ರಾಂಚಿ(ಜಾರ್ಖಂಡ್):ಭಾರತ ನ್ಯೂಜಿಲ್ಯಾಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ 21 ರನ್ಗಳಿಂದ ಸೋಲನಿಭವಿಸಿತು. ಇದುವರೆಗೂ ರಾಂಚಿ ಕ್ರೀಡಾಂಗಣದಲ್ಲಿ ಸೋಲು ಕಂಡಿರದ ಬ್ಲೂ ಬಾಯ್ಸ್ ನಿನ್ನೆ ಅಂತಿಮ ಓವರ್ನ ಬೌಲಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯ ಕಂಡು ಸಾಧಾರಣ ಗುರಿ ಮುಟ್ಟುವಲ್ಲಿ ಎಡವಿದರು. ವಾಷಿಂಗ್ಟನ್ ಸುಂದರ್(50), ಸೂರ್ಯಕುಮಾರ್ ಯಾದವ್ (47) ಮತ್ತು ನಾಯಕ ಹಾರ್ದಿಕ್ (21) ಬಿಟ್ಟರೆ ಮತ್ತಾರು ಬ್ಯಾಟಿಂಗ್ ಮಾಡದೇ ಬಾಲಂಗೋಚಿಗಳಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಮುಳುವಾದ ಕೊನೆಯ ಓವರ್: ಬಾಂಗ್ಲ ಮತ್ತು ಲಂಕಾದ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ನಿನ್ನೆ ಕೊನೆಯ ಓವರ್‌ನಲ್ಲಿ ದುಬಾರಿಯಾದರು. ಪಂದ್ಯದಲ್ಲಿ ಡೆವೊನ್ ಕಾನ್ವೇ ಮತ್ತು ಡೇರಿಲ್ ಮಿಚೆಲ್ ಅವರ ವಿಕೆಟ್ ತೆಗೆಯಲು ಏಳು ಜನ ಬೌಲರ್ಗಳನ್ನು ಹಾರ್ದಿಕ್ ಆಡಿಸಿದರು. ಆರಂಭಿಕ ಮೂರು ಓವರ್ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ ಸಿಂಗ್ ಅಂತಿಮ ಆರು ಬಾಲ್ಗಳಲ್ಲಿ ಎಡವಿದರು.
ಆರು ಬಾಲ್ಗೆ 27ರನ್ ನೀಡಿದ ಅರ್ಷದೀಪ್ ನಿನ್ನೆ 4 ಓವರ್ಗೆ 51 ರನ್ ಬಿಟ್ಟುಕೊಟ್ಟರು. ಮೊದಲ ಮೂರು ಓವರ್ಗಳಲ್ಲಿ 24 ರನ್ ಮಾತ್ರ ನೀಡಿ ಎಫೆಕ್ಟೀವ್ ಎನಿಸಿಕೊಂಡಿದ್ದರು. ಆದರೆ, ಕೊನೆಯ ಓವರ್ ಆರಂಭವೇ ನೋ ಬಾಲ್ನಿಂದ ಮಾಡಿದರು ಇದನ್ನು ಬಳಸಿಕೊಂಡ ಡೇರಿಲ್ ಮಿಚೆಲ್ ಸಿಕ್ಸ್ಗೆ ಅಟ್ಟಿದರು. ಇದರ ಜೊತೆಗೆ ಮತ್ತೆರಡು ಸಿಕ್ಸರ್, ಒಂದು ಫೋರ್ ಹಾಗೂ ನಾಲ್ಕು ಓಟಗಳನ್ನು ಮಾಡಿ ಒಟ್ಟು 27 ರನ್ ಕೊನೆ ಒಂದು ಓವರ್ನಲ್ಲೆ ಗಳಿಸಿಕೊಂಡರು.
ಸುಂದರ್ ಅದ್ಭುತ ಆಲ್ರೌಂಡ್ ಆಟ:ಒಂದೆಡೆ ತಂಡ ಕುಸಿತ ಕಂಡಿದ್ದರು ವಾಷಿಂಗ್ಟನ್ ಸುಂದರ್ ತಮ್ಮ ಬ್ಯಾಟಿಂಗ್ನಲ್ಲಿ ಕಿವೀಸ್ ಬೌಲರ್ಗಳನ್ನು ಕಾಡಿದರು. ಪಂದ್ಯದ ಕೊನೆಯ ಓವರ್ವರೆಗೂ ಹೋರಾಡಿದ ಸುಂದರ್ 28 ಎಸೆತದಲ್ಲಿ 5 ಬೌಂಡರಿ ಮತ್ತು ಮೂರು ಸಿಕ್ಸರ್ನಿಂದ 50 ರನ್ಗಳಿಸಿದ್ದರು. ಬೌಲಿಂಗ್‌ನಲ್ಲಿ 4 ಓವರ್ಗೆ ಕೇವಲ 22 ರನ್ ಬಿಟ್ಟು ಕೊಟ್ಟು 2 ವಿಕೆಟ್ ಕೂಡ ಕಬಳಿಸಿದ್ದರುಬ.