ಕರ್ನಾಟಕ

karnataka

ನಾಳೆಯಿಂದ ಬ್ಲಾಕ್​ಕ್ಯಾಪ್ಸ್ ಮತ್ತು ಬ್ಲೂಬಾಯ್ಸ್​ ಕದನ: ನ್ಯೂಜಿಲ್ಯಾಂಡ್​ ಸರಣಿಯಿಂದಲೇ ಅಯ್ಯರ್​ ಔಟ್​

By

Published : Jan 17, 2023, 8:43 PM IST

ನಾಳೆಯಿಂದ ನ್ಯೂಜಿಲ್ಯಾಂಡ್​​ ವಿರುದ್ಧ ಏಕದಿನ ಸರಣಿ - ಬೆನ್ನುನೋವಿನ ಸಮಸ್ಯೆಯಿಂದ ಅಯ್ಯರ್​ ಔಟ್​ - ಭಾರತದ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ.

India vs New Zealand 1st ODI review
ನಾಳೆಯಿಂದ ಬ್ಲಾಕ್​ಕ್ಯಾಪ್ಸ್ ಮತ್ತು ಬ್ಲೂಬಾಯ್ಸ್​ ಕದನ

ಹೈದರಾಬಾದ್​:ಲಂಕಾ ಎದರಿನ ಏಕದಿನ ಸರಣಿಯಲ್ಲಿ ಕ್ಲೀನ್​ಸ್ವೀಪ್ ಸಾಧನೆ​ ಮಾಡಿದಿರುವ ಭಾರತ ತವರಿನಲ್ಲಿ ಸತತ ಸರಣಿ ಗೆದ್ದು ಬೀಗುತ್ತಿದೆ. ರೋಹಿತ್​ ಪಡೆಯ ಸ್ಟಾರ್​ ಬ್ಯಾಟರ್​ಗಳು ಫಾರ್ಮ್​ನಲ್ಲಿದ್ದು, ಹೊಸ ಯುವಕರು ಸಹ ತಂಡದಲ್ಲಿ ಮಿಂಚುತ್ತಿದ್ದಾರೆ. ನಾಳೆಯಿಂದ ನ್ಯೂಜಿಲ್ಯಾಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಪಾಕಿಸ್ತಾನದಲ್ಲಿ ಸರಣಿ ಗೆದ್ದಿರುವ ಕಿವೀಸ್ ಅದೇ ಹುರುಪಿನಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ವರ್ಷ ಭಾರತದಲ್ಲಿ ವಿಶ್ವಕಪ್​ ಇರುವ ಹಿನ್ನೆಲೆ ಏಕದಿನ ಸರಣಿ ಎರಡು ದೇಶಕ್ಕೆ ಅತ್ಯಂತ ಪ್ರಮುಖವಾಗಲಿದೆ. ಪಿಚ್​ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳಲು ಕಿವೀಸ್​ಗೆ ಇದು ಉತ್ತಮ ಅವಕಾಶ ಆಗಿದೆ. ಪಾಕಿಸ್ತಾನದಲ್ಲಿ ಬ್ಲಾಕ್​ಕ್ಯಾಪ್ಸ್​ ಎರಡು ಟೆಸ್ಟ್​ ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ಡಿಸೆಂಬರ್​ 26 ರಿಂದ ಜನವರಿ 13ರ ವರೆಗೆ ಆಡಿದ್ದಾರೆ. ಟೆಸ್ಟ್​ನ ಎರಡು ಪಂದ್ಯ ಡ್ರಾ ಆಗಿದ್ದು, ಏಕದಿನ ಸರಣಿ ನ್ಯೂಜಿಲ್ಯಾಂಡ್​ ವಶ ಪಡಿಸಿಕೊಂಡಿತ್ತು.

ಫಾರ್ಮ್​ನಲ್ಲಿರುವ ವಿರಾಟ್​:ವಿರಾಟ್​ ಕೊಹ್ಲಿ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕ ದಾಖಲಿಸಿದ್ದಾರೆ. ವಿರಾಟ್​ ಆಡಿರುವ ಹಿಂದಿನ ನಾಲ್ಕು ಏಕದಿನ ಕ್ರಿಕೆಟ್​ನಲ್ಲಿ ಮೂರು ಶತಕ ದಾಖಲಿಸಿದ್ದಾರೆ. ಅಲ್ಲದೇ ರೋಹಿತ್​ ಶರ್ಮಾ ಶುಭಮನ್ ಗಿಲ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಫಾರ್ಮ್​ನಲ್ಲಿದ್ದಾರೆ. ಗಿಲ್​ ಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ಬಾಂಗ್ಲಾ ವಿರುದ್ಧದ ಮೂರನೇ ಏಕದಿನದಲ್ಲಿ ಇಶಾನ್ ಕಿಶನ್ ಅತ್ಯಂತ ವೇಗದ ದ್ವಿಶತಕ ದಾಖಲಿಸಿ ಫಾರ್ಮ್​ ಸಾಬೀತು ಮಾಡಿದ್ದರು.

