ಕಾನ್ಪುರ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 5ನೇ ದಿನದಾಟ ನಡೆಯುತ್ತಿದ್ದು, ಅಂತಿಮ ಘಟ್ಟಕ್ಕೆ ತಲುಪಿದೆ. ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದು, ಇಂದು ತೀರ್ಪು ಸಿಗಲಿದೆ. ಇಂದಿನ ದಿನದ ಆಟಕ್ಕೆ (ಊಟದ ಸಮಯ) 1 ವಿಕೆಟ್ ಕಳೆದುಕೊಂಡಿತ್ತು. ಸದ್ಯ ನ್ಯೂಜಿಲ್ಯಾಂಡ್ ತಂಡ 2 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ.
ನಿನ್ನೆಯ ದಿನದ ಆಟಕ್ಕೆ ನ್ಯೂಜಿಲ್ಯಾಂಡ್ ತಂಡ 1 ವಿಕೆಟ್ ಕಳೆದುಕೊಂಡು 4 ರನ್ ಕಲೆ ಹಾಕಿತ್ತು. ಇಂದು ಮತ್ತೆ ಆಟವನ್ನು ಮುಂದುವರೆಸಿರುವ ನ್ಯೂಜಿಲ್ಯಾಂಡ್ ಬಳಗ ಗೆಲುವಿಗಾಗಿ ಹೋರಾಟ ನಡೆಸಿದೆ.