ಕರ್ನಾಟಕ

karnataka

ETV Bharat / sports

IND vs NZ: ಭಾರತ ವಿರುದ್ಧದ ಟೆಸ್ಟ್‌ಗೆ ಗಾಯಾಳು ಕಾನ್ವೆ ಬದಲಿಗೆ ಈ ಆಟಗಾರನಿಗೆ ಕಿವೀಸ್ ಮಣೆ​ - ನ್ಯೂಜಿಲೆಂಡ್‌ ಕ್ರಿಕೆಟ್​ ತಂಡದ ಭಾರತ ಪ್ರವಾಸ

ಮುಂದಿನ ವಾರ ಭಾರತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯ (India vs New Zealand Cricket Series) ನಂತರ ಕಾನ್ವೆ ಟಿ20 ತಂಡದೊಂದಿಗೆ ತವರಿಗೆ ಮರಳಲಿದ್ದಾರೆ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೀಡ್ (Gary Stead) ಹೇಳಿದ್ದಾರೆ.

India vs New Zealand: Daryl Mitchell replaces injured Devon Conway for Test series
IND vs NZ: ಟೆಸ್ಟ್​ ಸರಣಿ

By

Published : Nov 14, 2021, 10:01 AM IST

ಕ್ರೈಸ್ಟ್‌ಚರ್ಚ್:ಮುಂಬರುವ ಭಾರತ ಪ್ರವಾಸಕ್ಕೆ ನ್ಯೂಜಿಲೆಂಡ್‌ (New Zealand tour of India) ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್ವೆ (Devon Conway) ಬದಲಿಗೆ ಡೇರಿಲ್ ಮಿಚೆಲ್ (Daryl Mitchell) ಅವರು ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್​ (T20 world cup) ಸೆಮಿಫೈನಲ್​ ಪಂದ್ಯದ ವೇಳೆ ಔಟಾದ ಹತಾಶೆಯಲ್ಲಿ ಕಾನ್ವೆ ತಮ್ಮ ಬ್ಯಾಟ್​ಗೆ ಜೋರಾಗಿ ಗುದ್ದಿದ್ದರಿಂದ ಬಲಗೈ ಕಿರು ಬೆರಳಿನ ಮೂಳೆ ಮುರಿದಿತ್ತು.

ಇಂದು ನಡೆಯಲಿರುವ ಟಿ20 ವಿಶ್ವಕಪ್​ ಫೈನಲ್ (T20 World Cup Final)​ ಪಂದ್ಯಕ್ಕೂ ಕೂಡ ಕಾನ್ವೆ ಅಲಭ್ಯರಾಗಿದ್ದಾರೆ. ಟೂರ್ನಿಯಲ್ಲಿ ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ 38 ಎಸೆತಗಳಲ್ಲಿ 46 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕಾನ್ವೆ, ಲಿವಿಂಗ್​​ಸ್ಟೋನ್​ ಬೌಲಿಂಗ್​ನಲ್ಲಿ ದೊಡ್ಡ ಎಸೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆಗಿದ್ದರು. ಔಟಾದ ಹತಾಶೆಯಲ್ಲಿ ತಮ್ಮ ಬ್ಯಾಟ್​ಗೆ ಜೋರಾಗಿ ಗುದ್ದಿದ್ದರು.

ಮುಂದಿನ ವಾರ ಭಾರತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯ (India vs New Zealand Cricket Series) ನಂತರ ಕಾನ್ವೆ ಟಿ20 ತಂಡದೊಂದಿಗೆ ತವರಿಗೆ ಮರಳಲಿದ್ದಾರೆ ಎಂದು ಮುಖ್ಯ ಕೋಚ್ ಗ್ಯಾರಿ ಸ್ಟೀಡ್ (Gary Stead) ಹೇಳಿದ್ದಾರೆ. ಆದರೆ ಮಿಚೆಲ್ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಎರಡು ಟೆಸ್ಟ್ ಸರಣಿಯಲ್ಲಿ ಆಡಲು ಭಾರತದಲ್ಲೇ ಉಳಿದುಕೊಳ್ಳಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ (World Test Championship) ಅವಧಿಯ ಮೊದಲ ಸರಣಿಯಲ್ಲೇ ಡೆವೊನ್ ತಪ್ಪಿಸಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ. ಆದರೆ ಕಾನ್ವೆ ಅಲಭ್ಯತೆಯು ಬೇರೆಯವರಿಗೆ ಅವಕಾಶ ನೀಡಲಿದೆ ಎಂದು ಸ್ಟೀಡ್ ಹೇಳಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ (NZC) ತಿಳಿಸಿದೆ.

