ಪಾರ್ಲ್:ದಕ್ಷಿಣ ಆಫ್ರಿಕಾ ವಿರುದ್ಧ ಇಂದು ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಒತ್ತಡದಲ್ಲಿರುವ ಭಾರತ ತಂಡ ಸೋಲಿನ ಸುಳಿಯಿಂದ ಹೊರಬರಬೇಕಾದ ಅನಿವಾರ್ಯತೆ ಎದುರಾಗಿದೆ. ಎದುರಾಳಿ ಆಫ್ರಿಕಾ ತಂಡ ಗೆಲ್ಲಬೇಕೆಂಬ ಹಠದಲ್ಲಿದೆ.
ಹಾಗಾಗಿ ಇಂದು ನಡೆಯುವ ಪಂದ್ಯ ನಿರ್ಣಾಯಕ ಪಂದ್ಯವಾಗಿದ್ದು ಉಭಯ ತಂಡಗಳೆರಡೂ ಸರ್ವಸಿದ್ಧತೆಯಿಂದ ಕಣಕ್ಕಿಳಿದಿವೆ. ಮೊದಲ ಪಂದ್ಯದ ಸೋಲಿನ ಕಹಿಯಿಂದ ಹೊರಬರಲು ಕೆ.ಎಲ್.ರಾಹುಲ್ ನೇತೃತ್ವದ ಟೀಂ ಇಂಡಿಯಾ ರಣತಂತ್ರ ರೂಪಿಸಿದ್ದು, ಎದುರಾಳಿ ತಂಡ ಆಫ್ರಿಕಾ ಗೆದ್ದು ಹೊಸ ಇತಿಹಾಸ ಬರೆಯುವ ಉತ್ಸಾದಲ್ಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಜಾನ್ನೆಮನ್ ಮಲನ್, ಟೆಂಬಾ ಬವುಮಾ(ನಾಯಕ), ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಸಿಸಂದಾ ಮಗಳ, ತಬ್ರೈಜ್ ಶಮ್ಸಿ
ಭಾರತ (ಆಡುವ XI): ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್