ಮುಂಬೈ:ಭಾರತ ಮತ್ತು ನ್ಯೂಜಿಲೆಂಡ್ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯ ಇಂದು ನಡೆಯಲಿದ್ದು, ವಾಂಖೆಡೆ ಮೈದಾನ ಒದ್ದೆಯಾಗಿದೆ. ಹೀಗಾಗಿ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಎರಡು ಬಾರಿ ಪಿಚ್ ಪರಿಶೀಲನೆ ಬಳಿಕ ಅಂಪೈರ್ಗಳು ಟಾಸ್ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.
ಮೊದಲು 9:30ಕ್ಕೆ ಪಿಚ್ ಪರಿಶೀಲನೆ ನಡೆಸಿದ ಅಂಪೈರ್ಗಳು ಒಂದು ಗಂಟೆಗಳ ಕಾಲ ಬಿಟ್ಟು ಟಾಸ್ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದರು. 10.30ಕ್ಕೆ ಮತ್ತೊಂದು ಬಾರಿ ಪಿಚ್ ಪರಿಶೀಲನೆ ನಡೆಸಿದ್ದು, ಅಂಪೈರ್ಗಳು 11.30ಕ್ಕೆ ಟಾಸ್ ನಡೆಸಲು ನಿರ್ಧರಿಸಿದ್ದಾರೆ. ಪಂದ್ಯ 12 ಗಂಟೆಗೆ ಶುರುವಾಗಲಿದೆ.