ಮುಂಬೈ: 2023ರ ಮೊದಲ ಸರಣಿಯನ್ನು ಭಾರತ ಲಂಕಾದೊಂದಿಗೆ ವಾಂಖೆಡೆಯಲ್ಲಿ ಆಡುತ್ತಿದೆ. ಈ ಸರಣಿಯ ನಾಯಕತ್ವ 2022ರ ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಟಿ 20 ನಂ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಕೈಗೆ ಉಪನಾಯಕತ್ವ ವಹಿಸಲಾಗಿದೆ. ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡ ನಾಯತ್ವ ವಹಿಸಿದ್ದರೂ ಮಳೆಯಿಂದ ಸರಣಿ ಅಪೂರ್ಣವಾಗಿ ಮುಗಿಯಿತು. ಮೂರು ಪಂದ್ಯದಲ್ಲಿ ಒಂದು ಪಂದ್ಯವನ್ನು ಭಾರತ 60 ರನ್ಗಳಿಂದ ಗೆದ್ದರೆ, ಮಿಕ್ಕೆರಡು ಪಂದ್ಯಗಳು ನೋ ರಿಸಲ್ಟ್ ಪಂದ್ಯಗಳಾಗಿದ್ದವು.
ಬಿಗ್ ತ್ರೀ ಇಲ್ಲದೇ ಪಾಂಡ್ಯಾಗೆ ಜವಾಬ್ದಾರಿ: ಭಾರತ ತಂಡ ಪ್ರಮುಖ ಆಟಗಾರರಾಗಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ತಂಡ ಮುನ್ನಡೆಸುತ್ತಿದ್ದಾರೆ. ಬ್ಲೂ ಬಾಯ್ಸ್ ಹೆಚ್ಚಾಗಿ ಈ ಮೂರು ಆಟಗಾರರ ಮೇಲೆ ಅವಲಂಬಿತರಾಗಿರುವು ಸಹ ತಂಡದ ಮೈನಸ್ ರೀತಿ ಕಾಣುತ್ತದೆ. ಹೀಗಾಗಿ ಹಾರ್ದಿಕ್ ಹೊಸ ಪಡೆಯನ್ನೇ ಇಟ್ಟುಕೊಂಡು ಗೆಲುವು ಸಾಧಿಸುವ ಅಗತ್ಯಇದೆ. ಈ ನಾಯಕತ್ವ ಹಾರ್ದಿಕ್ಗೆ ಪರೀಕ್ಷೆ ಕೂಡ ಹೌದು. ಸರಣಿಯ ಯಶಸ್ಸು ರೋಹಿತ್ ಶರ್ಮಾಗೆ ಏಕದಿನ ಮತ್ತು ಟೆಸ್ಟ್ನ ನಾಯಕತ್ವ ಕೊಟ್ಟು ಟಿ 20ಗೆ ಪರ್ಯಾಯ ನಾಯಕತ್ವ ಹುಡುಕುತ್ತಿದ್ದ ಬಿಸಿಸಿಐಗೆ ನೆರವಾಗಲಿದೆ.
ಆರಂಭಿಕರ ಹುಡುಕಾಟ: ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಆರಂಭಿಕರಾಗಿ ಪಂತ್ ಮತ್ತು ಇಶನ್ ಕಿಶನ್ ಕಾಣಿಸಿ ಕೊಂಡಿದ್ದರು. ಈ ಬಾರಿ ಪಂತ್ ಕಾರು ಅಪಘಾತದಿಂದಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಪಂತ್ರನ್ನು ಈ ಸರಣಿಯಿಂದ ಹೊರಗಿಡಲಾಗಿತ್ತು. ಹೀಗಾಗಿ ಹೊಸ ಆರಂಭಿಕ ಜೋಡಿಯನ್ನು ಮಾಡ ಬೇಕಿದೆ. ಕಿಶನ್ ಜೊತೆಗೆ ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿಯುವ ನೀರೀಕ್ಷೆ ಇದೆ.
ದೀಪಕ್ ಹೂಡಾ ಅವರಿಗೂ ಅರಂಭಿಕ ಆಟದ ಅನುಭವ ಇರುವುದರಿಂದ ಅವರನ್ನೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಹಾರ್ದಿಕ್ ಮುಂದಿದೆ. ಹಾಗೇ ಶುಭಮನ್ ಗಿಲ್ ಕೂಡು ಆರಂಭಿಕ ಆಟಗಾರರ ಸ್ಥಾನದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.
ಕಿಶನ್, ಸೂರ್ಯ ಮತ್ತು ಗಾಯಕ್ವಾಡ್ ಮೇಲೆ ನಿರೀಕ್ಷೆ:ಟಿ20 ಟಾಪ್ ರ್‍ಯಾಂಕ್ ಹೊಂದಿರುವ ಮತ್ತು ಹೋದ ವರ್ಷ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಸೂರ್ಯ ಕುಮಾರ್ ಯಾದವ್ ಮೇಲೆ ಉಪನಾಯಕನ ಜವಾಬ್ದಾರಿ ಇದ್ದು, ನಿರೀಕ್ಷೆಯೂ ಹೆಚ್ಚಿದೆ. ಇನ್ನು, ಇತ್ತೀಚಿಗೆ ವಿಜಯ ಹಜಾರೆ ಏಕದಿನ ಟೂರ್ನಿಯಲ್ಲಿ ಸರಣಿ ಶತಕ ದಾಖಲಿಸ ಗಾಯಕ್ವಾಡ್ ಹೆಚ್ಚಿನ ಭರವಸೆ ಇಡಲಾಗಿದೆ. ಹಾಗೇ ಬಾಂಗ್ಲಾ ಪ್ರವಾಸದಲ್ಲಿ ದ್ವಿಶತಕ ಸಿಡಿಸಿದ ಕಿಶನ್ ಮೇಲೆಯೂ ನಿರೀಕ್ಷೆಗಳಿವೆ.
ಅಲ್ಲದೇ ನಾಯಕ ಹಾರ್ದಿಕ್ ಬ್ಯಾಟಿಂಗ್ ಮತ್ತು ಬೌಲಿಂಗ್ನ ಆಲ್ರೌಡಂರ್ ಆಟಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಕ್ರಿಡಾಭಿಮಾನಿಗಳು ಹೇಳಲಾಗುತ್ತದ್ದ ವೇಳೆ ಸಿಕ್ಕಿರುವ ಅವಕಾಶ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದನೋಡಬೇಕಿದೆ.
ಬೌಲಿಂಗ್ ಹೊಣೆ ಅರ್ಷದೀಪ್ಗೆ: ವಿಶ್ವಕಪ್ನಲ್ಲಿ ಪದಾರ್ಪಣೆ ಮಾಡಿದ ಅರ್ಷದೀಪ್ ಸಿಂಗ್ಗೆ ಬೌಲಿಂಗ್ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್, ಹರ್ಷಲ್ ಪಟೇಲ್ ಇದ್ದು, ಸ್ಪಿನ್ ವಿಭಾಗವನ್ನು ಅನುಭವಿ ಯಜುವೇಂದ್ರ ಚಹಾಲ್ ವಹಿಸಿಕೊಂಡಿದ್ದಾರೆ.