ಗುವಾಹಟಿ (ಬರ್ಸಾಪರಾ):ಇಂದಿನಿಂದ ಶ್ರೀಲಂಕಾ ವಿರುದ್ಧ ಆರಂಭವಾಗಿರುವ ಏಕದಿನ ಸರಣಿಯಲ್ಲಿ ಭಾರತ ತಂಡದ ಮಾಜಿ ನಾಯಕ ರನ್ ಮಷಿನ್ ವಿರಾಟ್ ಕೊಹ್ಲಿ ಶತಕ ದಾಖಲಿಸಿ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ವಿರಾಟ್ ಮುರಿದಿದ್ದಾರೆ. ತಮ್ಮ 45ನೇ ಏಕದಿನ ಶತಕವನ್ನು ಕೊಹ್ಲಿ ಪೂರೈಸಿದ್ದಾರೆ.
ಟಾಸ್ ಸೊತು ಮೊದಲು ಬ್ಯಾಟ್ ಮಾಡಿದ ಭಾರತ ಏಳು ವಿಕೆಟ್ ನಷ್ಟಕ್ಕೆ 373 ರನ್ ದಾಖಲಿಸಿದೆ. ಭಾರತ ಉತ್ತಮ ಆರಂಭಿಕ ಜೊತೆಯಾಟ ಕಂಡ ನಂತರ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆ ಆದರು. ಒಂದು ಕಡೆ ವಿಕೆಟ್ಗಳನ್ನು ಭಾರತ ಕಳೆದು ಕೊಳ್ಳುತ್ತಿದ್ದರೆ, ಕೊಹ್ಲಿ ಬಲವಾಗಿ ನಿಂತು ಶತಕ ದಾಖಲಿಸಿದರು.
ಒಂದು ದೇಶದ ಮೇಲೆ ಹೆಚ್ಚು ಶತಕ ದಾಖಲಿಸಿದ ಕೊಹ್ಲಿ: ವಿರಾಟ್ ಕೊಹ್ಲಿಯ ಏಕದಿನ ವೈಯುಕ್ತಿಕ 45ನೇ ಶತಕ ಇದಾಗಿದೆ. ಒಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 73ನೇ ಶತಕ ಇದಾಗಿದೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಶತಕ ದಾಖಲಿಸಿದ್ದರು. ವಿರಾಟ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೇ ಸಚಿನ್ ತೆಂಡೂಲ್ಕರ್ ಲಂಕಾ ವಿರುದ್ಧ 8 ಶತಕಗಳನ್ನು ದಾಖಲಿಸಿದ್ದರು. ವಿರಾಟ್ ಕೊಹ್ಲಿಯ ಈ ಶತಕದಿಂದ ಸಿಂಹಳೀಯರ ವಿರುದ್ಧ ದಾಖಲಿಸಿದ 9ನೇ ಶತಕ ಇದಾಗಿದೆ. ಈ ಮೂಲಕ ಲಂಕನ್ನರ ವಿರುದ್ಧ ಸಚಿನ್ ಅವರು ದಾಖಲಿಸಿದ್ದ ಶತಕದ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ವಿರಾಟ್ ವೆಸ್ಟ ಇಂಡೀಸ್ ಮೇಲೆ 9 ಶತಕ ದಾಖಲಿಸಿದ ದಾಖಲೆ ಈ ಹಿಂದೆಯೇ ಮಾಡಿದ್ದರು.
ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್ ದೇವರು 9 ಶತಕ ಗಳಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಾಂಗರೂಗಳ ವಿರುದ್ಧ 8 ಶತಕ ಗಳಿಸಿದ್ದಾರೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ನಡೆಯಲಿರುವ ಪಂದ್ಯದಲ್ಲಿ ಯಾರು ಶತಕ ದಾಖಲಿಸಿ ಸಚಿನ್ ದಾಖಲೆ ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ತವರು ನೆದಲ್ಲಿ 20 ಶತಕ ಗಳಿಸಿದ ದಾಖಲೆ:ಭಾರತದಲ್ಲಿ ಆಡಿದ 99 ಇನ್ನಿಂಗ್ಸ್ನಲ್ಲಿ 20 ಶತಕಗಳನ್ನು ಕೊಹ್ಲಿ ದಾಖಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ 160 ಇನ್ನಿಂಗ್ಸ್ನಿಂದ 20 ಶತಕ ದಾಖಲಿಸಿದ್ದರು. ಆಶಿಮ್ ಆಮ್ಲ ದಕ್ಷಣ ಆಫ್ರಿಕಾದಲ್ಲಿ 69 ಇನ್ನಿಂಗ್ಸ್ನಿಂದ 14 ಶತಕ ಮತ್ತು ರಿಕ್ಕಿ ಪಾಂಟಿಂಗ್ 151 ಇನ್ನಿಂಗ್ಸ್ನಿಂದ 14 ಶತಕಗಳನ್ನು ಆಸ್ಟ್ರೇಲಿಯಾದಲ್ಲೇ ಗಳಿಸಿದ್ದಾರೆ.