ಕರ್ನಾಟಕ

karnataka

ETV Bharat / sports

ಸ್ಪಿನ್​ ಬಲೆಗೆ ಬಿದ್ದ ಕಾಂಗರೂ ಪಡೆ​: ಭಾರತಕ್ಕೆ ಇನಿಂಗ್ಸ್​, 132 ರನ್​ ಗೆಲುವು - Ravichandran Ashwin

ಭಾರತ ಆಸ್ಟ್ರೇಲಿಯಾ ಟೆಸ್ಟ್​ ಸರಣಿ- ಭಾರತದ ಸ್ಪಿನ್​ ಬಲೆಗೆ ಬಿದ್ದ ಆಸೀಸ್​ - ಕಾಂಗರೂ ಪಡೆಗಳಿಗೆ ಹೀನಾಯ ಸೋಲು - ಮೂರೇ ದಿನದಲ್ಲಿ ಮುಗಿದ ಪಂದ್ಯ

India vs Australia 1st Test
ಸ್ಪಿನ್​ ಬಲೆಗೆ ಬಿದ್ದ ಆಸೀಸ್

By

Published : Feb 11, 2023, 2:27 PM IST

Updated : Feb 11, 2023, 3:43 PM IST

ನಾಗ್ಪುರ(ಮಹಾರಾಷ್ಟ್ರ):ಸ್ಪಿನ್​ ಪಿಚ್​ ವಿರೋಧಿಸಿದ್ದ ಆಸೀಸ್​ ನಿರೀಕ್ಷೆಯಂತೆ ಇನಿಂಗ್ಸ್​ ಮತ್ತು 132 ರನ್ ಗೆಲುವು ಸಾಧಿಸಿತು. ರವೀಂದ್ರ ಜಡೇಜಾ ದಾಳಿಗೆ ನಲುಗಿ ಮೊದಲ ಇನಿಂಗ್ಸ್​ನಲ್ಲಿ 177 ರನ್​ಗೆ ಔಟ್​ ಆಗಿದ್ದ ಕಾಂಗರೂ, ಪಡೆ ಎರಡನೇ ಇನಿಂಗ್ಸ್​ನಲ್ಲಿ ಹಿರಿಯ ಸ್ಪಿನ್​ ಮಾಂತ್ರಿಕ ಆರ್​. ಅಶ್ವಿನ್​ ಬಿರುಗಾಳಿಗೆ ತರಗೆಲೆಯಂತೆ ಉರುಳಿ ಹೀನಾಯ ಸೋಲೊಪ್ಪಿಕೊಂಡಿತು. ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್​ ಆರಂಭವಾದ ಸುಮಾರು ಎರಡು ಗಂಟೆಗಳ ಅಂತರದಲ್ಲಿ ಭಾರತೀಯ ಸ್ಪಿನ್​ ದಾಳಿಗೆ ಮಣಿದ ಆಸ್ಟ್ರೇಲಿಯಾ 91 ರನ್​ಗೆ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತು. ಭಾರತದಲ್ಲಿ ಸರಣಿ ಆರಂಭಕ್ಕೂ ಮೊದಲೇ ಅಶ್ವಿನ್​ ಸ್ಪಿನ್​ ದಾಳಿಗೆ ಬಗ್ಗೆ ಕಾಂಗರೂ ಪಡೆ ತಲೆಕೆಡಿಸಿಕೊಂಡಿತ್ತು. ಅದರಂತೆ ಅಶ್ವಿನ್​ ಎರಡನೇ ಇನ್ನಿಂಗ್ಸ್​ನಲ್ಲಿ 12 ಓವರ್​ನಲ್ಲಿ 5 ವಿಕೆಟ್​ ಕಿತ್ತರು.

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್​ ಸ್ಮಿತ್​ ಒಂದು ಕಡೆ ವಿಕೆಟ್​ ನಿಲ್ಲಿಸಿಕೊಂಡು ಕ್ರೀಸ್​ ಕಾದರೆ ಮತ್ತೊದೆಡೆ ಭಾರತದ ಸ್ಪನ್​ ದಾಳಿಗೆ ಪೆವಿಲಿಯನ್​ ಪರೇಡ್​ ನಡೆಯುತ್ತಿತ್ತು. ಭಾರತೀಯ ಬೌಲಿಂಗ್​ನ್ನು ಏಕಾಂಗಿಯಾಗಿ ಎದುರಿಸಿದ ಸ್ಮಿತ್​ 51 ಎಸೆತಗಳಲ್ಲಿ 25 ರನ್​ಗಳಿಸಿ ಅಜೇಯರಾಗಿ ಉಳಿದರು. ಮಿಕ್ಕ ಆಟಗಾರರೆಲ್ಲಾ 20 ರನ್​ ಗಡಿ ಮುಟ್ಟಲೂ ಹವಣಿಸಿದರು. ಈ ಇನ್ನಿಂಗ್ಸ್​ನಲ್ಲಿ 8 ವಿಕೆಟ್​ ಸ್ಪಿನ್ನರ್​ಗಳ ಪಾಲಾಯಿತು. ಶಮಿ ಎರಡು ವಿಕೆಟ್​ ಪಡೆದರು.

