ಕರ್ನಾಟಕ

karnataka

ETV Bharat / sports

IND vs SA: ರೋಹಿತ್ ಸೇರಿ ಹಿರಿಯ ಪ್ಲೇಯರ್ಸ್​ಗೆ ವಿಶ್ರಾಂತಿ.. ತಂಡ ಮುನ್ನಡೆಸಲಿರುವ ಹಾರ್ದಿಕ್​? - ದಕ್ಷಿಣ ಆಫ್ರಿಕಾ ಶಿಖರ್ ಧವನ್

ಜೂನ್​ 9ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ವಿಶ್ವಕಪ್ ಟೂರ್ನಿಗೋಸ್ಕರ ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

Hardik Pandya
Hardik Pandya

By

Published : May 14, 2022, 8:01 PM IST

ಮುಂಬೈ:ಇಂಡಿಯನ್​ ಪ್ರೀಮಿಯರ್ ಲೀಗ್​​ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಪುರುಷರ ತಂಡ ಜೂನ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಈ ಟೂರ್ನಿ ಭಾರತದಲ್ಲಿ ನಡೆಯಲಿದ್ದು, ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಕೆಲ ಹಿರಿಯ ಪ್ಲೇಯರ್ಸ್​​ಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಜೂನ್​ 9ರಿಂದ ಸರಣಿ ಆರಂಭಗೊಳ್ಳಲಿದ್ದು, ನವದೆಹಲಿ, ಕಟಕ್​, ವಿಶಾಖಪಟ್ಟಣಂ, ರಾಜಕೋಟ್ ಹಾಗೂ ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ, ಆರಂಭಿಕ ಬ್ಯಾಟರ್ ಕೆ.ಎಲ್​ ರಾಹುಲ್​, ವೇಗಿ ಜಸ್ಪ್ರಿತ್ ಬುಮ್ರಾ, ರಿಷಭ್ ಪಂತ್ ಹಾಗೂ ವಿರಾಟ್​ ಕೊಹ್ಲಿ ಈ ಟೂರ್ನಿಯಿಂದ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಹಿರಿಯ ಪ್ಲೇಯರ್ಸ್​ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ಜವಾಬ್ದಾರಿ ಆರಂಭಿಕ ಎಡಗೈ ಬ್ಯಾಟರ್​​ ಶಿಖರ್ ಧವನ್ ಅಥವಾ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ನಿರ್ವಹಿಸುವ ಸಾಧ್ಯತೆ ದಟ್ಟವಾಗಿದೆ. ಗುಜರಾತ್​ ಟೈಟನ್ಸ್ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡು, ಗಮನಾರ್ಹ ಪ್ರದರ್ಶನ ನೀಡಿರುವ ಪಾಂಡ್ಯಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ತಂಡದ ಆರಂಭಿಕ ಬ್ಯಾಟರ್ ಶಿಖರ್ ಧವನ್​

ಇದನ್ನೂ ಓದಿ:ಋತುರಾಜ್ ಬಳಿ ಧೋನಿ ನಿರೀಕ್ಷೆಯ ಎಲ್ಲ ಅರ್ಹತೆಯಿದೆ, CSK ನಾಯಕತ್ವಕ್ಕೆ ಆತನೇ ಸೂಕ್ತ: ಸೆಹ್ವಾಗ್​

ಹಿರಿಯ ಪ್ಲೇಯರ್ಸ್​​ಗೆ ವಿಶ್ರಾಂತಿ: ಲಭ್ಯವಾಗಿರುವ ಮಾಹಿತಿ ಪ್ರಕಾರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಮೇ. 22ರಂದು ಆಯ್ಕೆಯಾಗಲಿದೆ. ಮುಂಬರುವ ಇಂಗ್ಲೆಂಡ್ ಸರಣಿ ಗಮನದಲ್ಲಿಟ್ಟುಕೊಂಡು ಕೆಲ ಹಿರಿಯ ಪ್ಲೇಯರ್ಸ್​ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಐಪಿಎಲ್​​ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಮೊಸಿನ್ ಖಾನ್​ ಹಾಗೂ ಜಮ್ಮು- ಕಾಶ್ಮೀರ ವೇಗಿ ಉಮ್ರಾನ್ ಮಲಿಕ್ ಸಹ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದ್ದು, ಡೆತ್​ ಓವರ್​​ ಸ್ಪೆಷಲಿಸ್ಟ್​ ಅರ್ಷದೀಪ್​ ಸಿಂಗ್​ ಸಹ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.

ಟೀಂ ಇಂಡಿಯಾದ ಖಾಯಂ ಸದಸ್ಯನಾಗಿದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನುನೋವಿನ ಶಸ್ತ್ರಚಿಕಿತ್ಸೆಗೊಳಗಾದ ನಂತರ, ತಂಡದಿಂದ ಹೊರಬಿದ್ದಿದ್ದರು. ಇದೀಗ ಐಪಿಎಲ್​​ ಮೂಲಕ ಭರ್ಜರಿಯಾಗಿ ಕಮ್​​ಬ್ಯಾಕ್ ಮಾಡಿದ್ದಾರೆ.

ಯಾರಿಗೆಲ್ಲ ಮಣೆ?: ಋತುರಾಜ್ ಗಾಯಕ್ವಾಡ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಜೊತೆಗೆ ಸಂಜು ಸ್ಯಾಮ್ಸನ್​​, ಭುವನೇಶ್ವರ್ ಕುಮಾರ್ ,ಪ್ರಸಿದ್ಧ್ ಕೃಷ್ಣ, ಹರ್ಷಲ್​ ಪಟೇಲ್, ಆವೇಶ್ ಖಾನ್​, ಆರ್​. ಅಶ್ವಿನ್​, ಯಜುವೇಂದ್ರ ಚಹಲ್​ ಹಾಗೂ ಕುಲ್ದೀಪ್ ಯಾದವ್​ಗೆ ಮಣೆ ಹಾಕುವ ಸಾಧ್ಯತೆ ಇದೆ. ಇದರ ಜೊತೆಗೆ ಉಮ್ರಾನ್ ಮಲಿಕ್​, ಅರ್ಷದೀಪ್ ಸಿಂಗ್​ ಸಹ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.

ABOUT THE AUTHOR

...view details