ಕರ್ನಾಟಕ

karnataka

ETV Bharat / sports

ಗ್ಲೀಸನ್​, ಜೋರ್ಡನ್ ಮಾರಕ ಬೌಲಿಂಗ್​... ಇಂಗ್ಲೆಂಡ್ ಗೆಲುವಿಗೆ 171ರನ್​ ಟಾರ್ಗೆಟ್ ನೀಡಿದ ಭಾರತ - ರವೀಂದ್ರ ಜಡೇಜಾ

ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್​ಗಳು ಪಾರಮ್ಯ ಮೆರೆದಿದ್ದು, ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಮಾರಕವಾದರು.

India vs England
India vs England

By

Published : Jul 9, 2022, 9:01 PM IST

ಬರ್ಮಿಂಗ್​ಹ್ಯಾಮ್​​:ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ 20 ಓವರ್​​ನಷ್ಟಕ್ಕೆ 8ವಿಕೆಟ್ ಕಳೆದಕೊಂಡ ಟೀಂ ಇಂಡಿಯಾ 170ರನ್​ಗಳಿಕೆ ಮಾಡಿದ್ದು, ಇಂಗ್ಲೆಂಡ್​ ಗೆಲುವಿಗೆ 171ರನ್​​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಗ್ಲೀಸನ್​, ಜೋರ್ಡನ್ ಮಾರಕ ಬೌಲಿಂಗ್ ದಾಳಿ ನಡುವೆ ಮಿಂಚಿದ ಜಡೇಜಾ ಅಜೇಯ 46ರನ್​ಗಳಿಕೆ ಮಾಡಿದರು.

ಉತ್ತಮ ಆಟ ಪ್ರದರ್ಶಿಸಿದ ಜಡೇಜಾ

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಪಂತ್​ ತಂಡಕ್ಕೆ ಬದ್ರ ಬುನಾದಿ ಹಾಕಿದರು. ಜೋಡಿ 4.5 ಓವರ್​​ಗಳಲ್ಲಿ 49ರನ್​ಗಳ ಜೊತೆಯಾಟವಾಡಿತು. ಈ ವೇಳೆ ರೋಹಿತ್ ಶರ್ಮಾ(31) ಗ್ಲೀಸನ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತಕ್ಕೆ ಆಘಾತ ನೀಡಿ, ಟಿ20ಯಲ್ಲಿ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆದುಕೊಂಡರು.ಇದರ ಬೆನ್ನಲ್ಲೇ ಬಂದ ವಿರಾಟ್​ ಕೊಹ್ಲಿ(1) ಗ್ಲೀಸನ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರೆ, ನಂತರದ ಎಸೆತದಲ್ಲೇ ಪಂತ್​(26) ಗ್ಲೀಸನ್​ ಓವರ್​​ನಲ್ಲಿ ಕ್ಯಾಚ್ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್​(15), ಪಾಂಡ್ಯಾ(12), ಕಾರ್ತಿಕ್​(12) ವಿಕೆಟ್ ಒಪ್ಪಿಸಿದರು. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 46ರನ್​ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಇವರಿಗೆ ಹರ್ಷಲ್ ಪಟೇಲ್(12) ಸಾಥ್ ನೀಡಿದರು.

ಮಿಂಚಿದ ಗ್ಲೀಸನ್​:ಇಂಗ್ಲೆಂಡ್ ತಂಡದ ಕಣಕ್ಕಿಳಿದಿದ್ದ 34 ವರ್ಷದ ರಿಚರ್ಡ್ ಗ್ಲೀಸರ್ ತಾವು ಪದಾರ್ಪಣೆ ಮಾಡಿದ ಮೊದಲ ಟಿ20 ಪಂದ್ಯದಲ್ಲೇ ಮಿಂಚು ಹರಿಸಿದರು. 4 ಓವರ್​ಗಳ ಕೋಟಾದಲ್ಲಿ 1 ಓವರ್​ ಮೆಡನ್ ಸೇರಿ ಕೇವಲ 15ರನ್ ನೀಡಿದ ಈ ಬೌಲರ್ ರೋಹಿತ್​, ಕೊಹ್ಲಿ ಹಾಗೂ ಪಂತ್ ವಿಕೆಟ್ ಪಡೆದು ಸಂಭ್ರಮಿಸಿದರು.

ಪದಾರ್ಪಣೆ ಪಂದ್ಯದಲ್ಲಿ ಗ್ಲೀಸರ್ ಮಿಂಚು

ಇದನ್ನೂ ಓದಿರಿ:5 ತಿಂಗಳ ಬಳಿಕ T20I ತಂಡಕ್ಕೆ ಮರಳಿದರೂ, ಕಳಪೆ ಫಾರ್ಮ್​ನಿಂದ ಹೊರಬರದ ಕೊಹ್ಲಿ

ಭಾರತ ಕೊನೆಯದಾಗಿ 20 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 170ರನ್​ಗಳಿಕೆ ಮಾಡಿದ್ದು,ಬಟ್ಲರ್ ಪಡೆಗೆ 171ರನ್ ಟಾರ್ಗೆಟ್ ನೀಡಿದೆ. ಇಂಗ್ಲೆಂಡ್ ಪರ ಬೌಲಿಂಗ್​ನಲ್ಲಿ ಮಿಂಚಿದ 34 ವರ್ಷದ ಡೆಬ್ಯುಮ್ಯಾನ್​ ಗ್ಲೀಸನ್ 3 ವಿಕೆಟ್ ಪಡೆದರೆ, ಜೋರ್ಡನ್ 4 ವಿಕೆಟ್ ಕಿತ್ತರು.

ಬರ್ಮಿಂಗ್​ಹ್ಯಾಮ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಈ ಮೈದಾನದಲ್ಲಿ ಇಲ್ಲಿಯವರೆಗೂ ನಡೆದ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ದಾಖಲು ಮಾಡಿದೆ.

ABOUT THE AUTHOR

...view details