ಕರ್ನಾಟಕ

karnataka

ETV Bharat / sports

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಿದ ಭಾರತ - ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಿದ ಭಾರತ

ಶ್ರೀಲಂಕಾ ತಂಡವನ್ನು ನ್ಯೂಜಿಲೆಂಡ್​ ಪ್ರಥಮ ಟೆಸ್ಟ್​ನಲ್ಲಿ ಮಣಿಸಿದ್ದು ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಿದೆ.

india Australia test
ಟೆಸ್ಟ್​ ಚಾಪಿಯನ್​ಶಿಪ್​ ಫೈನಲ್​ ಪ್ರವೇಶಿಸಿ ಭಾರತ

By

Published : Mar 13, 2023, 1:03 PM IST

Updated : Mar 13, 2023, 3:42 PM IST

ಅಹಮದಾಬಾದ್​: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಿದ್ದು, ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆಸಿಸ್​ ವಿರುದ್ಧ ಬಾರ್ಡರ್ ​- ಗವಾಸ್ಕರ್​ ಟ್ರೋಫಿಯ ಕೊನೆಯ ಪಂದ್ಯದ ಫಲಿತಾಂಶಕ್ಕೂ ಮುನ್ನವೇ ಕಿವೀಸ್​ ವಿರುದ್ಧದ ಲಂಕಾ ಸೋಲಿನಿಂದ ಡಬ್ಲ್ಯೂಟಿಸಿ(WTC) ಫೈನಲ್​ ಟಿಕೆಟ್‌ ಖಾತ್ರಿಯಾಗಿದೆ.

ನ್ಯೂಜಿಲೆಂಡ್​ ಮತ್ತು ಲಂಕಾ ನಡುವಣ 5ನೇ ದಿನದ ಹಣಾಹಣಿ ರೋಚಕವಾಗಿ ಇಂದು ಅಂತ್ಯ ಕಂಡಿತು. ಮಳೆಯಿಂದ ಪಂದ್ಯ ತಡವಾಗಿ ಆರಂಭವಾದರೂ ಕಿವೀಸ್ ಬ್ಯಾಟರ್‌ಗಳು ಇಂದು 256 ರನ್​ ಗಳಿಸಿ ಗೆಲುವಿನ ನಗೆ ಬೀರಿದರು. ಇದರಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸುವ ಲಂಕಾ ಕನಸು ಭಗ್ನವಾಯಿತು. ಇತ್ತ ಭಾರತಕ್ಕೆ ಪ್ರವೇಶ ಸಿಕ್ಕಿತು.

ಇನ್ನು, ಭಾರತ-ಆಸಿಸ್​ ನಡುವಣ ಅಂತಿಮ ಟೆಸ್ಟ್​ ಡ್ರಾದತ್ತ ಸಾಗುತ್ತಿದೆ. ನಾಲ್ಕನೇ ದಿನದ ಕೊನೆಯ ಆಸಿಸ್​ ಎರಡನೇ ಇನ್ನಿಂಗ್ಸ್​ ಆರಂಭಿಸಿತ್ತು. 6 ಓವರ್​ ಆಡಿದ ಆಸಿಸ್​ 3 ರನ್​ ಗಳಿಸಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 88 ರನ್​ನ ಹಿನ್ನಡೆಯಲ್ಲಿತ್ತು. ನಾಲ್ಕನೇ ದಿನ ವಿರಾಟ್ ಅವರ 186 ಹಾಗೂ ಅಕ್ಷರ್​ ಅಬ್ಬರದ 79 ರನ್​ ಸಹಾಯದಿಂದ ತಂಡ 571 ರನ್​ ಗಳಿಸಿ, 91 ರನ್​ ಮುನ್ನಡೆ ಪಡೆದು ಕೊಂಡು ಆಲ್​ ಔಟ್​ ಆಗಿತ್ತು.

