ಮುಂಬೈ: ಸಾಂಪ್ರಾದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯಕ್ಕೆ ಕ್ರಿಕೆಟ್ ಜಗತ್ತು ಕೂತೂಹಲದಿಂದ ಎದುರು ನೋಡುತ್ತಿದೆ. ಇಂದಿನಿಂದ ವಿಶ್ವಕಪ್ ಸೂಪರ್ 12 ಆರಂಭವಾಗಲಿದ್ದು, ನಾಳೆ ಪ್ರಸ್ತುತ ಭಾರತ ಮತ್ತು ಪಾಕ್ ಮುಖಾಮುಖಿಯಾಗುತ್ತಿವೆ. ಈ ಹಿಂದಿನ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5-0ಯಲ್ಲಿ ಬಗ್ಗು ಬಡಿದು ಮುನ್ನಡೆ ಸಾಧಿಸಿದೆ. ಇದೀಗ ಈ ವರ್ಷ ಎರಡೂ ತಂಡಗಳು ತಮ್ಮ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವುದು ಟೂರ್ನಿಗೆ ಮತ್ತಷ್ಟು ರೋಚಕತೆ ಒದಗಿಸಿದೆ.
ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತವು ಪಾಕ್ ವಿರುದ್ಧ ಹಿನ್ನಡೆ ಅನುಭವಿಸಿದೆ. ಆದರೆ ವಿಶ್ವಕಪ್ ಎಂದಾಕ್ಷಣ ಪಾಕಿಸ್ತಾನ ಹಲ್ಲಿಲ್ಲದ ಹಾವಿನಂತಾಗುತ್ತದೆ. ಇದಕ್ಕೆ ಸಾಕ್ಷಿಯೆಂದರೆ ಏಕದಿನ ವಿಶ್ವಕಪ್ಗಳಲ್ಲಿ 7 ಬಾರಿ ಮತ್ತು ಟಿ-20 ವಿಶ್ವಕಪ್ಗಳಲ್ಲಿ 5 ಬಾರಿ ಮುಖಾಮುಖಿಯಾಗಿದ್ದರೂ, ಪಾಕಿಸ್ತಾನ ಭಾರತವನ್ನು ಮಣಿಸಲು ಸಾಧ್ಯವಾಗಿಲ್ಲ. ಸಾಂಪ್ರದಾಯಿಕ ಎದುರಾಳಿಗಳ ಹಿಂದಿನ ಮುಖಾಮುಖಿಯ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ..
2007 ಸೆಪ್ಟೆಂಬರ್ 14
ಭಾರತ ಮತ್ತು ಪಾಕಿಸ್ತಾನ ತಂಡಗಳು 2007ರ ಟಿ20 ವಿಶ್ವಕಪ್ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 141 ರನ್ ಗಳಿಸಿತ್ತು. ಚೇಸ್ ಮಾಡಿದ್ದ ಪಾಕಿಸ್ತಾನ ಕೂಡ 141 ರನ್ ಗಳಿಸಿದ್ದರಿಂದ ಫಲಿತಾಂಶಕ್ಕಾಗಿ ಬೌಲ್ಔಟ್ ಮೊರೆ ಹೋಗಲಾಗಿತ್ತು. ಅದರಲ್ಲಿ ಭಾರತ 3-0ಯಲ್ಲಿ ಗೆದ್ದು ಬೀಗಿತ್ತು. ಹರ್ಭಜನ್, ಸೆಹ್ವಾಗ್ ಉತ್ತಪ್ಪ ಬೌಲ್ ಔಟ್ನಲ್ಲಿ ಯಶಸ್ವಿಯಾಗಿದ್ದರು.
2007 ಸೆಪ್ಟೆಂಬರ್ 24
2007 ಚೊಚ್ಚಲ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೇ ಫೈನಲ್ ಪ್ರವೇಶಿಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ 158 ರನ್ಗಳ ಟಾರ್ಗೆಟ್ ನೀಡಿ ಪಾಕಿಸ್ತಾನವನ್ನು 152 ರನ್ಗಳಿಗೆ ಆಲೌಟ್ ಮಾಡುವ ಮೂಲಕ 5 ರನ್ಗಳಿಂದ ಗೆದ್ದು ಬೀಗಿತ್ತು. ಅಲ್ಲದೇ ಜೋಹಾನ್ಸ್ಬರ್ಗ್ನಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
2012 ಸೆಪ್ಟೆಂಬರ್ 30