ಲಾರ್ಡ್ಸ್(ಲಂಡನ್):ಆತಿಥೇಯ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿರುವ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿದೆ. ಮಳೆಯಿಂದಾಗಿ ಪಂದ್ಯ ಕೆಲ ಹೊತ್ತು ತಡವಾಗಿ ಆರಂಭಗೊಂಡಿದ್ದರೂ ತಂಡಕ್ಕೆ ಆರಂಭಿಕರಾದ ರೋಹಿತ್ - ರಾಹುಲ್ ಬದ್ರ ಬುನಾದಿ ಹಾಕಿದರು. ಈ ಜೋಡಿ ಮೊದಲ ವಿಕೆಟ್ನಷ್ಟಕ್ಕೆ 120+ರನ್ಗಳ ಜೊತೆಯಾಟವಾಡಿದೆ. ಈ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾದ ಆರಂಭಿಕರಾದ ರೋಹಿತ್(83), ರಾಹುಲ್(35 ಅಜೇಯ) ಉತ್ತಮ ಆಟವಾಡಿದರು. ಜೊತೆಗೆ 120+ ರನ್ಗಳಿಕೆ ಮಾಡಿದರು. ಈ ಮೂಲಕ 2010ರ ನಂತರ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ (ಸಾಗರೋತ್ತರ ದೇಶ) ಆರಂಭಿಕರಾಗಿ ಗಳಿಕೆ ಮಾಡಿರುವ ಮೊದಲ ಶತಕದಾಟವಾಗಿದೆ. ಈ ಹಿಂದೆ 2010ರ ಡಿಸೆಂಬರ್ ತಿಂಗಳಲ್ಲಿ ಸೆಹ್ವಾಗ್ ಹಾಗೂ ಗಂಭೀರ್ ಜೋಡಿ ಆಫ್ರಿಕಾ ವಿರುದ್ಧ ಸೆಂಚೂರಿಯನ್ನಲ್ಲಿ 137ರನ್ಗಳ ಜೊತೆಯಾಟವಾಡಿತ್ತು. ಇದಾದ ಬಳಿಕ ಯಾವುದೇ ಆರಂಭಿಕ ಜೋಡಿ ಶತಕದಾಟ ಆಡಿರಲಿಲ್ಲ.
ಇಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 13ನೇ ಅರ್ಧಶತಕ ಸಿಡಿಸಿ ಮಿಂಚಿದರು. 7 ಇನ್ನಿಂಗ್ಸ್ಗಳ ನಂತರ ಇಂಗ್ಲೆಂಡ್ ವಿರುದ್ಧ ಮೂಡಿ ಬಂದಿರುವ ಅರ್ಧಶತಕ ಇದಾಗಿದೆ. ಇದೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರ್ರನ್ ಓವರ್ನಲ್ಲೇ 4 ಬೌಂಡರಿ ಸಿಡಿಸಿ ಗಮನ ಸೆಳೆದರು. ಇದರ ಜೊತೆಗೆ 2021ರಲ್ಲಿ ರೋಹಿತ್ ಶರ್ಮಾ ಟೆಸ್ಟ್ನಲ್ಲಿ 600ರನ್ಗಳಿಕೆ ಮಾಡಿರುವ ಸಾಧನೆ ಸಹ ಮಾಡಿದರು.
ಇದನ್ನೂ ಓದಿರಿ: 51ನೇ ವಯಸ್ಸಿನಲ್ಲೂ ಸಖತ್ ಹಾಟ್.. ಹಾಲಿವುಡ್ ನಟಿಯ ಫಿಟ್ನೆಸ್ ಮಂತ್ರವಿದು!