ಮೊಹಾಲಿ(ಪಂಜಾಬ್):ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 208 ರನ್‌ಗಳ ಬೃಹತ್ ಗುರಿ ನೀಡಿಯೂ ಸೋಲು ಕಂಡಿತು. ಇಂಥ ಸವಾಲಿನ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಕಾಂಗರೂ ತಂಡ 4 ವಿಕೆಟ್ಗಳ ಗೆಲುವು ಪಡೆಯಿತು. ಇದರೊಂದಿಗೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಳಗ ತವರಿನಲ್ಲೇ ಸೋಲಿನ ರುಚಿ ಅನುಭವಿಸಿದೆ.
"ನಾವು ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆಂದು ನಾನು ಭಾವಿಸುವುದಿಲ್ಲ. ಗೆಲುವು ಸಾಧಿಸಲು 200 ಉತ್ತಮ ಸ್ಕೋರ್ ಆಗಿತ್ತು. ಆದರೆ, ಬೌಲಿಂಗ್ ವಿಭಾಗ ವಿಕೆಟ್ ಪಡೆದುಕೊಳ್ಳದಿರುವುದು ನಮ್ಮ ಸೋಲಿಗೆ ಮುಖ್ಯ ಕಾರಣ. ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಮೂಡಿ ಬಂದಿದೆ" ಎಂದರು.
ಆಸ್ಟ್ರೇಲಿಯಾ ವಿರುದ್ಧ ಸೋತ ಟೀಂ ಇಂಡಿಯಾ "ಈ ಸೋಲು ನಮ್ಮಲ್ಲಿ ಏನು ತಪ್ಪಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಉತ್ತಮ ಅವಕಾಶವಾಗಿದೆ. ಇದು ಹೆಚ್ಚು ಸ್ಕೋರ್ ಮಾಡಬಹುದಾದ ಮೈದಾನ ಎಂಬುದು ನಮಗೆ ತಿಳಿದಿತ್ತು. ಎದುರಾಳಿ ತಂಡ ಚೆನ್ನಾಗಿ ಆಡಿದೆ. ಅಂತಿಮ 4 ಓವರ್ಗಳಲ್ಲಿ ನಾವು 60 ರನ್ ಬಿಟ್ಟುಕೊಟ್ಟಿದ್ದು ಮುಳುವಾಯಿತು. ಇದರ ಜತೆಗೆ, ವಿಕೆಟ್ ಪಡೆದುಕೊಳ್ಳಲು ವಿಫಲವಾಗಿದ್ದು ಸೋಲಿಗೆ ಕಾರಣ" ಎಂದರು. ಮುಂದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಮತ್ತಷ್ಟು ಸುಧಾರಿಸಬೇಕಿದೆ ಎಂದು ಶರ್ಮಾ ಹೇಳಿದರು.
ಇದನ್ನೂ ಓದಿ:ಪಾಕ್ ನೆಲದಲ್ಲಿ ಆಂಗ್ಲರ ಮೆರೆದಾಟ: ಮೊದಲ ಟಿ20 ಗೆದ್ದ ಮೊಯಿನ್ ಬಳಗ
ಮೊಹಾಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಫೋಟಕ ಆಟದ ನೆರವಿನಿಂದ ಟೀಂ ಇಂಡಿಯಾ 208 ರನ್ ಸಂಗ್ರಹಿಸಿತ್ತು. ಅತ್ಯಂತ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಭಾರತದ ಪರ ಅಕ್ಸರ್ ಪಟೇಲ್ ಹೊರತುಪಡಿಸಿ, ಉಳಿದಂತೆ ಯಾವುದೇ ಬೌಲರ್ ಪರಿಣಾಮಕಾರಿಯಾಗಲಿಲ್ಲ.