ಕೇಪ್ಟೌನ್: ನಾಯಕ ವಿರಾಟ್ ಕೊಹ್ಲಿ ಹೋರಾಟದ ಅರ್ಧಶತಕದ ಹೊರತಾಗಿಯೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 223 ರನ್ಗಳಿಸಿ ಆಲೌಟ್ ಆಗಿದೆ.
ಸರಣಿ ಗೆಲ್ಲಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ಗಳಾದ ಕೆ ಎಲ್ ರಾಹುಲ್(12) ಮತ್ತು ಮಯಾಂಕ್(15)ರನ್ನು ಹರಿಣಗಳ ತಂಡ ವೇಗಿಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ಬಿಡಲಿಲ್ಲ. ರಾಹುಲ್ ಒಲಿವಿಯರ್ಗೆ ವಿಕೆಟ್ ಒಪ್ಪಿಸಿದರೆ, ಮಯಾಂಕ್ ರಬಾಡ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು.
ಆರಂಭಿಕರನ್ನು ಬಹುಬೇಗ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ 3ನೇ ವಿಕೆಟ್ಗೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಪೂಜಾರ 62 ರನ್ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು.
77 ಎಸೆತಗಳಲ್ಲಿ 7 ಬೌಂಡರಿ ಸಹಿತ 43 ರನ್ಗಳಿಸಿದ್ದ ಪೂಜಾರ ಮಾರ್ಕೊ ಜಾನ್ಸನ್ಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ರಹಾನೆ ಕೇವಲ 9 ರನ್ಗಳಿಸಿ ರಬಾಡ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.