ಕರ್ನಾಟಕ

karnataka

ETV Bharat / sports

ನೀವು ನನ್ನ ಕೊಂದರೂ ಸರಿ, ಇಂಗ್ಲೆಂಡ್ ಗೆಲ್ಲಲಿದೆ: ಆಕಾಶ್ ಚೋಪ್ರಾ ಭವಿಷ್ಯ - ಅಜಿಂಕ್ಯ ರಹಾನೆ ಅರ್ಧಶತಕ

ಭಾರತ ತಂಡ ಈಗಾಗಲೇ ಆಕಾಶ್ ಚೋಪ್ರಾ ಭವಿಷ್ಯವನ್ನು ಸುಳ್ಳು ಮಾಡಿದೆ. ಬುಮ್ರಾ ಮತ್ತು ಮೊಹಮ್ಮದ್​ ಶಮಿ 9ನೇ ವಿಕೆಟ್ ಜೊತೆಯಾಟದಲ್ಲಿ 60 ರನ್​ ಸೇರಿಸುವ ಮೂಲಕ ಭಾರತಕ್ಕೆ ಮುನ್ನಡೆಯನ್ನು 250ರ ಗಡಿ ದಾಟಿಸಿದ್ದಾರೆ.

ಭಾರತ vs ಇಂಗ್ಲೆಂಡ್ ಟೆಸ್ಟ್​
ಭಾರತ vs ಇಂಗ್ಲೆಂಡ್ ಟೆಸ್ಟ್​

By

Published : Aug 16, 2021, 5:47 PM IST

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ರೋಚಕ ಹಂತ ತಲುಪಿದೆ. ಎರಡೂ ತಂಡಗಳಿಗೂ ಈ ಪಂದ್ಯವನ್ನು ಗೆಲ್ಲುವ ಅವಕಾಶವಿದೆ. ಆದರೆ, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್​ ಆಕಾಶ್​ ಚೋಪ್ರಾ ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್​ 391 ರನ್​ಗಳಿಸಿತ್ತು. ಇದೀಗ ಭಾರತ 2ನೇ ಇನ್ನಿಂಗ್ಸ್​ನಲ್ಲಿ ನಾಲ್ಕನೇ ದಿನ 181 ರನ್​ಗಳಿಸಿ 6 ವಿಕೆಟ್​ ಕಳೆದುಕೊಂಡಿತ್ತು. 5ನೇ ದಿನದಾಟಕ್ಕೂ ಮುಂಚೆ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲಲಿದೆ ಎಂದಿದ್ದಾರೆ.

"ನನ್ನ ಹೇಳಿಕೆಗಾಗಿ ನೀವು ನನ್ನನ್ನು ಬೇಕಾದರೆ ಸಾಯಿಸಿರಿ, ಇಂಗ್ಲೆಂಡ್ ಈ ಪಂದ್ಯವನ್ನು ಗೆಲ್ಲಲಿದೆ ಎಂದು ನಾನು ಹೇಳುತ್ತೇನೆ. ಇಂಗ್ಲೆಂಡ್ ಈ ಕಾದಾಟದಲ್ಲಿ ಈಗಾಗಲೇ ಮೇಲುಗೈ ಸಾಧಿಸಿದೆ, ಜೊತೆಗೆ ಪಿಚ್​ ನಿಧಾನಗತಿಯಿಂದ ಕೂಡಿದೆ, ಆದರೆ ಹದಗೆಟ್ಟಿಲ್ಲ. ಈ ಕಾರಣದ ಕೊನೆಯ ದಿನ ಚೆಂಡು ಹೆಚ್ಚಾಗಿ ಬೌನ್ಸ್ ಆಗುವುದಿಲ್ಲ ಮತ್ತು ಸ್ವಿಂಗ್ ಕೂಡ ಆಗುವುದಿಲ್ಲ. ಹಾಗಾಗಿ ಭಾರತ ನೀಡುವ ಗುರಿಯನ್ನು ಇಂಗ್ಲೆಂಡ್ ತಂಡ ಸುಲಭವಾಗಿ ತಲುಪಲಿದೆ' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಆದರೆ, ಭಾರತ ತಂಡ ಈಗಾಗಲೇ ಆಕಾಶ್ ಚೋಪ್ರಾ ಭವಿಷ್ಯವನ್ನು ಸುಳ್ಳು ಮಾಡಿದೆ. ಬುಮ್ರಾ ಮತ್ತು ಮೊಹಮ್ಮದ್​ ಶಮಿ 9ನೇ ವಿಕೆಟ್ ಜೊತೆಯಾಟದಲ್ಲಿ 60 ರನ್​ ಸೇರಿಸುವ ಮೂಲಕ ಭಾರತಕ್ಕೆ ಮುನ್ನಡೆಯನ್ನು 250ರ ಗಡಿ ದಾಟಿಸಿದ್ದಾರೆ.

ಇದನ್ನು ಓದಿ:ಮಂದ ಬೆಳಕಿನಲ್ಲೂ ಬ್ಯಾಟಿಂಗ್: ಸಹಆಟಗಾರರ ಮೇಲೆ ಕೊಹ್ಲಿ-ರೋಹಿತ್​ ಅಸಮಾಧಾನ

ABOUT THE AUTHOR

...view details