ಅಡಿಲೇಡ್(ಆಸ್ಟ್ರೇಲಿಯಾ):ಟಿ 20 ವಿಶ್ವಕಪ್ ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 20 ಓವರ್ಗಳಲ್ಲಿ 6 ವಿಕೆಟ್ಗೆ 184 ರನ್ ಗಳಿಸಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಕಾದಾಟದಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅರ್ಧಶತಕ ಬಲದಿಂದ ಭಾರತ ಸವಾಲಿನ ಮೊತ್ತ ದಾಖಲಿಸಿತು.
ಟೀಕೆಗೆ ಉತ್ತರಿಸಿದ ರಾಹುಲ್ ಬ್ಯಾಟ್:ವಿಶ್ವಕಪ್ನ ಮೊದಲ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಕನ್ನಡಿಗ ಕೆ ಎಲ್ ರಾಹುಲ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಮುಂದಿನ ಪಂದ್ಯಗಳಿಗೆ ರಾಹುಲ್ರನ್ನು ಕೈಬಿಡುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ, ಮಹತ್ವದ ಪಂದ್ಯದಲ್ಲಿ ಬ್ಯಾಟ್ಗೆ ಬುದ್ಧಿ ಹೇಳಿದ ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿದರು.
32 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿಗಳಿಂದ 50 ರನ್ ಗಳಿಸಿದರು. ಪಂದ್ಯದಲ್ಲಿ ಸಿಡಿದ 5 ಸಿಕ್ಸ್ಗಳಲ್ಲಿ ರಾಹುಲ್ 4 ಸಿಕ್ಸ್ಗಳಿವೆ. ಈ ಮೂಲಕ ತಾವು ನಿಧಾನಗತಿಯ ಬ್ಯಾಟರ್ ಅಲ್ಲ, ಟಿ20 ತಾವು ಫಿಟ್ ಎಂಬುದನ್ನು ಸಾಬೀತು ಮಾಡಿದರು. ನಾಯಕ ರೋಹಿತ್ ಶರ್ಮಾ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 2 ಗಳಿಸಿದ್ದಾಗ ಹಸನ್ ಮುಹಮದ್ಗೆ ವಿಕೆಟ್ ನೀಡಿದರು.