ಇಂದೋರ್ (ಮಧ್ಯಪ್ರದೇಶ):ನ್ಯೂಜಿಲೆಂಡ್ ಕ್ಲೀನ್ಸ್ವೀಪ್ ಮಾಡಲು ಪಣ ತೊಟ್ಟಿರುವ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಯಿತು. ಆರಂಭಿಕರಾಗಿ ಯಶಸ್ಸು ಕಂಡಿರುವ ಗಿಲ್ ಮತ್ತು ರೋಹಿತ್ ಜೋಡಿ ಇಂದು ಉತ್ತಮ ಜೊತೆಯಾಟವನ್ನು ಆಡಿದರು. ಮೊದಲ ವಿಕೆಟ್ಗೆ 204 ರನ್ ಸೇರಿಸಿದ ಜೋಡಿ ಕಿವೀಸ್ ವಿರುದ್ಧ ಸೆಹ್ವಾಗ್ ಮತ್ತು ಗಂಭೀರ್ ಅವರ ಆರಂಭಿಕ ಜೊತೆಯಾಟದ ದಾಖಲೆಯನ್ನು ಮುರಿದಿದ್ದಾರೆ. ನ್ಯೂಜಿಲೆಂಡ್ ಕ್ಲೀನ್ಸ್ವೀಪ್ನಿಂದ ತಪ್ಪಿಸಿಕೊಳ್ಳಲು 386ರನ್ ಗಳಿಸಬೇಕಿದೆ.
ಇಂದೋರ್ನಲ್ಲಿ ಆರು ವರ್ಷಗಳ ನಂತರ ನಡೆಯುತ್ತಿರುವ ಪಂದ್ಯದಲ್ಲಿ ಕಿವೀಸ್ ವಿರುದ್ಧದ ಸರಣಿಯನ್ನು ಕ್ಲೀನ್ಸ್ವೀಪ್ ಸಾಧಿಸಿ ಐಸಿಸಿ ಶ್ರೇಯಾಂಕದ ಮೊದಲ ಪಟ್ಟಕ್ಕೇರಲು ಭಾರತ ಹವಣಿಸುತ್ತಿದೆ. ಟಾಸ್ ಗೆದ್ದ ಬ್ಲಾಕ್ಕ್ಯಾಪ್ಸ್ ನಾಯಕ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನ ಇತ್ತರು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಸಿಕ್ಕ ಅವಕಾಶವನ್ನು ಇಬ್ಬರು ಆಂಭಿಕರು ಉತ್ತಮವಾಗಿ ಬಳಸಿಕೊಂಡರು. ಗಿಲ್ ಮತ್ತು ರೋಹಿತ್ ಶರ್ಮಾ ಶತಕ ಗಳಿಸಿ ಔಟ್ ಆದರು.
ಮೊದಲ ವಿಕೆಟ್ಗೆ 204 ಸೇರಿಸಿದ ಜೋಡಿ ಇಬ್ಬರೂ ಶತಕ ಪೂರೈಸಿಕೊಂಡರು. 85 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 9 ಬೌಂಡರಿ ಮತ್ತು 6 ಸಿಕ್ಸರ್ನಿಂದ 101 ರನ್ಗಳಿಸಿ ಬ್ರೇಸ್ವೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಶುಭಮನ್ ಗಿಲ್ 78 ಎಸೆತ ಎದುರಿಸಿ 13 ಬೌಂಡರಿ ಮತ್ತು 5 ಸಿಕ್ಸ್ನೊಂದಿಗೆ 112 ರನ್ ದಾಖಲಿಸಿದರು. ಇದು ಅವರ ನಾಲ್ಕನೇ ಏಕದಿನ ಶತಕ ಆಗಿದೆ. 112 ರನ್ ಗಳಿಸಿ ಆಡುತ್ತಿದ್ದ ಗಿಲ್, ಬ್ಲೇರ್ ಟಿಕ್ನರ್ ಬೌಲ್ನಲ್ಲಿ ಡೇನಿಯಲ್ ಕಾನ್ವೇಗೆ ಕ್ಯಾಚ್ ಕೊಟ್ಟು ಔಟ್ ಆದರು.
ಆರಂಭಿಕ ಜೋಡಿ ಔಟ್ ಆದ ನಂತರ ಯಾರೂ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಟಿ-20 ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಕೊನೆಯಲ್ಲಿ ನೀಡಿದ ಜೊತೆಯಾಟ 350 ಕ್ಕೂ ಹೆಚ್ಚಿನ ಗುರಿ ನೀಡಲು ಸಹಕಾರಿಯಾಯಿತು. ರೋಹಿತ್ ಮತ್ತು ಗಿಲ್ ನಂತರ ಬಂದ ವಿರಾಟ್(36), ಕಿಶನ್(17) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಸೂರ್ಯಕುಮಾರ್ ಯಾದವ್ (14) ಎರಡು ಸಿಕ್ಸ್ ಗಳಿಸಿ ಅಬ್ಬರಕ್ಕೆ ಮುಂದಾಗುತ್ತಿದ್ದಂತೆ ವಿಕೆಟ್ ಒಪ್ಪಿಸಿದರು.
ಹಾರ್ದಿಕ್, ಶಾರ್ದೂಲ್ ಅರ್ಧಶತಕದ ಜೊತೆಯಾಟ:ಎಂಟನೇ ವಿಕೆಟ್ಗೆ ಒಂದಾದ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ 50ರನ್ನ ಜೊತೆಯಾಟ ಮಾಡಿದರು. ಹಾರ್ದಿಕ್ ಪಾಂಡ್ಯ ತಮ್ಮ ಎಂಟನೇ ಅರ್ಧ ಶತಕ ಗಳಸಿರು. 38 ಎಸೆತಗಳನ್ನು ಎದುರಿಸಿದ ಅವರು 3 ಸಿಕ್ಸರ್ ಮತ್ತು 3 ಬೌಂಡರಿಯಿಂದ 54ರನ್ ಗಳಿಸಿದರು. ಶಾರ್ದೂಲ್ ಠಕೂರ್ 25 ರನ್ಗಳಿಸಿರು. ಸುಂದರ್ ( 9), ಕುಲ್ದೀಪ್ ಯಾದವ್(3) ಮತ್ತು ಉಮ್ರಾನ್ ಮಲಿಕ್ 2 ರನ್ಗಳಿಸಿ ಅಜೇಯರಾಗಿ ಉಳಿದರು.