ಅಕ್ಷರ್ ಮತ್ತು​ ರಾಹುಲ್​ ಇಲ್ಲ, ಅಯ್ಯರ್​ಗೆ ಗಾಯ:ಮಧ್ಯಮ ಕ್ರಮಾಂಕದಲ್ಲಿ ಭಾರತ ಭಾರಿ ಬದಲಾವಣೆ ಕಂಡಿದೆ. ಕೆ ಎಲ್​ ರಾಹುಲ್​ ಮತ್ತು ಅಕ್ಷರ್​ ಪಟೇಲ್​ ಕೌಟುಂಬಿಕ ಕಾರಣದಿಂದ ಈ ಸರಣಿಯಿಂದ ಹೊರಗುಳಿದಿದ್ದಾರೆ. ಕೆ ಎಲ್​ ರಾಹುಲ್​ ಮತ್ತು ಅಥಿಯಾ ಶೆಟ್ಟಿ ವಿವಾಹ ಈ ತಿಂಗಳಿನಲ್ಲೇ ನಡೆಯಲಿದೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಸರಣಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಯ್ಯರ್ ಬೆನ್ನುನೋವಿಗೆ ತುತ್ತಾಗಿದ್ದಾರೆ. ಅವರು ನ್ಯೂಜಿಲ್ಯಾಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಅವರ ಬದಲಿ ಆಟಗಾರರಾಗಿ ರಜತ್ ಪಾಟಿದಾರ್ ಅವರನ್ನು ಹೆಸರಿಸಲಾಗಿದೆ. ಮುಂದಿನ ಮೌಲ್ಯಮಾಪನ ಮತ್ತು ನಿರ್ವಹಣೆಗಾಗಿ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಬೆಂಗಳೂರಿಗೆ ಬರಲಿದ್ದಾರೆ. ಅಲ್ಲಿ ಫಿಟ್​ನೆಸ್​ ವರದಿ ಬಂದ ನಂತರ ತಂಡಕ್ಕೆ ಮರಳಲಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಏಕದಿನದಲ್ಲಿ ಡೈವಿಂಗ್ ಮಾಡುವಾಗ ಯುಜ್ವೇಂದ್ರ ಚಹಾಲ್ ಅವರ ಭುಜದ ಗಾಯವಾಗಿತ್ತು ನಂತರದ ಎರಡು ಪಂದ್ಯದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಅವರ ಭುಜದ ನೋವಿನ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಕುಪ್​ದೀಪ್ ಸ್ಪಿನ್​ ವಿಭಾಗ ನೋಡಿಕೊಂಡಿದ್ದರು.

ಫಾರ್ಮ್​ನಲ್ಲಿದ್ದ ಅಕ್ಷರ್​ ಪಟೇಲ್​ ಕೌಟುಂಬಿಕ ಕಾರಣ ನೀಡಿ ಸರಣಿಯಿಂದ ಹೊರ ಗುಳಿದಿರುವ ಹಿನ್ನೆಲೆ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಅಲ್ಲದೇ ನ್ಯೂಜಿಲ್ಯಾಂಡ್​ನಲ್ಲಿ ಎಡಗೈ ಬ್ಯಾಟರ್​ಗಳು ಹೆಚ್ಚಿದ್ದು ಸುಂದರ್ ಅವರಿಗೆ ಸರಿಯಾದ ಎದುರಾಳಿ ಆಗಲಿದ್ದಾರೆ. ಉಮ್ರಾನ್ ಮಲಿಕ್ ಮತ್ತು ಶಾರ್ದೂಲ್ ಠಾಕೂರ್ ನಡುವೆ ಸ್ಥಾನಕ್ಕಾಗಿ ಪೈಪೋಟಿ ಇದೆ. ಲಂಕಾ ವಿರುದ್ಧ ಮಲಿಕ್​ ಉತ್ತಮ ಬೌಲಿಂಗ್​ ಪ್ರದರ್ಶಿಸಿದ್ದಾರೆ.

ಸಂಭಾವ್ಯ ಭಾರತೀಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್ / ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್ / ಕುಲ್ದೀಪ್ ಯಾದವ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್

ಸಂಭಾವ್ಯ ನ್ಯೂಜಿಲ್ಯಾಂಡ್​​ ತಂಡ:ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ, ವಿಕೆಟ್​ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಬ್ಲೇರ್ ಟಿಕ್ನರ್ / ಡಫ್ ಬ್ರೇಸ್ವೆಲ್, ಲಾಕಿ ಫರ್ಗುಸನ್

ನಾಳೆ ಭಾರತೀಯ ಕಾಲಮಾನ 1:30ಕ್ಕೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸ್ಟಾರ್​ ಸ್ಪೋರ್ಟ್​ನಲ್ಲಿ ನೇರ ಪ್ರಸಾರ ಲಭ್ಯ.

ಇದನ್ನೂ ಓದಿ:'ನನ್ನ ಜೀವನದ ಉದ್ದಕ್ಕೂ ನಾನು ನಿಮಗೆ ಋಣಿಯಾಗಿದ್ದೇನೆ': ಪಂತ್​ ಹೀಗೆ ಹೇಳಿದ್ದು ಯಾರಿಗೆ?

ABOUT THE AUTHOR

...view details