ಸಮಸ್ಯೆ ಎದುರಿಸಿದ್ದರು. ಇಂದಿನ ಪಂದ್ಯದಲ್ಲಿ ಲಂಕಾ ವಿರುದ್ಧ ಕೂಡ ಅದೇ ರೀತಿಯ ಸಮಸ್ಯೆ ಎದುರಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​​ ಧೋನಿ ಮಾದರಿಯಲ್ಲೇ ಪಂತ್​ಗೂ ನರ್ವಸ್ 90 ಕಾಡುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಹಿಂದೆ ಸಚಿನ್, ಧೋನಿ ಅವರು ಕೂಡ 90+ ರನ್ ಬಾರಿಸಿ ಅನೇಕ ಬಾರಿ ಔಟ್ ಆಗಿದ್ದಾರೆ.

ABOUT THE AUTHOR

...view details