ಕರ್ನಾಟಕ

karnataka

ETV Bharat / sports

ಬಲಿಷ್ಠ ಭಾರತದೆದುರು ಸರಣಿ ಜಯ ಸಾಧಿಸಿದ ದ.ಆಫ್ರಿಕಾ; ಐತಿಹಾಸಿಕ ಅವಕಾಶ ಕೈಚೆಲ್ಲಿದ ಕೊಹ್ಲಿ ಪಡೆ - ಹರಿಣಗಳ ನಾಡಲ್ಲಿ ಭಾರತಕ್ಕೆ ಸೋಲು

ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಇರಾದೆಯೊಂದಿಗೆ ಪ್ರಯಾಣ ಬೆಳೆಸಿದ್ದ ಟೀಂ ಇಂಡಿಯಾಗೆ ನಿರಾಸೆಯಾಗಿದೆ. ಹರಿಣಗಳ ನಾಡಲ್ಲಿ ಭಾರತ ಮತ್ತೊಮ್ಮೆ ಸೋಲಿನ ಸರಪಳಿಯಿಂದ ಹೊರಬರಲು ಸಾಧ್ಯವಾಗಲಿಲ್ಲ.

Team india lose test series in SA
Team india lose test series in SA

By

Published : Jan 14, 2022, 5:18 PM IST

Updated : Jan 14, 2022, 5:25 PM IST

ಕೇಪ್​ಟೌನ್​:ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲ್ಲುವ ಗುರಿಯೊಂದಿಗೆ ಪ್ರಯಾಣ ಬೆಳೆಸಿದ್ದ ಟೀಂ ಇಂಡಿಯಾ ನಿರಾಸೆಗೊಳಗಾಗಿದೆ. ಮೂರು ಟೆಸ್ಟ್​ ಪಂದ್ಯಗಳ ಸರಣಿಯನ್ನು 2-1ರ ಅಂತರದಿಂದ ಕೈಚೆಲ್ಲಿದ್ದು, ಈ ಮೂಲಕ ಐತಿಹಾಸಿಕ ಸಾಧನೆ ನಿರ್ಮಾಣ ಮಾಡುವ ಭಾರತದ ಕನಸು ಕನಸಾಗಿಯೇ ಉಳಿದಿದೆ. ಕೇಪ್​ಟೌನ್​ನಲ್ಲಿ ನಡೆದ ನಿರ್ಣಾಯಕ ಟೆಸ್ಟ್​ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಅಂತರದಿಂದ ಸೋಲು ಕಂಡಿದೆ.

ಸರಣಿಯಲ್ಲಿ 2-1 ಅಂತರದ ಜಯ ಸಾಧಿಸಿದ ಎಲ್ಗರ್ ಪಡೆ

ಕೇಪ್​ಟೌನ್​​ನಲ್ಲಿ ನಡೆದ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ತಂಡ ಕೊಹ್ಲಿ ಪಡೆಗೆ ಸೋಲಿನ ರುಚಿ ತೋರಿಸಿತು. ಪೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ 79 ರನ್​ಗಳ ನೆರವಿನಿಂದ 223ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ 210ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಟೀಂ ಇಂಡಿಯಾ 13ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು.

ಎರಡನೇ ಇನ್ನಿಂಗ್ಸ್​ನಲ್ಲಿ ತಂಡಕ್ಕೆ ಆಸರೆಯಾಗಿದ್ದ ರಿಷಭ್​ ಪಂತ್‌

ಎರಡನೇ ಇನ್ನಿಂಗ್ಸ್​​ನಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದೆಲ್ಲ ಪ್ಲೇಯರ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ತಂಡ 198ರನ್​ಗಳಿಗೆ ಆಲೌಟ್​ ಆಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಪರ ರಬಾಡಾ, ನಿಂಗಿಡಿ ತಲಾ 3 ವಿಕೆಟ್ ಪಡೆದರೆ, ಜಾನ್ಸನ್​ 4 ವಿಕೆಟ್ ಕಿತ್ತರು. ಟೀಂ ಇಂಡಿಯಾ ಪರ ರಿಷಭ್ ಪಂತ್ ಆಕರ್ಷಕ ಶತಕ ಸಿಡಿಸಿದರು.

ಸರಣಿ ನಿರ್ಣಯಿಸುವ ಪಂದ್ಯದಲ್ಲಿ ಭಾರತ ನೀಡಿದ್ದ 212 ರನ್​ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮರ್ಕ್ರಾಮ್​ 16 ರನ್​ ಹಾಗೂ ಎಲ್ಗರ್​​ 30 ರನ್​ಗಳಿಕೆ ಮಾಡಿದರು. ಇದರ ಬಳಿಕ ಮೈದಾನಕ್ಕೆ ಬಂದ ಪೀಟರ್ಸನ್​​ 82 ರನ್​ಗಳಿಕೆ ಮಾಡಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಕೊನೆಯದಾಗಿ ಬವುಮಾ ಅಜೇಯ 32 ರನ್​ ಹಾಗೂ ಡುಸೆನ್​​ ಅಜೇಯ 41ರನ್​ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತಂಡ 63.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ನಷ್ಟಕ್ಕೆ 212ರನ್​​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು.

ಸೆಂಚುರಿಯನ್​​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 113ರನ್​ಗಳ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಸರಣಿಯಲ್ಲಿ 1--0 ಅಂತರದ ಮುನ್ನಡೆ ಪಡೆದುಕೊಂಡಿದ್ದ ಟೀಂ ಇಂಡಿಯಾ ನಂತರ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಸರಣಿ 1-1 ಅಂತರದಲ್ಲಿ ಸಮಗೊಂಡಿತ್ತು.

Last Updated : Jan 14, 2022, 5:25 PM IST

ABOUT THE AUTHOR

...view details