ಕರ್ನಾಟಕ

karnataka

ETV Bharat / sports

ಅಂತಿಮ ಘಟ್ಟದಲ್ಲಿ ಪಂತ್​ ಗಳಿಸಿದ ಒಂದೊಂದು ರನ್ ಚಿನ್ನಕ್ಕೆ ಸಮ: ಟಿಮ್ ಪೇನ್ - ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್​​

ಸರಣಿ ಗೆಲ್ಲುತ್ತೇವೆ ಎಂಬ ಭರವಸೆ ಹೊಂದಿದ್ದೆವು. ಆದರೆ, ನಮ್ಮ ಯೋಜನೆಗಳು ಭಾರತ ತಂಡದ ಶಿಸ್ತುಬದ್ಧ ಮತ್ತು ಕಠಿಣ ದಾಳಿಯಿಂದಾಗಿ ಬುಡಮೇಲಾದವು. ಭಾರತದ ಆಟಗಾರರ ಬಹಳಷ್ಟು ವಿಷಯಗಳತ್ತ ಕೇಂದ್ರೀಕರಿಸಿದ್ದೇವೆ. ಪಂದ್ಯದಲ್ಲಿ ಉಂಟಾದ ತಪ್ಪುಗಳನ್ನು ನಾವು ತಿದ್ದಿಕೊಳ್ಳುತ್ತೇವೆ ಎಂದು ಟಿಮ್ ಪೇನ್ ಹೇಳಿದರು.

Australia skipper Tim Paine
ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್

By

Published : Jan 19, 2021, 7:40 PM IST

ಬ್ರಿಸ್ಬೇನ್​​:ಶಿಸ್ತುಬದ್ಧ ಆಟದಿಂದ ಐತಿಹಾಸಿಕ ಗೆಲುವು ಸಾಧಿಸಿರುವ ಭಾರತದ ಅಜಿಂಕ್ಯ ರಹಾನೆ ನೇತೃತ್ವದ ತಂಡವು ಅದಕ್ಕೆ ಸಂಪೂರ್ಣ ಅರ್ಹ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಪಂದ್ಯದ ನಂತರ ಭಾರತದ ಸಾಧನೆಯನ್ನು ಹೊಗಳಿದರು.

ನಾಲ್ಕನೇ ಟೆಸ್ಟ್​ನ ಅಂತಿಮ ದಿನದ ಕೊನೆಯ ಒಂದು ಗಂಟೆಯಲ್ಲಿ ರಿಷಬ್​​ ಪಂತ್​ ಗಳಿಸಿದ ಪ್ರತಿಯೊಂದು ರನ್​ ಚಿನ್ನಕ್ಕೆ ಸಮ. ಪಂತ್​ ಕೈಗಳಲ್ಲಿ ಉಕ್ಕಿನ ನರಗಳಿವೆ. ವಿಕೆಟ್​ ಕೀಪಿಂಗ್ ಮಾಡುವುದರ ಜೊತೆಗೆ ಬ್ಯಾಟಿಂಗ್‌ನಲ್ಲಿ​ ಕೂಡ ಅತ್ಯದ್ಭುತ ಪ್ರದರ್ಶನ ತೋರಿದರು. ಏಕೆಂದರೆ ಕೀಪಿಂಗ್​ ಜೊತೆಗೆ ಬ್ಯಾಟಿಂಗ್​ ಮಾಡುವುದು ಸುಲಭದ ಮಾತಲ್ಲ. ನಾನೊಬ್ಬ ವಿಕೆಟ್​ ಕೀಪರ್​​​ ಆಗಿ ಅದರ ಅನುಭವ ನನಗಿದೆ. ಅಲ್ಲದೆ, ಸರಣಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಎಂದು ಗುಣಗಾನ ಮಾಡಿದರು.

ನಮ್ಮ ತಂಡದ ಆಟಗಾರರ ಕಾರ್ಯಕ್ಷಮತೆಯೂ ಉತ್ತಮವಾಗಿತ್ತು. ಆದರೂ ಇನ್ನೂ ಸುಧಾರಣೆ ಕಾಣಬೇಕಿದೆ. ಭಾರತ 300+ ರನ್​​ ಗುರಿ ಬೆನ್ನಟ್ಟುವುದು ಕಷ್ಟವೆಂದೇ ಭಾವಿಸಿದ್ದೆವು. ಆದರೆ, ಪ್ರಚಂಡ ಹೋರಾಟ ನಡೆಸಿತು. ಭಾರತೀಯ ಆಟಗಾರರ ಎದೆ, ದೇಹದ ಹಲವು ಭಾಗಗಳಿಗೆ ಚೆಂಡು ತಗುಲಿ ಗಾಯವಾಗಿತ್ತು. ಆದರೂ ಎದೆಗುಂದದೆ ಗೆಲುವಿನ ದಡ ಸೇರಲು ಅರ್ಹರಾದರು. ಈ ಭಯಂಕರ ಹೋರಾಟದ ವಿಜಯಕ್ಕೆ ಅವರು ಅರ್ಹರು ಎಂದು ಕೊಂಡಾಡಿದರು.

ಸರಣಿ ಗೆಲ್ಲುತ್ತೇವೆ ಎಂಬ ಭರವಸೆ ಹೊಂದಿದ್ದೆವು. ಆದರೆ, ನಮ್ಮ ಯೋಜನೆಗಳು ಭಾರತ ತಂಡದ ಶಿಸ್ತುಬದ್ಧ ಮತ್ತು ಕಠಿಣ ದಾಳಿಯಿಂದಾಗಿ ಬುಡಮೇಲಾದವು. ಭಾರತದ ಆಟಗಾರರ ಬಹಳಷ್ಟು ವಿಷಯಗಳತ್ತ ಕೇಂದ್ರೀಕರಿಸಿದ್ದೇವೆ. ಪಂದ್ಯದಲ್ಲಿ ಉಂಟಾದ ತಪ್ಪುಗಳನ್ನು ನಾವು ತಿದ್ದಿಕೊಳ್ಳುತ್ತೇವೆ ಎಂದು ಪಂದ್ಯದ ನಂತರ ಹೇಳಿದರು.

ಗಾಯಾಳುಗಳ ಸರಮಾಲೆ ಹೊಂದಿದ್ದ ಭಾರತ ತಂಡವು, ಯುವ ಆಟಗಾರರನ್ನೇ ಹೆಚ್ಚು ಕಣಕ್ಕಿಳಿಸಿ ಆಸೀಸ್​ ವಿರುದ್ಧ ನಾಲ್ಕು ಪಂದ್ಯಗಳ ಸರಣಿಯನ್ನು 2-1ರಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಬ್ರಿಸ್ಬೇನ್​​ನ ಗಬ್ಬಾ ಕ್ರೀಡಾಂಗಣದಲ್ಲಿ 32 ವರ್ಷಗಳ ನಂತರ ಭಾರತ ಆಸೀಸ್​ ವಿರುದ್ಧ ಗೆದ್ದು ದಾಖಲೆ ಬರೆದಿದೆ.

ABOUT THE AUTHOR

...view details