ಸಿಡ್ನಿ: ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದ ಫೀಲ್ಡಿಂಗ್ ವೇಳೆ ತೊಡೆಸಂದು ಸಮಸ್ಯೆಯಿಂದಾಗಿ ಮೈದಾನದಿಂದ ಹೊರ ನಡೆದಿದ್ದ ಡೇವಿಡ್ ವಾರ್ನರ್ ಈಗ ಮುಂದಿನ ಏಕದಿನ ಪಂದ್ಯ ಹಾಗೂ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಹಾಗೆಯೇ ಟಿ-20 ಸರಣಿಯಿಂದ ವೇಗಿ ಪ್ಯಾಟ್ ಕಮಿನ್ಸ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.
ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ತೊಡೆಸಂದು ಗಾಯದಿಂದಾಗಿ ಡೇವಿಡ್ ವಾರ್ನರ್ ಮೈದಾನದಿಂದ ಹೊರ ನಡೆದಿದ್ದರು. ಭಾರತದ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಶಿಖರ್ ಧವನ್ ಚೆಂಡನ್ನು ಮಿಡ್ - ಆಫ್ ಕಡೆಗೆ ಹೊಡೆದರು. ಅಲ್ಲೇ ಇದ್ದ ವಾರ್ನರ್ ಚೆಂಡನ್ನು ತಡೆಯಲು ಡೈವ್ ಮಾಡಿದ್ರು, ಈ ವೇಳೆ, ತೊಡೆಸಂದು ನೋವಿಗೆ ತುತ್ತಾಗಿದ್ದಾರು. ಕೂಡಲೇ ಮೈದಾನಕ್ಕೆ ಆಗಮಿಸಿದ ಆಸ್ಟ್ರೇಲಿಯಾದ ಫಿಸಿಯೋ, ವಾರ್ನರ್ ಅವರನ್ನು ಕರೆದೊಯ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ಏಕದಿನ ಪಂದ್ಯ ಹಾಗೂ ಟಿ -20 ಸರಣಿಯಿಂದ ವಾರ್ನರ್ ಅವರನ್ನ ಕೈ ಬಿಡಲಾಗಿದೆ ಎಂದು ತಿಳಿಸಿದೆ.