ಕರ್ನಾಟಕ

karnataka

ETV Bharat / sports

India vs South Africa ODI: ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ.. ಗೆದ್ದವರಿಗೆ ಸರಣಿ ಸಿಹಿ

ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ಇಂದು ನಡೆಯುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಸರಣಿ ನಿರ್ಣಯ ಮಾಡಲಿದೆ.

india-vs-south-africa-3rd-odi
ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

By

Published : Oct 11, 2022, 12:25 PM IST

Updated : Oct 11, 2022, 12:46 PM IST

ನವದೆಹಲಿ:ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ಇಂದು ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗೆಲ್ಲುವ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ. 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ರಲ್ಲಿ ಸಮಬಲ ಸಾಧಿಸಿವೆ.

ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ತೆರಳಿರುವ ರೋಹಿತ್​ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಗಬ್ಬರ್​ ಸಿಂಗ್​ ಖ್ಯಾತಿಯ ಶಿಖರ್​ ಧವನ್​ ಸರಣಿಯನ್ನು ಗೆದ್ದು ಸಾಮರ್ಥ್ಯ ಸಾಬೀತುಪಡಿಸುವ ಹುಮ್ಮಸ್ಸಿನಲ್ಲಿದ್ದಾರೆ. ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ರನ್​ ಗಳಿಸಲು ವಿಫಲವಾಗಿದ್ದು, ಕೊನೆಯ ಪಂದ್ಯದಲ್ಲಿ ಸಿಡಿದು ವಿಶ್ವಕಪ್​ಗೆ ತಾವು ಫಿಟ್​ ಎಂಬುದನ್ನು ಸಾಬೀತು ಮಾಡಬೇಕಿದೆ.

ಇನ್ನೊಬ್ಬ ಆರಂಭಿಕ ಆಟಗಾರ ಶುಭ್​ಮನ್​ ಗಿಲ್ ಕೂಡ ವೈಫಲ್ಯ ಅನುಭವಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​, ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​ ಭರ್ಜರಿ ಬ್ಯಾಟಿಂಗ್​ ಮಾಡಿ ದೊಡ್ಡ ಮೊತ್ತ ಕಲೆ ಹಾಕುತ್ತಿದ್ದಾರೆ. ಇದು ತಂಡಕ್ಕೆ ನೆರವಾಗಿದೆ.

ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ, 2ನೇ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿ ಗೆಲುವು ಸಾಧಿಸಿತ್ತು. ಇಲ್ಲಿ ಶ್ರೇಯಸ್​ ಅಯ್ಯರ್​ ಶತಕ ಸಾಧನೆ ಮಾಡಿದರೆ, ಇಶಾನ್​ ಕಿಶನ್​ ಸ್ವಲ್ಪದರಲ್ಲೇ ಶತಕ ವಂಚಿತರಾಗಿದ್ದರು. ಮೊದಲ ಅವಕಾಶವನ್ನು ಬಾಚಿ ತಬ್ಬಿಕೊಂಡ ಶಹಬಾಜ್ ಅಹ್ಮದ್ 1 ವಿಕೆಟ್​ ಉರುಳಿಸಿ ಆಯ್ಕೆ ಸಮರ್ಥಿಸಿಕೊಂಡರೆ, ದೀಪಕ್ ಚಹರ್ ಬದಲಿಗೆ ಕಣಕ್ಕಿಳಿದಿರುವ ವಾಷಿಂಗ್ಟನ್ ಸುಂದರ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.

ಅಂತಾರಾಷ್ಟ್ರೀಯ ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಬೆಂಚ್​ ಕಾಯುತ್ತಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬೌಲಿಂಗ್​ನಲ್ಲಿ ಮೊಹಮದ್ ಸಿರಾಜ್​ ಮಿಂಚುತ್ತಿದ್ದ ಕಳೆದ ಪಂದ್ಯದಲ್ಲಿ 3 ವಿಕೆಟ್​ ಪಡೆದಿದ್ದರು. ಶಾರ್ದೂಲ್​ ಠಾಕೂರ್​ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ಕೂಡ ದೈತ್ಯ ಆಟಗಾರರನ್ನು ಹೊಂದಿದ್ದರೂ, 2 ನೇ ಏಕದಿನ ಪಂದ್ಯವನ್ನು ಸೋತು ಸರಣಿ ಗೆಲುವು ತಪ್ಪಿಸಿಕೊಂಡಿದ್ದರು. ಕ್ವಿಂಟನ್​ ಡಿ ಕಾಕ್​, ನಾಯಕ ತೆಂಬ ಬವುಮಾ, ಹೆನ್ರಿಚ್​ ಕ್ಲಾಸಿನ್​, ಡೇವಿಡ್​ ಮಿಲ್ಲರ್​ ಬ್ಯಾಟಿಂಗ್​ನಲ್ಲಿ ಸಿಡಿದರೆ, ಕಗಿಸೋ ರಬಾಡಾ, ಆ್ಯನ್ರಿಚ್​ ನೋಕಿಯಾ ಬೌಲಿಂಗ್​ನಲ್ಲಿ ಮಿಂಚಬೇಕಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ:ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೈದಾನವನ್ನು ಕವರ್​ ಮಾಡಲಾಗಿದೆ. ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.

ಸಂಭಾವ್ಯ ತಂಡಗಳು- ಭಾರತ:ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೇಶ್ ಖಾನ್, ಮೊಹಮದ್ ಸಿರಾಜ್, ಶಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್.

ದಕ್ಷಿಣ ಆಫ್ರಿಕಾ:ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ/ರೀಜಾ ಹೆಂನ್ಸಿಕ್ಸ್​, ಐಡೆನ್ ಮಾರ್ಕ್ರಂ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಜಾರ್ನ್ ಫೋರ್ಚುಯಿನ್/ತಬ್ರೈಜ್ ಶಮ್ಸಿ, ಕಗಿಸೊ ರಬಾಡಾ, ಅನ್ರಿಚ್ ನೋಕಿಯಾ.

ಪಂದ್ಯದ ಸಮಯ- ಮಧ್ಯಾಹ್ನ 1.30 ಗಂಟೆಗೆ

ಓದಿ:ವನಿತೆಯರ ಏಷ್ಯಾಕಪ್​ ಟಿ 20: ಭಾರತಕ್ಕೆ ಸುಲಭ ತುತ್ತಾದ ಥಾಯ್ಲೆಂಡ್​​​, ಸೆಮೀಸ್​ಗೆ ಎಂಟ್ರಿಕೊಟ್ಟ ಇಂಡಿಯನ್​ ವುಮೆನ್ಸ್​

Last Updated : Oct 11, 2022, 12:46 PM IST

ABOUT THE AUTHOR

...view details