ಕೊನೆಯ ದಿನದ ಮೊದಲ ಅವಧಿಯ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್​ ನಷ್ಟಕ್ಕೆ 70 ರನ್​ ಗಳಿಸಿ, 18 ರನ್​ ಹಿನ್ನಡೆಯಲ್ಲಿತ್ತು. ಲಾಬುಶೇನ್​ 22 ಮತ್ತು ಟ್ರಾವೆಸ್​ ಹೆಡ್​ 45 ರನ್​​ ಗಳಿಸಿದ್ದರು. ನಿನ್ನೆ ನೈಟ್​ ವಾಚ್​ಮೆನ್​ ಆಗಿ ಕಣಕ್ಕಿಳಿದಿದ್ದ ಮ್ಯಾಥ್ಯೂ ಕುಹ್ನೆಮನ್ 6 ರನ್​ ಗಳಿಸಿ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿದ್ದಾರೆ.

WTCಯಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ: ಪಂದ್ಯದಎರಡು ಸೆಷನ್​ ಮಾತ್ರ ಬಾಕಿ ಇದ್ದು, ಭಾರತ ಒಂದು ಸೆಷನ್​ ಆಡಲಿರುವ ಕಾರಣ ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ. ಹೋಳ್ಕರ್​ ಕ್ರೀಡಾಂಗಣದಲ್ಲಿ ಭಾರತವನ್ನು ಸೋಲಿಸಿ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ಗೆ ಆಸ್ಟ್ರೇಲಿಯಾ ಪ್ರವೇಶ ಪಡೆದಿತ್ತು. ಎದುರಾಳಿ ತಂಡದ ಸ್ಥಾನಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಪೈಪೋಟಿ ಇತ್ತು. ಭಾರತಕ್ಕೆ ಅಂತಿಮ ಪಂದ್ಯ ಗೆಲ್ಲಲೇ ಬೇಕಿತ್ತು. ಇಲ್ಲವೇ ನ್ಯೂಜಿಲ್ಯಾಂಡ್​​​​ನಲ್ಲಿ ಲಂಕಾ ಸೋಲು ಕಾಣಬೇಕಿತ್ತು. ಆದರೆ, ವಿಲಿಯಮ್ಸನ್‌ ಪಡೆ ತವರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಭಾರತದ ಪಂದ್ಯದ ರಿಸಲ್ಟ್​ ಮುನ್ನವೇ ಫೈನಲ್​ ಪಕ್ಕಾ ಆಗಿದ್ದು, ಜೂನ್​ 7 ರಂದು ಓವಲ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.

ಈವರೆಗೆ ಪಂದ್ಯ..:ಶುಭಮನ್​ 128, ವಿರಾಟ್​ ಕೊಹ್ಲಿ 186 ಮತ್ತು ಅಕ್ಷರ್​ ಪಟೇಲ್ 73 ರನ್​ ಸಹಾಯದಿಂದ ಭಾರತ ಪ್ರಥಮ ಇನ್ನಿಂಗ್ಸ್​ನಲ್ಲಿ 571 ರನ್‌ ದಾಖಲಿಸಿದೆ. ಆಸಿಸ್​ ಪರ ಮೊದಲ ಇನ್ನಿಂಗ್ಸ್​ನಲ್ಲಿ ಉಸ್ಮಾನ್​ ಖವಾಜಾ 180 ಮತ್ತು ಕ್ಯಾಮರಾನ್ ಗ್ರೀನ್ 114 ರನ್​ ಸಹಾಯದಿಂದ 480 ರನ್​ ಗಳಿಸಿತ್ತು. ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಕಾಂಗರೂ ಪಡೆ ಊಟದ ನಂತರ 9 ರನ್ ಲೀಡ್​ ಪಡೆದುಕೊಂಡಿದೆ.

ಇದನ್ನೂ ಓದಿ:ಅಹಮದಾಬಾದ್​ ಟೆಸ್ಟ್​: ಆಸಿಸ್​ ವಿರುದ್ಧ 'ವಿರಾಟ'​ ರನ್​, ಭಾರತಕ್ಕೆ 88 ಮುನ್ನಡೆ

Last Updated : Mar 13, 2023, 3:42 PM IST

ABOUT THE AUTHOR

...view details