ಸಿಡ್ನಿ: ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಏಕದಿನ ಸರಣಿ ಸೋಲು ಕಂಡ ನಂತರ ಪುಟದೆದ್ದ ಕೊಹ್ಲಿ ಪಡೆ ಟಿ-20 ಸರಣಿಯನ್ನ ತನ್ನ ಕೈ ವಶ ಮಾಡಿಕೊಂಡಿದೆ.
3 ಪಂದ್ಯಗಳ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಆಡಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಸರಣಿ ಗೆದ್ದು ಆಸೀಸ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಎರಡು ಪಂದ್ಯಗಳಲ್ಲಿ ಕೊಹ್ಲಿ ಬಾಯ್ಸ್ ಕಾಂಗರೂ ಪಡೆ ಮೇಲೆ ಆರ್ಭಟ ತೋರಿದೆ. ಎರಡನೇ ಪಂದ್ಯದಲ್ಲಿ 195 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ತಂಡ ಅಬ್ಬರದ ಬ್ಯಾಟಿಂಗ್ ಮಾಡಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಈ ಪಂದ್ಯದಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಕೆವಲ 22 ಎಸತಗಳಲ್ಲಿ 42 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಹಾಗೆಯೇ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಕೂಡ ಪಡೆದುಕೊಂಡರು.
ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಬಗ್ಗೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ, ಈ ಪ್ರಶಸ್ತಿ ನನಗೆ ಕೊಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಈ ಅವಾರ್ಡ್ ಟಿ. ನಟರಾಜನ್ಗೆ ಸಿಗುತ್ತದೆ ಎಂದು ಕೊಂಡಿದ್ದೆ ಎಂದು ಹೇಳಿದ್ದಾರೆ.
"ಪ್ರಸ್ತುತಿ ಸಮಾರಂಭದಲ್ಲಿ ಟಿ. ನಟರಾಜನ್ ಮ್ಯಾನ್ ಆಫ್ ದಿ ಮ್ಯಾಚ್ ಎಂದು ನಾನು ಭಾವಿಸಿದ್ದೆ. ಆದರೆ, ಮ್ಯಾನ್ ಆಫ್ ದಿ ಮ್ಯಾಚ್ ಎಂದು ನನ್ನನ್ನು ಘೋಷಿಸಿದಾಗ ಆಶ್ಚರ್ಯವಾಯಿತು, ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟಿ. ನಟರಾಜನ್ 4 ಓವರ್ಗಳಲ್ಲಿ ಕೇವಲ 20 ರನ್ ನೀಡಿ ಎರಡು ಪ್ರಮುಖ ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯಾ ತಂಡ 200ರ ಗಡಿ ದಾಟದ ಹಾಗೇ ಕಟ್ಟಿಹಾಕುವಲ್ಲಿ ಅವರ ಪಾತ್ರ ದೊಡ್ಡದಿತ್ತು. ಹಾಗಾಗಿ ಈ ಪ್ರಶಸ್ತಿ ಅವರಿಗೆ ಸಿಗುತ್ತದೆ ಎಂದುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.
ಓದಿ :'ರೋಹಿತ್, ಬುಮ್ರಾರಂಥ ಆಟಗಾರರಿಲ್ಲದೆ ಟಿ20 ಸರಣಿ ಗೆದ್ದಿರುವುದಕ್ಕೆ ಗರ್ವವಿದೆ'
"ನಿಜ ಹೇಳಬೇಕೆಂದರೆ, ನಾನು ಅವನ ಬಗ್ಗೆ ಪ್ರಭಾವಿತನಾಗಿದ್ದೇನೆ. ಯಾಕೆಂದರೆ, ಅವನು ಎಲ್ಲವನ್ನು ಸರಳವಾಗಿ ತೆಗೆದುಕೊಳ್ಳುತ್ತಾನೆ. ಹಾಗೆಯೇ ಏನಾದ್ರೂ ಸಲಹೆ ನೀಡಿದರು ಅದನ್ನು ಸಹ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ಅವನಿಗೆ ನೀವು ಯಾರ್ಕರ್ ಬೌಲ್ ಮಾಡು ಅಂದರು ಮಾಡುತ್ತಾನೆ, ನಿಧಾನವಾಗಿ ಬೌಲ್ ಮಾಡಲು ಹೇಳಿ, ಅವನು ಅದನ್ನು ಮಾಡುತ್ತಾನೆ. ಅವನು ಒಬ್ಬ ಅದ್ಭುತ ಬೌಲರ್, ಅವನನ್ನು ಅನುಕೂಲಕ್ಕೆ ತಕ್ಕ ಹಾಗೆ ಬಳಕೆ ಮಾಡಬಹುದು ಎಂದು ನಟರಾಜನ್ ಬಗ್ಗೆ ಪಾಂಡ್ಯ ಮೆಚ್ಚುಗೆಯ ಮಾತಾಡಿದರು.