ಮೌಂಟ್ ಮೌಂಗನ್ಯುಯಿ:ಭಾರತ ನ್ಯೂಜಿಲೆಂಡ್ ವಿರುದ್ಧ ಎರಡನೇ ಟಿ 20 ಪಂದ್ಯದಲ್ಲಿ ಕಿವೀಸ್ನ್ನು 126ರನ್ಗೆ ಆಲ್ ಔಟ್ ಮಾಡುವ ಮೂಲಕ 65 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ದೀಪಕ್ ಹೂಡ 2.5 ಓವರ್ಗೆ 10 ಕೊಟ್ಟು 4 ವಿಕೆಟ್ ಕಬಳಿಸಿ ಕೈ ಚಳಕಕ್ಕೆ ಮೆರೆದಿದ್ದಾರೆ.
ಭಾರತ ನೀಡಿದ್ದ 192 ರನ್ನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ 125ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ವಿಲಿಯಮ್ಸನ್ ಅರ್ಧ ಶತಕ(61) ಮತ್ತು ಡೆವೊನ್ ಕಾನ್ವೇ (25) ಸಾಧಾರಣ ಆಟ ಪ್ರದರ್ಶಿಸಿದರು. ನ್ಯೂಜಿಲೆಂಡ್ ಪರ ಮತ್ತಾವ ಆಟಗಾರನೂ ಉತ್ತಮ ಆಟ ಪ್ರದರ್ಶಿಸಲಿಲ್ಲ. ಆರಂಭಿಕ ಫಿನ್ ಅಲೆನ್ ಡಕ್ ಔಟ್ ಆದರು. ಗ್ಲೆನ್ ಫಿಲಿಪ್ಸ್(12), ಡೇರಿಲ್ ಮಿಚೆಲ್(10) ಕೊಂಚ ಹೋರಾಡಿದರು.
ಭಾರತದ ಪರ ದೀಪಕ್ ಹೂಡ 4 ವಿಕೆಟ್ ಕಬಳಿಸಿದರು. ಸಿರಾಜ್ ಮತ್ತು ಚಹಾಲ್ ತಲಾ ಎರಡು ಮತ್ತು ಭೂವನೇಶ್ವರ್ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದರು.