ಅಹಮದಾಬಾದ್ (ಗುಜರಾತ್): ವಿಶ್ವ ಟೆಸ್ಟ್ ಚಾಂಪಿನಯನ್ಶಿಪ್ ಫೈನಲ್ ಪ್ರವೇಶಕ್ಕೆ ಆಸಿಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಗೆಲುವು ಭಾರತಕ್ಕೆ ಅಗತ್ಯವಾಗಿದೆ. ನಾಳೆಯಿಂದ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಸರಣಿ ಸಮಬಲದ ಸಾಧನೆಯತ್ತ ಕಾಂಗರೂ ಪಡೆಯ ಚಿತ್ತ ನೆಟ್ಟಿದೆ.
ಸ್ಮಿತ್ ನಾಯಕತ್ವದಲ್ಲಿ ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಮೊರನೇ ಟೆಸ್ಟ್ನ್ನು ಆಸಿಸ್ ಗೆದ್ದುಕೊಂಡಿದೆ. ನಾಲ್ಕನೇ ಟೆಸ್ಟ್ಗೂ ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿ ಇದ್ದು, ನಾಯಕತ್ವದ ಹೊಣೆ ಸ್ಟೀವ್ ಸ್ಮಿತ್ ಹೆಗಲ ಮೇಲೆಯೇ ಇದೆ. ಮೂರನೇ ಟೆಸ್ಟ್ನಲ್ಲಿ ಗೆಲುವು ಸಾಧಿಸಿದ ಸ್ಮಿತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
ಬ್ಯಾಟರ್ಗಳಿಗೆ ಕಾಡುತ್ತಿರುವ ಪಿಚ್:ಮೂರು ಟೆಸ್ಟ್ ಮ್ಯಾಚ್ ಎರಡೂವರೆ ದಿನದಲ್ಲಿ ಮುಗಿದು ಹೋಗಿದೆ. ಸ್ಮಿನ್ ಪಿಚ್ನಲ್ಲಿ ಬ್ಯಾಟರ್ಗಳು ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಮೊದಲ ಟೆಸ್ಟ್ ಒಂದರಲ್ಲಿ ಮಾತ್ರ ಭಾರತ 400 ರನ್ ಗಳಿಸಿದೆ. ಮಿಕ್ಕ ಪಂದ್ಯಗಳಲ್ಲಿ ಉಭಯ ತಂಡಗಳು 250+ ರನ್ ಮಾಡುವಷ್ಟರಲ್ಲಿ ಸಂಪೂರ್ಣ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಇನ್ನಿಂಗ್ಸ್ಗಳು ಲೋ-ಸ್ಕೋರ್ ಆಗಿದ್ದರಿಂದಾಗಿ ಪಂದ್ಯ ಎರಡು ದಿನದಲ್ಲೇ ಮುಗಿದು ಹೋಗುತ್ತಿದೆ.
ಟೆಸ್ಟ್ ಚಾಂಪಿಯನ್ ಶಿಪ್ಗೆ ಆಯ್ಕೆಗೆ ಗೆಲುವು ಅನಿವಾರ್ಯ:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಕ್ಕೆ ಭಾರತ ಈ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕಿದೆ. ಇಲ್ಲದಿದ್ದಲ್ಲಿ ಶ್ರೀಲಂಕಾ ಫೈನಲ್ಗೆ ಹೋಗುವ ಅವಕಾಶ ಮಾಡಿಕೊಳ್ಳುವ ಸಾಧ್ಯತೆ ಇದೆ. ನಾಳೆಯಿಂದ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾಗೆ ಪಂದ್ಯ ಆರಂಭವಾಗಲಿದೆ. ಎರಡು ಟೆಸ್ಟ್ ಪಂದ್ಯದ ಸರಣಿಯಲ್ಲಿ ಕಿವಿಸ್ನ್ನು ತವರಿನಲ್ಲಿ ಕ್ಲೀನ್ ಸ್ವೀಪ್ ಮಾಡಿದರೆ ಲಂಕಾ WTC ಫೈನಲ್ ಪ್ರವೇಶಿಸಲಿದೆ.