ಕೊಲೊಂಬೊ:ಜುಲೈನಲ್ಲಿ ಭಾರತದ ಸೀಮಿತ ಓವರ್ಗಳ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ವಾರ ತಿಳಿಸಿದ್ದರು. ಆದರೆ ಆ ಪ್ರವಾಸ ಕೋವಿಡ್-19 ಕಾರಣದಿಂದ ತೂಗುಯ್ಯಾಲೆಯಲ್ಲಿ ಸಿಲುಕಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಜುಲೈನಲ್ಲಿ ಏಕದಿನ ಮತ್ತು 3 ಟಿ-20 ಪಂದ್ಯಗಳಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಲಿದೆ ಎಂದು ದಾದಾ ಹೇಳಿದ್ದರು. ಅಲ್ಲದೆ ಈ ತಂಡ ಸಂಪೂರ್ಣ ವೈಟ್ ಬಾಲ್ ಸ್ಪೆಷಲಿಸ್ಟ್ಗಳದ್ದಾಗಿರುತ್ತದೆ ಎಂದು ತಿಳಿಸಿದ್ದರು.
ಕೊಲೊಂಬೋದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಬಯೋಬಬಲ್ನಲ್ಲಿ ಜುಲೈ 13, 16 ಮತ್ತು 19ರಂದು ಏಕದಿನ ಪಂದ್ಯಗಳು ಮತ್ತು ಜುಲೈ 22, 24 ಮತ್ತು 27ರಂದು ಟಿ-20 ಪಂದ್ಯಗಳಿಗೆ ಎಸ್ಎಲ್ಸಿ ಆತಿಥ್ಯ ನೀಡಬೇಕಿತ್ತು. ಆದರೆ ಪ್ರಸ್ತುತ ಶ್ರೀಲಂಕಾದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಈ ಸರಣಿ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.