ಕರ್ನಾಟಕ

karnataka

ETV Bharat / sports

ಭಾರತ-ದ.ಆಫ್ರಿಕಾ T-20 ಸರಣಿ: ಬೆಂಗಳೂರಲ್ಲಿ ಕೊನೆಯ ಪಂದ್ಯ... ಇಲ್ಲಿದೆ ಟಿಕೆಟ್ ದರ, ಬುಕ್ಕಿಂಗ್ ಮಾಹಿತಿ - Chinnaswamy Stadium

ಭಾರತ ಹಾಗೂ ದಕ್ಷಿಣ ಆಪ್ರಿಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಬೆಂಗಳೂರಿನಲ್ಲಿ ಜೂನ್ 19ರಂದು ಭಾನುವಾರ ನಡೆಯಲಿದೆ. ಜೂನ್ 12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಟಿಕೆಟ್ ಮಾರಾಟ ಮಾಡಲಾಗುತ್ತದೆ ಎಂದು ಕೆಎಸ್‌ಸಿಎ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣ

By

Published : Jun 5, 2022, 9:46 AM IST

ಬೆಂಗಳೂರು: ಭಾರತ - ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ-20 ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಇದೇ ಜೂನ್ 12 ರಿಂದ ಆನ್‌ಲೈನ್ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್ ಮಾರಾಟ ಆರಂಭವಾಗಲಿದೆ.

ಟಿಕೆಟ್ ದರ ಈ ಕೆಳಗಿನಂತಿದೆ ( ಬಾಕ್ಸ್ ಆಫೀಸ್ ):

  • ಜಿ ಅಪ್ಪರ್, ಲೋವರ್ 1 ಹಾಗೂ ಲೋವರ್ 2 - 750 ರೂ. (ಗೇಟ್ ನಂಬರ್ - 5, ಕಬ್ಬನ್ ರಸ್ತೆ)
  • ಎ ಅಪ್ಪರ್, ಬಿ ಅಪ್ಪರ್ ಹಾಗೂ ಲೋವರ್ - 2,000 ರೂ. (ಗೇಟ್ ನಂಬರ್ - 2, ಕಬ್ಬನ್ ರಸ್ತೆ)
  • ಡಿ ಕಾರ್ಪೊರೇಟ್ - 4,000 ರೂ. (ಗೇಟ್ ನಂಬರ್ - 19, ಕ್ವೀನ್ಸ್ ರಸ್ತೆ)
  • ಎನ್.ಸ್ಟ್ಯಾಂಡ್ - 5,000 ರೂ. (ಗೇಟ್ ನಂಬರ್ - 18, ಕ್ವೀನ್ಸ್ ರಸ್ತೆ)
  • ಇ-ಎಕ್ಸಿಕ್ಯುಟಿವ್ - 6,000 ರೂ. (ಗೇಟ್ ನಂಬರ್ - 18, ಕ್ವೀನ್ಸ್ ರಸ್ತೆ)

ಆನ್‌ಲೈನ್‌ ಟಿಕೆಟ್​ ದರ:

  • ಗ್ರ್ಯಾಂಡ್ ಟೆರೇಸ್ - 6,000 ರೂ.
  • ಪಿ ಕಾರ್ಪೊರೇಟ್ - 10,000 ರೂ.
  • ಪೆವಿಲಿಯನ್ ಟೆರೇಸ್ - 15,000 ರೂ.
  • ಪಿ-2 ಸ್ಟ್ಯಾಂಡ್ - 20,000 ರೂ.
    ಟಿಕೆಟ್ ದರದ ಮಾಹಿತಿ

ಜೂನ್ 12 ರಂದು ಬಾಕ್ಸ್ ಆಫೀಸ್‌ನಲ್ಲಿ ಟಿಕೆಟ್ ಖರೀದಿಸಲು ಅವಕಾಶವಿರಲಿದ್ದು, ಬಿಕರಿಯಾಗದೆ ಉಳಿದ ಟಿಕೆಟ್‌ಗಳನ್ನ 13 ರಂದು ಪೇಟಿಎಂ ಮೂಲಕ ಖರೀದಿಸಲು ಅವಕಾಶವಿರಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 9 ರಿಂದ ಭಾರತ-ದ.ಆಫ್ರಿಕಾ ಮಧ್ಯೆ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ದೆಹಲಿಯಲ್ಲಿ ಆಯೋಜನೆಯಾಗಿದೆ. ಅಂತಿಮ ಪಂದ್ಯ ಜೂನ್ 19 ರಂದು ನಡೆಯಲಿದೆ. ಕನ್ನಡಿಗ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸಂಗತಿಯೆಂದರೆ ಈ ಸರಣಿಯ ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪ್ರೇಕ್ಷಕರ ಸಂಪೂರ್ಣ ಹಾಜರಾತಿಯೊಂದಿಗೆ ಈ ಪಂದ್ಯ ಆಯೋಜನೆಯಾಗಲಿದೆ. ಈಗಾಗಲೇ ಭಾರತ ಯುವ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇನ್ನು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಹೀಗಾಗಿ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ:ಫ್ರೆಂಚ್‌ ಓಪನ್‌ : ಕೊಕೊ ಗಾಫ್‌ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಇಗಾ ಸ್ವಿಯಾಟೆಕ್‌

ABOUT THE AUTHOR

...view details