ಕಾಂಗರೂ ಪಡೆ ಪೆವಿಲಿಯನ್​ ಪರೇಡ್​:ಭಾರತ 400ಕ್ಕೆ ಆಲ್​ಔಟ್ ಆದ ನಂತರ 223 ರನ್​ಗಳ ಮುನ್ನಡೆ ಸಾಧಿಸಿತ್ತು. ​ಭಾರತದ ಮೊದಲ ಇನ್ನಿಂಗ್ಸ್​ ನಂತರ ಊಟದ ವಿರಾಮವಾಗಿ ಕ್ರೀಸ್​ಗೆ ಮರಳಿದ ಪ್ಯಾಟ್​ ಕಮಿನ್ಸ್​ ಪಡೆ ಸತತ ವಿಕೆಟ್​ ಪತನ ಅನುಭವಿಸಿತು. ಕವಾಜ (5) ಎರಡನೇ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ವಾರ್ನರ್​(10) ಮತ್ತು ಲಬುಶೇನೆ (17) ಕ್ರೀಸ್ ಕಾಯ್ದುಕೊಳ್ಳಲೆತ್ನಿಸಿದರಾದರೂ ಅಶ್ವಿನ್​ ಮತ್ತು ಜಡೇಜಾ ಸ್ಪಿನ್​ಗೆ ಔಟ್​ ಆದರು. ಮ್ಯಾಟ್ ರೆನ್ಶಾ (2) ಮತ್ತು ಪೀಟರ್ ಹ್ಯಾಂಡ್ಸ್ಕಾಂಬ್ (6) ಬಂದು ಹೋದದ್ದೇ ಅರಿವಿಗೇ ಬರಲಿಲ್ಲ.

ಅಲೆಕ್ಸ್​ ಕ್ಯಾರಿ (10) ಬಿರುಸಿನ ಆಟಕ್ಕೆ ಮುಂದಾಗಿ ಎರಡು ಫೋರ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ನಾಯಕ ಪ್ಯಾಟ್ ಕಮಿನ್ಸ್ (1), ಟಾಡ್ ಮರ್ಫಿ(2), ನಾಥನ್ ಲಿಯಾನ್(8) ಮತ್ತು ಸ್ಕಾಟ್ ಬೋಲ್ಯಾಂಡ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಇನ್ನೊಂದು ಬದಿಯಲ್ಲಿ 51 ಬಾಲ್​ ಎದುರಿಸಿ ಎರಡು ಬೌಂಡರಿ ಮತ್ತು 1 ಸಿಕ್ಸರ್​ನಿಂದ ಸ್ಮಿತ್​ 25 ರನ್​ಗಳಿಸಿ ಅಜೇಯರಾಗಿ ಉಳಿದುಕೊಂಡರು.

ಜಡೇಜ ಮ್ಯಾನ್​ ಆಫ್​ ದಿ ಮ್ಯಾಚ್​:ಮೊದಲ ಇನ್ನಿಂಗ್ಸ್​ನ ಬೌಲಿಂಗ್​ ಮತ್ತು ಬ್ಯಾಟಿಂಗ್​ ಪ್ರದರ್ಶನ ಹಾಗೂ ಎರನೇ ಇನ್ನಿಂಗ್ಸ್​ನ ಎರಡು ಅಮೂಲ್ಯ ವಿಕಟ್​ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಸರ್​ ರವೀಂದ್ರ ಜಡೇಜ ಭಾಜನರಾದರು. ಮೊದಲ ಇನ್ನಿಂಗ್ಸ್​ನಲ್ಲಿ ಕಾಂಗರೂ ಪಡೆಯನ್ನು 177ಕ್ಕೆ ಆಲ್​ಔಟ್​ ಮಾಡುವಲ್ಲಿ ಪ್ರಮುಖ 5 ವಿಕೆಟ್​ ಉರುಳಿಸಿದ್ದರು. ಬ್ಯಾಟಿಂಗ್​ನಲ್ಲಿ 70 ರನ್​ನ ಅಮೂಲ್ಯ ಕೊಡುಗೆ ತಂಡಕ್ಕೆ ಕೊಟ್ಟಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ ಲಬುಶೇನೆ ಮತ್ತು ಕಮಿನ್ಸ್​ ಅವರ ವಿಕೆಟ್​ ಉರುಳಿಸಿದ್ದರು.