ಇದನ್ನೂ ಓದಿ:ಫೈನಲ್​ಗೆ ಮುನ್ನ ಕಿವೀಸ್​ಗೆ ಆಘಾತ; ಬ್ಯಾಟ್​ಗೆ ಗುದ್ದಿ ಕೈಬೆರಳು ಮುರಿದಕೊಂಡ ಕಾನ್ವೆ ವಿಶ್ವಕಪ್​ನಿಂದ ಔಟ್​!

ಡೇರಿಲ್ (Daryl Mitchell) ಪ್ರತಿಭಾವಂತ ಆಟಗಾರನಾಗಿದ್ದು, ತಂಡದ ಬ್ಯಾಟಿಂಗ್ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಸದ್ಯ ಟಿ20 ವಿಶ್ವಕಪ್​ ಯಶಸ್ಸಿನಲ್ಲಿರುವ ಅವರು ಸಾಕಷ್ಟು ಆತ್ಮವಿಶ್ವಾಸ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ(Test Cricket) ಪ್ರದರ್ಶನ ನೀಡಬಲ್ಲರು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಇದೀಗ ಮತ್ತೆ ದೀರ್ಘಾವಧಿಯ ಮಾದರಿಯ ಕ್ರಿಕೆಟ್​​ ತಂಡಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂದು ಸ್ಟೀಡ್ (Gary Stead) ಹೇಳಿದ್ದಾರೆ.

ಡೇರಿಲ್ ಮಿಚೆಲ್ (Daryl Mitchell)

ಮೂರು ಟಿ20 ಅಂತಾರಾಷ್ಟ್ರೀಯ (India vs New Zealand T20 series) ಪಂದ್ಯಗಳೊಂದಿಗೆ ಕಿವೀಸ್​ ಪ್ರವಾಸವನ್ನು ಆರಂಭಿಸಲಿದ್ದು, ಸೋಮವಾರ ಭಾರತಕ್ಕೆ ಬಂದಿಳಿಯಲಿದೆ. ಮೊದಲ ಟಿ20 (T20 Series) ನವೆಂಬರ್ 17ರಂದು ಜೈಪುರ, ಬಳಿಕ 19ರಂದು ರಾಂಚಿ ಮತ್ತು 21ರಂದು ಕೋಲ್ಕತ್ತಾದಲ್ಲಿ ಇನ್ನೆರಡು ಪಂದ್ಯಗಳು ನಡೆಯಲಿವೆ. ತದನಂತರ ಎರಡು ಟೆಸ್ಟ್​ ಪಂದ್ಯಗಳ ಸರಣಿಯ (India vs New Zealand Test Series) ಮೊದಲ ಪಂದ್ಯ ನವೆಂಬರ್ 25ರಿಂದ ಕಾನ್ಪುರ ಹಾಗೂ ಡಿಸೆಂಬರ್ 3ರಿಂದ ಮುಂಬೈನಲ್ಲಿ ಎರಡನೇ ಟೆಸ್ಟ್ ಪಂದ್ಯವು (Test match) ಆಯೋಜನೆಗೊಂಡಿದೆ.

ಇದನ್ನೂ ಓದಿ:NZ vs AUS T20 World Cup Final: ಯಾರಾಗ್ತಾರೆ ಚುಟುಕು ಕ್ರಿಕೆಟ್​ ಜಗತ್ತಿನ ಹೊಸ ಚಾಂಪಿಯನ್​?

ABOUT THE AUTHOR

...view details