ಕರ್ನಾಟಕ

karnataka

ETV Bharat / sports

ಭಾರತೀಯ ಶಕ್ತಿ ಶಾಲಿ ಬೌಲರ್​ಗಳನ್ನು ಎದುರಿಸಲು ಉತ್ಸುಕನಾಗಿರುವೆ : ವಿಲ್​ ಪುಕೊವ್​​ಸ್ಕಿ - Test Series

ಗಾಯಗೊಂಡು ಭಾರತದ ವಿರುದ್ಧ ಅಂತಿಮ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿದಿರುವ ಆಸೀಸ್​ ಆರಂಭಿಕ ಆಟಗಾರ ಡೇವಿಡ್ ವಾರ್ನರ್​​ ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ವಾರ್ನರ್​ ಚೇತರಿಸಿಕೊಳ್ಳದಿದ್ದರೆ ವಿಲ್​ ಪುಕೊವ್​ಸ್ಕಿ ಅವರ ಸ್ಥಾನ ತುಂಬುದ ಸಾಧ್ಯತೆ ಇದೆ..

Will Pucovski
ವಿಲ್​​​ ಪುಕೊವ್ಸ್ಕಿ

By

Published : Dec 4, 2020, 6:14 PM IST

ಸಿಡ್ನಿ :ಡೇವಿಡ್​​ ಅನುಪಸ್ಥಿತಿ ಸ್ಥಾನ ತುಂಬಲು ಮತ್ತುಚೊಚ್ಚಲ ಟೆಸ್ಟ್​ ಪಂದ್ಯಕ್ಕೆ ಪದಾರ್ಪಣೆಗೆ ಸಜ್ಜಾಗಿರುವ ಆಸೀಸ್​ ಆಟಗಾರ ವಿಲ್​ ಪುಕೊವ್​​ಸ್ಕಿ, ಡಿಸೆಂಬರ್ 17ರಂದು ನಡೆಯಲಿರುವ ಪಂದ್ಯದಲ್ಲಿ ಭಾರತದ ಶಕ್ತಿಶಾಲಿ ಬೌಲರ್​​​ಗಳನ್ನು ಎದುರಿಸಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಭಾರತ ತಂಡದ ವೇಗಿಗಳಾದ ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಶಮಿ, ಉಮೇಶ್​ ಜಾಧವ್​, ಮೊಹಮ್ಮದ್​ ಸಿರಾಜ್​, ನವದೀಪ್​ ಸೈನಿ ಸ್ಪಿನ್ನರ್​​ಗಳಾದ ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್​ ಮತ್ತು ಕುಲದೀಪ್​ ಯಾದವ್​ ಅವರು ತಂಡದ ಫಲಿತಾಂಶ ಬದಲಿಸುವ ಶಕ್ತಿ ಹೊಂದಿದ್ದಾರೆ.

ಅಂತಹ ಬೌಲರ್​ಗಳನ್ನು ಎದುರಿಸಲು ನಾನು ಹೆಚ್ಚು ಕುತೂಹಲನಾಗಿದ್ದೇನೆ ಎಂದು 22ರ ಹರೆಯದ ವಿಲ್​ ತಿಳಿಸಿದರು. ಚೊಚ್ಚಲ ಟೆಸ್ಟ್​ ಪಂದ್ಯಕ್ಕೆ ಪಾದಾರ್ಪಣೆ ಮಾಡಲಿರುವ ನನಗೆ ಹೆಚ್ಚು ರೋಮಾಂಚನಕಾರಿಯಾಗಿದೆ. ಉತ್ಸುಕತೆಯ ಜೊತೆಗೆ ಅನೇಕ ಸವಾಲುಗಳು ನನ್ನ ಮುಂದಿವೆ ಎಂದು 22 ಪ್ರಥಮ ದರ್ಜೆ ಪಂದ್ಯಗಳಿಂದ 1,720 ರನ್ ಗಳಿಸಿರುವ ಪುಕೊವ್​ಸ್ಕಿ ಆನ್‌ಲೈನ್ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಗಾಯಗೊಂಡು ಭಾರತದ ವಿರುದ್ಧ ಅಂತಿಮ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿದಿರುವ ಆಸೀಸ್​ ಆರಂಭಿಕ ಆಟಗಾರ ಡೇವಿಡ್ ವಾರ್ನರ್​​ ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ವಾರ್ನರ್​ ಚೇತರಿಸಿಕೊಳ್ಳದಿದ್ದರೆ ವಿಲ್​ ಪುಕೊವ್​ಸ್ಕಿ ಅವರ ಸ್ಥಾನ ತುಂಬುದ ಸಾಧ್ಯತೆ ಇದೆ.

ಡೇ ಅಂಡ್‌ ನೈಟ್ ಟೆಸ್ಟ್ ಪಂದ್ಯಕ್ಕೆ ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಅವಕಾಶ ಸಿಕ್ಕರೆ ತಂಡ ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಹೀಗಾಗಿ, ತಂಡ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಯುತ್ತಿದ್ದೇನೆ ಎಂದು ಪುಕೊವ್ಸ್ಕಿ ಹೇಳಿದರು.

ಹಿರಿಯರ ತಂಡದಲ್ಲಿ ಅವಕಾಶ ದೊರೆಯುವ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಾನವನ್ನು ಗಳಿಸಿಕೊಳ್ಳುವ ಭಾರತ ಎ ವಿರುದ್ಧದ ಪಂದ್ಯದಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಹೇಳಿದರು.

ABOUT THE AUTHOR

...view details