ಕರ್ನಾಟಕ

karnataka

ETV Bharat / sports

ಟೆಸ್ಟ್​ ಚಾಂಪಿಯನ್​ಶಿಪ್ 3 ಪಂದ್ಯಗಳ ಫೈನಲ್ ಆಗಿದ್ದರೆ ಸೂಕ್ತವಾಗಿರುತ್ತಿತ್ತು: ಕಪಿಲ್ ದೇವ್​

ಟೆಸ್ಟ್​ ಕ್ರಿಕೆಟ್​ ಜನಪ್ರಿಯಗೊಳಿಸುವುದಕ್ಕೆ ಜನರ ಮುಂದೆ ಇಂತಹ ಒಳ್ಳೆಯ ಟೂರ್ನಿಯ ಆಯೋಜನೆ ಮಾಡಿರುವುದಕ್ಕೆ ಐಸಿಸಿಯನ್ನು ಭಾರತ ತಂಡದ ಮಾಜಿ ನಾಯಕ ಸ್ಮರಿಸಿದ್ದಾರೆ. ಆದರೆ, ಈ ಟೂರ್ನಿ ಕ್ರಿಕೆಟ್​ ಸ್ವರ್ಗ ಲಾರ್ಡ್ಸ್​ನಲ್ಲಿ ನಡೆದಿದ್ದರೆ ಅದ್ಭುತವಾಗಿರುತ್ತಿತ್ತು ಎಂದು ತಿಳಿಸಿದ್ದಾರೆ.

ಟೆಸ್ಟ್​ ಚಾಂಪಿಯನ್​ಶಿಪ್
ಕಪಿಲ್ ದೇವ್

By

Published : May 27, 2021, 4:06 PM IST

ಮುಂಬೈ:ಟೆಸ್ಟ್​ ಕ್ರಿಕೆಟ್​ನ ಪ್ರಮುಖ ಟೂರ್ನಿಯಾಗಿರುವ ವಿಶ್ವ ಟೆಸ್ಟ್​ ಚಾಂಪಿಯರ್ನ್​ಶಿಪ್​ ಫೈನಲ್ ಮೂರು ಪಂದ್ಯಗಳನ್ನು ಒಳಗೊಂಡಿದ್ದರೆ ಸೂಕ್ತವಾಗಿರುತ್ತಿತ್ತು ಎಂದು 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್​ ಅಭಿಪ್ರಾಯಪಟ್ಟಿದ್ದಾರೆ.

"ಮಹತ್ವದ ಪ್ರಶಸ್ತಿಯನ್ನು ನಿರ್ಧರಿಸಲು ನಾನು ಕೇವಲ ಒಂದು ಪಂದ್ಯಕ್ಕಿಂತ ಹೆಚ್ಚಿನ ಒಂದ್ಯಗಳಿಗೆ ಆದ್ಯತೆ ನೀಡುತ್ತಿದ್ದೆ. ಖಂಡಿತ, ಈ ದಿನಗಳಲ್ಲಿ ಪಂದ್ಯಕ್ಕಾಗಿ ತಯಾರಿ ಮಾಡುವುದು ದೊಡ್ಡ ವಿಷಯವಲ್ಲ" ಎಂದು ಕಪಿಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ ಜನಪ್ರಿಯಗೊಳಿಸುವುದಕ್ಕೆ ಜನರ ಮುಂದೆ ಇಂತಹ ಒಳ್ಳೆಯ ಟೂರ್ನಿಯ ಆಯೋಜನೆ ಮಾಡಿರುವುದಕ್ಕೆ ಐಸಿಸಿಯನ್ನು ಭಾರತ ತಂಡದ ಮಾಜಿ ನಾಯಕ ಸ್ಮರಿಸಿದ್ದಾರೆ. ಆದರೆ, ಈ ಟೂರ್ನಿ ಕ್ರಿಕೆಟ್​ ಸ್ವರ್ಗ ಲಾರ್ಡ್ಸ್​ನಲ್ಲಿ ನಡೆದಿದ್ದರೆ ಅದ್ಭುತವಾಗಿರುತ್ತಿತ್ತು ಎಂದು ತಿಳಿಸಿದ್ದಾರೆ.

" ಇದು ಟೆಸ್ಟ್ ಪಂದ್ಯಗಳನ್ನು ಜನಪ್ರಿಯಗೊಳಿಸಲು ಐಸಿಸಿ ಈ ಯೋಜನೆ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಕ್ರಿಕೆಟ್ ಸಿಗುತ್ತದೆ ಎಂದು ನನಗೆ ಖಾತ್ರಿಯಿದೆ. ಆದರೆ, ಮೂರು ಟೆಸ್ಟ್ ಫೈನಲ್ ಪಂದ್ಯಗಳ ಫೈನಲ್ ಉತ್ತಮವಾಗಬಹುದೆಂದು ನಾನು ಭಾವಿಸುತ್ತೇನೆ " ಎಂದು ಕ್ರಿಕೆಟ್​ ಕಂಡ ಪ್ರಸಿದ್ಧ ಆಲ್​​ರೌಂಡರ್​ಹೇಳಿದ್ದಾರೆ.

ಹಾಗೆಯೇ ರೋಸ್‌ ಬೌಲ್‌ ಬದಲು ಇತಿಹಾಸ ಪ್ರಸಿದ್ಧ ಲಾರ್ಡ್ಸ್‌ ಅಥವಾ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಬಹುದಿತ್ತು. ಲಾರ್ಡ್ಸ್‌ನಲ್ಲಿ ಗೆದ್ದಾಗ ಸಿಗುವ ಸಂಭ್ರಮವೇ ಬೇರೆ ಎಂದು ಕಪಿಲ್ ದೇವ್​ ಹೇಳಿದ್ದಾರೆ.

ಇದನ್ನು ಓದಿ: ಈ ಕಾರಣದಿಂದ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕಿಂತ ನ್ಯೂಜಿಲ್ಯಾಂಡ್​ಗೆ ಫೇವರಿಟ್: ಪ್ಯಾಟ್ ಕಮಿನ್ಸ್

ABOUT THE AUTHOR

...view details