ಕರ್ನಾಟಕ

karnataka

ETV Bharat / sports

U19 ವಿಶ್ವಕಪ್​ ಅಭ್ಯಾಸ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಜಯ - ಆಸ್ಟ್ರೇಲಿಯಾ U19 ವಿರುದ್ಧ ಭಾರತ U19 ತಂಡಕ್ಕೆ ಜಯ

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ U19 ತಂಡ 49.2 ಓವರ್​​ಗಳಲ್ಲಿ 268 ರನ್​ಗಳಿಸಿತ್ತು. ನಾಯಕ ಕೂಪರ್ ಕಾನೊಲಿ 125 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 117, ತಬಿಯಸ್ ಸ್ನೆಲ್ 35, ವಿಲಿಯಂ ಸಾಲ್ಜ್‌ಮನ್ 25 ರನ್​ಗಳಿಸಿದರು.

U19 World cup warm up match
U19 ವಿಶ್ವಕಪ್

By

Published : Jan 12, 2022, 3:12 PM IST

ಗಯಾನ: ಅಂಡರ್​​ 19 ವಿಶ್ವಕಪ್​ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಸತತ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ U19 ತಂಡ 49.2 ಓವರ್​​ಗಳಲ್ಲಿ 268 ರನ್​ಗಳಿಸಿತ್ತು. ನಾಯಕ ಕೂಪರ್ ಕಾನೊಲಿ 125 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 117, ತಬಿಯಸ್ ಸ್ನೆಲ್ 35 ಹಾಗು ವಿಲಿಯಂ ಸಾಲ್ಜ್‌ಮನ್ 25 ರನ್​ಗಳಿಸಿದರು.

ಭಾರತದ ಪರ ರವಿಕುಮಾರ್ 4, ರಾಜವರ್ಧನ್​ 3, ರಾಜಹ್​ ಬಾವಾ, ಕೌಶಾಲ್​ ಮತ್ತು ನಿಶಾಂತ್ ಸಿಂಧು ತಲಾ ಒಂದು ವಿಕೆಟ್ ಪಡೆದರು.

269 ರನ್ ಗುರಿ ಬೆನ್ನಟ್ಟಿದ ಭಾರತ 47.3 ಓವರ್​ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಹರ್ನೂರ್ ಸಿಂಗ್ 108 ಎಸೆತಗಳಲ್ಲಿ 100 ಮತ್ತು ಶೇಕ್​ ರಶೀದ್​ 72 ರನ್​​ಗಳಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಲು ನಿವೃತ್ತಿ ತೆಗೆದುಕೊಂಡರು. ನಾಯಕ ಯಶ್​ ಧುಲ್​ 47 ಎಸೆತಗಳಲ್ಲಿ 7 ವಿಕೆಟ್ ಕಳೆದುಕೊಂಡು ಅಜೇಯ 50 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಜನವರಿ 14 ರಿಂದ ವಿಶ್ವಕಪ್​ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಜನವರಿ 15ರಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

4 ಬಾರಿ ಚಾಂಪಿಯನ್​, 3 ಬಾರಿ ರನ್ನರ್​ ಅಪ್ ಆಗಿರುವ ಭಾರತ ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ಹರಿಣಗಳ ನಾಡಿನಲ್ಲಿ ಕೋಚ್‌ ದ್ರಾವಿಡ್​ ದಾಖಲೆ ಮುರಿದ ಕ್ಯಾಪ್ಟನ್​​ ಕೊಹ್ಲಿ

ABOUT THE AUTHOR

...view details