ದುಬೈ:ಅಂಡರ್ 19 ವಿಶ್ವಕಪ್ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್ನಲ್ಲಿ ಸೆಮಿಫೈನಲ್ಸ್ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಾಡುವುದು ಖಚಿತವಾಗಿದೆ.
ಮಂಗಳವಾರ ನಡೆಯಬೇಕಿದ್ದ ಶ್ರೀಲಂಕಾ U19 ಮತ್ತು ಬಾಂಗ್ಲಾದೇಶ U19 ನಡುವಿನ ಕೊನೆಯ ಲೀಗ್ ಪಂದ್ಯ ಪಂದ್ಯದ ಅಧಿಕಾರಿಗಳಿಗೆ ಕೋವಿಡ್ 19 ದೃಢಪಟ್ಟ ಕಾರಣ ರದ್ದಾದ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ರನ್ ರೇಟ್ ಆಧಾರದ ಮೇಲೆ ಬಾಂಗ್ಲಾದೇಶವನ್ನು ಬಿ ಗುಂಪಿನ ಅಗ್ರಸ್ಥಾನಿ ಎಂದು ಘೋಷಿಸಲಾಯಿತು.
ಹಾಗಾಗಿ ಎ ಗುಂಪಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ತಂಡದ ವಿರುದ್ಧ ನಾಲ್ಕರ ಘಟ್ಟದಲ್ಲಿ ಬಾಂಗ್ಲಾದೇಶ ಮತ್ತು ಎ ಗುಂಪಿನ ಅಗ್ರಸ್ಥಾನಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ ಸೆಣಸಾಡಲಿದೆ ಎಂದು ಎಸಿಸಿ ಖಚಿತಪಡಿಸಿದೆ.
ಡಿಸೆಂಬರ್ 30 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ದುಬೈನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಹಾಗೂ ಶಾರ್ಜಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ.
ಇದನ್ನೂ ಓದಿ: ಇನ್ನೂ 3 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ, ಈ ತಂಡದ ಪರ ಐಪಿಎಲ್ನಲ್ಲಿ ಆಡುವಾಸೆ: ಅಂಬಾಟಿ ರಾಯುಡು