ನಾಗ್ಪುರದಲ್ಲಿ ಸಿನ್ನರ್​ಗಳದ್ದೇ ಪ್ರಾಬಲ್ಯ : ಭಾರತದ ಸ್ಪಿನ್ನರ್​ಗಳು ಆಸಿಸ್​ನ 20 ವಿಕೆಟ್​ನಲ್ಲಿ 16 ವಿಕೆಟ್​ಗಳನ್ನು ಕಬಳಿಸಿದರು. ಎರಡೂ ಇನ್ನಿಂಗ್ಸ್​ನಿಂದ ಜಡೇಜಾ 7, ಅಶ್ವಿನ್​ 8 ಮತ್ತು ಅಕ್ಷರ್​ 1 ವಿಕೆಟ್​ ಪಡೆದರು. ವೇಗದ ವಿಭಾಗದಲ್ಲಿ ಶಮಿ 3 ಹಾಗೂ ಸಿರಾಜ್​ 1 ವಿಕೆಟ್​ ಪಡೆದುಕೊಂಡರು. ಒಟ್ಟು 30 ವಿಕೆಟ್​ನಲ್ಲಿ 24 ವಿಕೆಟ್​ಗಳು ಸ್ಪಿನ್ನರ್​ಗಳ ಪಾಲಾಯಿತು.

ಇದನ್ನೂ ಓದಿ:Ind vs Aus 1st Test: 400 ರನ್​ಗೆ ಭಾರತ ಆಲೌಟ್​, ಆಸೀಸ್​ನ ಟಾಡ್​ ಮೊರ್ಪಿಗೆ 7 ವಿಕೆಟ್​

ರೋಹಿತ್​, ಜಡ್ಡು ಮತ್ತು ಅಕ್ಷರ್​ ಮೆರುಗು:ಭಾರತದ ಮೊದಲ ಇನ್ನಿಂಗ್​ ಆಟಕ್ಕೆ ಆಸ್ಟ್ರೇಲಿಯಾದ ಡೆಬ್ಯೂ ಬೌಲರ್ಟಾಡ್ ಮರ್ಫಿ ಕಾಡಿದರು. ಭಾರತದ ಏಳು ವಿಕೆಟ್​ ಕಿತ್ತು ಸಾಧನೆ ಮಾಡಿದರು. ಭಾರತದ ನಾಯಕ ರೋಹಿತ್​ ಶರ್ಮಾ ಅವರು ಆರಂಭಿಕರಾಗಿ ಶತಕ ಗಳಿಸಿ ಆಸರೆ ಆದರು, ಆದರೆ ಮಿಕ್ಕ ಬ್ಯಾಟರ್​ಗಳು ಹೆಚ್ಚು ಪ್ರತಿ ಸ್ಪರ್ಧೆ ನೀಡಿರಲಿಲ್ಲ. ಬೌಲಿಂಗ್​ ಆಲ್​ರೌಂಡರ್​ಗಳಾದ ಜಡೇಜ ಮತ್ತು ಅಕ್ಷರ್​ ಪಟೇಲ್​ ತಲಾ ಅರ್ಧಶತಕ ಗಳಿಸಿ ಭಾರತ 400 ರನ್​ ಗಳಿಸುವಂತೆ ಮಾಡಿದರು. ಭಾರತ 223 ರನ್​ಗಳ ಲೀಡ್​ನೊಂದಿಗೆ ಪ್ರಥಮ ಇನ್ನಿಂಗ್ಸ್ ಅಂತ್ಯವಾಯಿತು​.

ಅಲ್ಪ ಮೊತ್ತಕ್ಕೆ ಆಸಿಸ್​ ಕುಸಿತ:ನಾಗ್ಪುರದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದು ಕೊಂಡಿದ್ದ ಕಮಿನ್ಸ್​ಗೆ ಸ್ಪಿನ್ನರ್​ಗಳ ಭಯ ಇತ್ತು. ಅದರಂತೆ ಜಡೇಜ ಆಸಿಸ್​ ಬ್ಯಾಟರ್​ಗಳ ವಿಕೆಟ್​ ಪಡೆದುಕೊಂಡರು. ಜಡೇಜ 5 ಮತ್ತು ಅಶ್ವಿನ್​ 3 ಸೇರಿ ಒಟ್ಟು ಎಂಟು ವಿಕೆಟ್​ಗಳನ್ನು ಮೊದಲ ಇನ್ನಿಂಗ್ಸ್​ನಲ್ಲಿ ಭಾರತೀಯ ಬೌಲಿಂಗ್​ ಪಡೆ ಪಡೆದು ಕೊಂಡಿತು. ಜಡ್ಡು ಮತ್ತು ಅಶ್ವಿನ್​ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಪಡೆ 177ಕ್ಕೆ ಆಲ್​ಔಟ್​ ಆಯಿತು.

ಎರಡನೇ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಫೆಬ್ರವರಿ 17 ರಿಂದ ನಡೆಯಲಿದೆ.

ಇದನ್ನೂ ಓದಿ:ರೋಹಿತ್​ ಶತಕ, ಜಡೇಜಾ- ಅಕ್ಷರ್​ ಫಿಫ್ಟಿ: ಭಾರತ 7 ವಿಕೆಟ್​ಗೆ 321 ರನ್​

Last Updated : Feb 11, 2023, 3:43 PM IST

ABOUT THE AUTHOR

...view details