ಅಹಮದಾಬಾದ್ (ಗುಜರಾತ್):ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ನ ಎರಡನೇ ದಿನವಾದ ಇಂದು ಟೀ ಅವಧಿಯ ನಂತರ ಆಸ್ಟ್ರೇಲಿಯಾವನ್ನು 480ಕ್ಕೆ ಆಲ್ಔಟ್ ಆಗಿದೆ. ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದ ಆಟದ ಅಂತ್ಯಕ್ಕೆ 36 ರನ್ ಗಳಸಿದೆ. ಭಾರತ ಇನ್ನೂ 444 ರನ್ ಗಳಿಸ ಬೇಕಿದೆ. ಆರಂಭಿಕರಾದ ಶುಭಮನ್ ಗಿಲ್ 18 ಮತ್ತು ರೋಹಿತ್ ಶರ್ಮಾ 17 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ನಿನ್ನೆ 255ಕ್ಕೆ ನಾಲ್ಕು ವಿಕೆಟ್ ನಷ್ಟದೊಂದಿಗೆ ದಿನ ಅಂತ್ಯವಾಗಿತ್ತು. ಶತಕ ಗಳಿಸಿ ಉಸ್ಮಾನ್ ಖವಾಜಾ(104*) ಮತ್ತು 49* ರನ್ ಗಳಿಸಿದ ಗ್ರೀನ್ ಕ್ರಿಸ್ನಲ್ಲಿದ್ದರು. ಇಂದು ಎರಡನೇ ದಿನದ ಪಂದ್ಯ ಆರಂಭವಾಗುತ್ತಿದ್ದಂತೆ ಗ್ರೀನ್ ಅರ್ಧ ಶತಕ ಪೂರ್ಣಗೊಳಿಸಿದರು. ಭೋಜನ ವಿರಾಮದ ವೇಳೆಗೆ ಆಸಿಸ್ ಯಾವುದೇ ವಿಕೆಟ್ ಕಳೆದುಕೊಳ್ಳದೇ ನಿನ್ನೆಯ ರನ್ಗೆ 92 ರನ್ ಸೇರಿಸಿ ಪ್ರಥಮ ಅವಧಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಎರಡನೇ ಸೆಷನ್ನಲ್ಲಿ ಅಶ್ವಿನ್ ಕೈಚಳಕ:ಭೋಜನದ ನಂತರ ಅಶ್ವಿನ್ ಕೈಚಳಕ ಕೆಲಸ ಮಾಡಿದ್ದು ಮೂರು ವಿಕೆಟ್ ಪಡೆದುಕೊಂಡರು. ಭೊಜನ ವಿರಾಮ ನಂತರ ಶತಕ ಗಳಿಸಿದ ಗ್ರೀನ್ರನ್ನು ಅಶ್ವಿನ್ ಪೆವಿಲಿಯನ್ಗೆ ಕಳಿಸಿದರು. ಅವರ ನಂತರ ಬಂದ ಅಲೆಕ್ಸ್ ಕ್ಯಾರಿ (0) ಮತ್ತು ಮಿಚೆಲ್ ಸ್ಟಾರ್ಕ್ (6) ಅವರನ್ನು ಆರ್ ಅಶ್ವಿನ್ ಔಟ್ ಮಾಡಿದರು. ಟೀ ವಿರಾಮದ ವೇಳೆಗೆ ಆಸಿಸ್ 7 ವಿಕೆಟ್ ನಷ್ಟಕ್ಕೆ 409 ರನ್ ಗಳಸಿತ್ತು. ಊಟದ ನಂತರ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 62 ಮಾತ್ರ ಗಳಿಸಿತ್ತು.
ಟೀ ವಿರಾಮದ ನಂತರ 180 ರನ್ ಗಳಿಸಿ ಆಡುತ್ತಿದ್ದ ಉಸ್ಮಾನ್ ಖವಾಜಾರನ್ನು ಅಕ್ಷರ್ ಪಟೇಲ್ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಂತರ ನಾಥನ್ ಲಿಯಾನ್ ಮತ್ತು ಮಾರ್ಫಿ ಕ್ರೀಸ್ನಲ್ಲಿ ರನ್ ಕಲೆ ಹಾಕಿದರು. 34 ರನ್ ಗಳಿಸಿ ಆಡುತ್ತಿದ್ದ ಲಿಯಾನ್ ಮತ್ತು 41 ರನ್ ಗಳಿಸಿದ್ದ ಮಾರ್ಫಿ ಅಶ್ವಿನ್ ಬೌಲಿಂಗ್ಗೆ ಬಲಿಯಾದರು. ಅಶ್ವಿನ್ ಈ ಇನ್ನಿಂಗ್ಸ್ನಲ್ಲಿ ಒಟ್ಟು 6 ವಿಕೆಟ್ ಪಡೆದು ಕೊಂಡರು.
ಅಶ್ವಿನ್ ದಾಖಲೆಯ ವಿಕೆಟ್ ಗಳಿಕೆ:ರವಿಚಂದ್ರನ್ ಅಶ್ವಿನ್ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 113 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಪ್ರತಿಷ್ಠಿತ ಟ್ರೋಫಿಯಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಪಟ್ಟಿಯಲ್ಲಿ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಅಲ್ಲದೇ ಆಸಿಸ್ ವಿರುದ್ಧ ಹೆಚ್ಚು ಪರಿಣಾಮ ಕಾರಿ ಬೌಲರ್ ಆಗಿದ್ದಾರೆ. 26 ಸಲ ಭಾರತದಲ್ಲಿ 5 ವಿಕೆಟ್ ಪಡೆದಿದ್ದಾರೆ. ಒಟ್ಟು 32 ಬಾರಿ ಪಂಚ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.