ಲಾರ್ಡ್ಸ್(ಲಂಡನ್):ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ - ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ತನ್ನೆಲ್ಲ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ 364ರನ್ಗಳಿಕೆ ಮಾಡಿದೆ. ನಿನ್ನೆ ಮೂರು ವಿಕೆಟ್ನಷ್ಟಕ್ಕೆ 276ರನ್ಗಳಿಸಿದ್ದ ಭಾರತ ಇಂದು 88ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ(83) ಹಾಗೂ ರಾಹುಲ್(129) ತಂಡಕ್ಕೆ ಮೊದಲ ದಿನವೇ ಬದ್ರಬುನಾದಿ ಹಾಕಿಕೊಟ್ಟರು. ರೋಹಿತ್ ವಿಕೆಟ್ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ಪೂಜಾರಾ (9ರನ್) ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಇದಾದ ಬಳಿಕ ರಾಹುಲ್ ಜೊತೆಗೂಡಿದ ಕ್ಯಾಪ್ಟನ್ ಕೊಹ್ಲಿ(42) ತಂಡಕ್ಕೆ ಚೇತರಿಕೆ ನೀಡಿದರು. ಇವರ ವಿಕೆಟ್ ಬಿದ್ದ ನಂತರ ನೈಟ್ ವಾಚ್ಮ್ಯಾನ್ ಆಗಿ ಬಂದಿದ್ದ ರಹಾನೆ(1)ರನ್ಗಳಿಕೆ ಮಾಡಿ ಆಟ ಕಾಯ್ದಿರಿಸಿಕೊಂಡಿದ್ದರು.
ಇದನ್ನೂ ಓದಿರಿ: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಉನ್ಮುಕ್ತ್ ಚಾಂದ್ ಕ್ರಿಕೆಟ್ಗೆ ನಿವೃತ್ತಿ