ಇಂದೋರ್ (ಮಧ್ಯಪ್ರದೇಶ): ವಿಶ್ವಕಪ್ಗೂ ಮುನ್ನ ಭಾರತದ ಬ್ಯಾಟರ್ಗಳು ತಂಡದ ಮೇಲೆ ವಿಶ್ವಾಸವನ್ನು ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗದು. ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಏದಕದಿನ ಪಂದ್ಯದಲ್ಲಿ ಶತಕವನ್ನು ಗಳಿಸಿ ಸಂಭ್ರಮಿಸಿದರು. ಶ್ರೇಯಸ್ ಅಯ್ಯರ್ ತಮ್ಮ ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದರೆ, ಶುಭಮನ್ ಗಿಲ್ 6ನೇ ಶತಕವನ್ನು ಗಳಿಸಿದರು.
ಅಯ್ಯರ್ ಕಮ್ಬ್ಯಾಕ್:ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣಕ್ಕೆ ತಂಡದಿಂದ ಹೊರಗುಳಿದ ನಂತರ ಐಪಿಎಲ್ನ್ನು ಸಹ ಮಿಸ್ ಮಾಡಿಕೊಂಡಿದ್ದರು. ವಿದೇಶಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಚೇತರಿಸಿಕೊಂಡರು. ಸಂಪೂರ್ಣ ಫಿಟ್ ಆಗಿದ್ದ ಅಯ್ಯರ್ ಏಷ್ಯಾಕಪ್ನಲ್ಲಿ ತಂಡಕ್ಕೆ ಮರಳಿದರು.
ಲಂಕಾದಲ್ಲಿ ಒಂದು ಪಂದ್ಯವನ್ನು ಆಡಿದ ಅಯ್ಯರ್ ಮತ್ತೆ ಬೆನ್ನು ನೋವಿಗೆ ತುತ್ತಾಗಿದ್ದರು. ನಂತರ ಏಷ್ಯಾಕಪ್ನಲ್ಲಿ ಅವರಿಗೆ ಸಿಕ್ಕಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಆದ ಅಯ್ಯರ್ ಮೊದಲ ಪಂದ್ಯದಲ್ಲಿ 3 ರನ್ ಗಳಿಸಿದ್ದಾಗ ರನ್ ಔಟ್ ಆಗಿ ಪೆವಿಲಿಯನ್ಗೆ ಮರಳಿದ್ದರು.
ಇಂದಿನ ಇನ್ನಿಂಗ್ಸ್ನಲ್ಲಿ ಅಯ್ಯರ್ 86 ಬಾಲ್ ಎದುರಿಸಿ ಶತಕವನ್ನು ಗಳಿಸಿದರು. ಶತಕದ ನಂತರ ರನ್ನ ವೇಗ ಹೆಚ್ಚಿಸಲು ಹೋದ ಅಯ್ಯರ್ ಅಬಾಟ್ ಬೌಲಿಂಗ್ನಲ್ಲಿ ವಿಕೆಟ್ ಕೊಟ್ಟರು. ಇನ್ನಿಂಗ್ಸ್ನಲ್ಲಿ ಅಯ್ಯರ್ 90 ಬಾಲ್ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸ್ನಿಂದ 105 ರನ್ ಗಳಿಸಿ ವಿಕೆಟ್ ಕೊಟ್ಟರು.